Airtel 5G: ಏರ್ಟೆಲ್​ನಿಂದ ಧಮಾಕ ಆಫರ್: ಅನ್ಲಿಮಿಟೆಡ್ 5G ಡೇಟಾ ಕೊಡುಗೆ: ಶಾಕ್ ಆದ ಜಿಯೋ

|

Updated on: Mar 18, 2023 | 12:08 PM

ಈಗ ಹಳ್ಳಿ-ಹಳ್ಳಿಗಳಲ್ಲೂ 5G ಕಲ್ಪಿಸಲು ಏರ್ಟೆಲ್-ಜಿಯೋ (Jio) ಕೆಲಸ ಮಾಡುತ್ತಿದೆ. 265 ಕ್ಕೂ ಅಧಿಕ ಪ್ರದೇಶಗಳಲ್ಲಿ 5ಜಿ ಲಭ್ಯವಾಗುವಂತೆ ಮಾಡಿರರುವ ಏರ್ಟೆಲ್ ಇದೀಗ ತನ್ನ ಬಳಕೆದಾರರಿಗೆ ಧಮಾಕ ಆಫರ್ ಒಂದನ್ನು ಘೋಷಣೆ ಮಾಡಿದೆ.

Airtel 5G: ಏರ್ಟೆಲ್​ನಿಂದ ಧಮಾಕ ಆಫರ್: ಅನ್ಲಿಮಿಟೆಡ್ 5G ಡೇಟಾ ಕೊಡುಗೆ: ಶಾಕ್ ಆದ ಜಿಯೋ
Airtel 5G
Follow us on

ಭಾರತದಲ್ಲಿ 5ಜಿ (5G) ಯುಗ ಆರಂಭವಾದಾಗಿನಿಂದ ಟೆಲಿಕಾಂ ಕಂಪನಿಗಳು ಬ್ಯುಸಿಯಾಗಿದೆ. ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ಟೆಲ್ (Bharti Airtel) ಪೈಪೋಟಿಗೆ ಬಿದ್ದಂತೆ ಭಾರತದ ನಗರಗಳಲ್ಲಿ 5ಜಿ ಸೇವೆಯನ್ನು ನೀಡುತ್ತಿದೆ. ಈಗ ಹಳ್ಳಿ-ಹಳ್ಳಿಗಳಲ್ಲೂ 5G ಕಲ್ಪಿಸಲು ಏರ್ಟೆಲ್-ಜಿಯೋ (Jio) ಕೆಲಸ ಮಾಡುತ್ತಿದೆ. 265 ಕ್ಕೂ ಅಧಿಕ ಪ್ರದೇಶಗಳಲ್ಲಿ 5ಜಿ ಲಭ್ಯವಾಗುವಂತೆ ಮಾಡಿರರುವ ಏರ್ಟೆಲ್ ಇದೀಗ ತನ್ನ ಬಳಕೆದಾರರಿಗೆ ಧಮಾಕ ಆಫರ್ ಒಂದನ್ನು ಘೋಷಣೆ ಮಾಡಿದೆ. ಏರ್ಟೆಲ್ ಚಂದಾದಾರರಿಗೆ ಈಗ ಅನಿಯಮಿತ 5G ಡೇಟಾವನ್ನು ಬಳಸುವ ಕೊಡುಗೆಯನ್ನು ಪರಿಚಯಿಲಾಗಿದೆ. ಇದು ಜಿಯೋ ಕಂಪನಿಗೆ ದೊಡ್ಡ ಹೊಡೆತಬಿದ್ದಂತಾಗಿದೆ.

ಈಗಾಗಲೇ ಭಾರ್ತಿ ಏರ್ಟೆಲ್ 5G ಡೇಟಾ ಬಳಕೆ ಮಾಡುವ ಆಫರ್‌ ಲಭ್ಯ ಮಾಡಿದ್ದು, ಗ್ರಾಹಕರು ಈ ಕೊಡುಗೆಯ ಪ್ರಯೋಜನವನ್ನು ಪಡೆಯಬಹುದು. ಈ ಆಫರ್ ನಿಮ್ಮದಾಗಿಸಲು ಚಂದಾದಾರರು 5G ಬೆಂಬಲಿತ ಫೋನ್‌ ಹಾಗೂ 5G ಲಭ್ಯ ಇರುವ ಪ್ರದೇಶದಲ್ಲಿ ಇರಬೇಕು. ಇದು ಎಲ್ಲ ಪ್ರಿಪೇಯ್ಡ್ ಮತ್ತು ಪೋಸ್ಟ್​ಪೇಯ್ಡ್ ಏರ್ಟೆಲ್ ಗ್ರಾಹಕರಿಗೆ ಲಭ್ಯವಿರುತ್ತದೆ. ಏರ್ಟೆಲ್​ನ 239 ರೂ. ಹಾಗೂ ಇದಕ್ಕಿಂತ ಅಧಿಕ ಮೊತ್ತದ ರಿಚಾರ್ಜ್‌ ಮಾಡುವ ಎಲ್ಲ ಬಳಕೆದಾರರು ಈ ಕೊಡುಗೆಯನ್ನು ಪ್ರಯೋಜನವನ್ನು ಪಡೆಯಬಹುದು.

Tech Tips: ಆನ್​ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಇಲ್ಲಿದೆ ಟಿಪ್ಸ್

ಇದನ್ನೂ ಓದಿ
iQOO Z7 5G: ರೋಚಕತೆ ಸೃಷ್ಟಿಸಿರುವ ಐಕ್ಯೂ Z7 5G ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗ: ಎಷ್ಟು ಗೊತ್ತೇ?
Tech Tips: ಎರಡು ಸ್ಮಾರ್ಟ್​ಫೋನ್​ನಲ್ಲಿ ಒಂದೇ ನಂಬರ್​ನ ವಾಟ್ಸ್​ಆ್ಯಪ್ ಅಕೌಂಟ್ ಬಳಸುವುದು ಹೇಗೆ?
WhatsApp New Feature: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್
Galaxy A54 5G: ಒಂದೇ ದಿನ ಎರಡು ಬೊಂಬಾಟ್ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್: ಯಾವುವು?, ಏನು ವಿಶೇಷತೆ?

265 ಕ್ಕೂ ಅಧಿಕ ಪ್ರದೇಶಗಳಲ್ಲಿ ಏರ್ಟೆಲ್ 5G:

ಇದೀಗ ಏರ್ಟೆಲ್ ಹೊಸದಾಗಿ 125 ನಗರಗಳಾದ್ಯಂತ ಪ್ರಾರಂಭಿಸುವುದರೊಂದಿಗೆ ಏರ್ಟೆಲ್ 5G ಲಭ್ಯವಿರುವ ಪ್ರದೇಶಗಳ ಸಂಖ್ಯೆ 265 ದಾಟಿದೆ. ಅಲ್ಲದೆ ಕೊಹಿಮಾ, ಇಟಾನಗರ್, ಐಜ್ವಾಲ್, ಗ್ಯಾಂಗ್ಟಾಕ್, ಸಿಲ್ಚಾರ್, ದಿಬ್ರುಗಢ್ ಮತ್ತು ಟಿನ್ಸುಕಿಯಾದಲ್ಲಿ ವಾಸಿಸುವ ಏರ್ಟೆಲ್ ಬಳಕೆದಾರರು ಈಗ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಉಚಿತವಾಗಿ ಬಳಸಬಹುದು ಎಂದು ಕಂಪನಿ ಹೇಳಿದೆ. ಏರ್ಟೆಲ್ 5G ಈ ನಗರಗಳಲ್ಲಿ ವಾಸಿಸುವ ಜನರು ತಮ್ಮ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಏರ್ಟೆಲ್ 4G ಗೆ ಹೋಲಿಸಿದರೆ 30 ಪಟ್ಟು ಹೆಚ್ಚಿನ ವೇಗವನ್ನು 5G ನೀಡುತ್ತದೆ ಎಂದು ಕಂಪನಿ ಹೇಳಿದೆ. 5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, ಶತಕೋಟಿ ಡಿವೈಸ್​ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ. ಜಿಯೋ 5G ಗಿಂತ ಭಿನ್ನವಾಗಿ ಏರ್ಟೆಲ್ ತನ್ನ 5G ಸೇವೆಗಳನ್ನು ಎಲ್ಲರಿಗೂ ನೀಡುತ್ತದೆ. ಆದ್ದರಿಂದ, ಬಳಕೆದಾರರು ಕನಿಷ್ಟ ರೀಚಾರ್ಜ್ ಯೋಜನೆಯನ್ನು ಪಡೆಯಬೇಕಾಗಿಲ್ಲ. ಬದಲಾಗಿ, ಏರ್‌ಟೆಲ್ 5G ಈಗಿರುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Sat, 18 March 23