ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ (Jio) ಹಾಗೂ ಭಾರ್ತಿ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರಿಯುತ್ತಲೇ ಇದೆ. ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿರುವ ಏರ್ಟೆಲ್ ತನ್ನ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಅಲ್ಲದೆ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿರುವ ಏರ್ಟಲ್ ತನ್ನ ಪ್ಲಾನ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ತನ್ನ ಚಂದಾದಾರರಿಗೆ ಅಧಿಕ ಡೇಟಾ ಪ್ರಯೋಜನಗಳ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯದಲ್ಲಿ ಕಡಿಮೆ ಬೆಲೆಗೆ ಪ್ರಿಪೇಯ್ಡ್ ಯೋಜನೆಗಳ ಆಯ್ಕೆ ನೀಡಿದೆ. ಈ ಪೈಕಿ ಏರ್ಟೆಲ್ ಈಗ ತನ್ನ ಅಗ್ಗದ ಯೋಜನೆಯೊಂದರಲ್ಲಿ ಭಾರೀ ಬದಲಾವಣೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಏರ್ಟೆಲ್ನಲ್ಲಿ ಅತಿ ಹೆಚ್ಚುನ ಜನರು ಉಪಯೋಗಿಸುತ್ತಿರುವ 265 ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್ ಪರಿಷ್ಕರಣೆ ಆಗಿದ್ದು, 28 ದಿನಗಳ ಬದಲಾಗಿ 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಎರಡು ದಿನಗಳ ವ್ಯಾಲಿಡಿಯನ್ನು ಹೆಚ್ಚಿಸಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1 GB ಹೈ ಸ್ಪೀಡ್ 4G ಡೇಟಾ ಲಭ್ಯವಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 45GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್‌ಎಂಎಸ್ ಸೇವೆಗಳು ಲಭ್ಯವಾಗಲಿದೆ. ಸದ್ಯಕ್ಕೆ ಆಯ್ದ ಬಳಕೆದಾರರಿಗೆ ಮಾತ್ರ ಈ ಯೋಜನೆ ಜಾರಿಯಲ್ಲಿದೆ.
ಇನ್ನು ಏರ್ಟೆಲ್ನ 109 ರೂ. ಯೋಜನೆಯು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ರೀಚಾರ್ಜ್‌ನೊಂದಿಗೆ ನೀವು 99 ರೂ. ಗಳ ಟಾಕ್-ಟೈಮ್ ಮತ್ತು 200 MB ಮೊಬೈಲ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ಕಟ್ ಆಗುತ್ತದೆ.
ಅಂತೆಯೆ 111 ರೂ. ಸ್ಮಾರ್ಟ್ ಪ್ಲಾನ್ ಕೂಡ ಏರ್ಟೆಲ್ ನೀಡಿದ್ದು, ಇದು 99 ರೂ. ಟಾಕ್-ಟೈಮ್ ಮತ್ತು 200MB ಮೊಬೈಲ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. 128 ರೂ. ಸ್ಮಾರ್ಟ್ ಯೋಜನೆಯು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸುತ್ತದೆ. ಹೆಚ್ಚುವರಿಯಾಗಿ, ಮೊಬೈಲ್ ಡೇಟಾಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ.
Published On - 1:45 pm, Sun, 17 July 22