ಮೊಬೈಲ್ ಪ್ರೀಪೇಯ್ಡ್ ಪ್ಲಾನ್ಗಳಲ್ಲೇ ಬೆಸ್ಟ್ ಆದಂಥವುಗಳಿಗಾಗಿ ಹುಡುಕುತ್ತಿದ್ದೀರಾ? 28 ದಿನಗಳಿಗಿಂತ ಹೆಚ್ಚಿನ ವ್ಯಾಲಿಡಿಟಿ ಇರಬೇಕು ಅಂದುಕೊಳ್ಳುತ್ತೀರಾ? ಇಲ್ಲಿದೆ ನೋಡಿ, ದಿನಕ್ಕೆ 1.5 ಜಿಬಿ ಡೇಟಾ ನೀಡುವ ಹಾಗೂ 56 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ಗಳಿವು. ಈ ಪ್ಲಾನ್ಗಳು 500 ರೂಪಾಯಿ ಒಳಗಿವೆ. ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ಐಡಿಯಾ (Vi) ಈ ಮೂರೂ ದಿನಕ್ಕೆ 1.5 ಜಿಬಿ ಡೇಟಾ ಪ್ಲಾನ್ ಜತೆಗೆ 56 ದಿನಗಳ ವ್ಯಾಲಿಡಿಟಿಯನ್ನು ರೂ. 399ಕ್ಕೆ ನೀಡುತ್ತಿದೆ. ಒಂದು ವೇಳೆ ಈ ಮೇಲೆ ತಿಳಿಸಿದಂಥ ಡೇಟಾ, ವ್ಯಾಲಿಡಿಟಿ ಬೇಕೆಂದರೆ ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ಐಡಿಯಾ ಈ ಪೈಕಿ ಒಂದನ್ನು ಆರಿಸಿಕೊಳ್ಳಬಹುದು.
ಆದರೆ, ಬಿಎಸ್ಎನ್ಎಲ್ನಿಂದ 399 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ಗೆ 1 ಜಿಬಿ ಡೇಟಾ ಮಾತ್ರ ನಿತ್ಯ ನೀಡುತ್ತಿದ್ದು, 80 ದಿನಗಳ ವ್ಯಾಲಿಡಿಟಿ ಇದೆ. ಈಗ ಏರ್ಟೆಲ್, ಜಿಯೋ, ಬಿಎಸ್ಎನ್ಎಲ್ ಮತ್ತು ವೊಡಾಫೋನ್ಐಡಿಯಾದಿಂದ ಡಬಲ್ ಡೇಟಾ ನೀಡಲಾಗುತ್ತಿದ್ದು, ನಿತ್ಯವೂ 3 ಜಿಬಿ ಡೇಟಾ, ಅರ್ಧದಷ್ಟು ವ್ಯಾಲಿಡಿಟಿಗೆ ಸಿಗುತ್ತದೆ. ದರ ಮಾತ್ರ ಅದೇ ಇರುತ್ತದೆ.
ಏರ್ಟೆಲ್ 399 ಪ್ರೀಪೇಯ್ಡ್ ಪ್ಲಾನ್
ಏರ್ಟೆಲ್ನ ಈ ಪ್ರೀಪೇಯ್ಡ್ ಆಫರ್ ನಿತ್ಯವೂ 1.5 ಜಿಬಿ ಡೇಟಾ ಒದಗಿಸುತ್ತದೆ. ಜತೆಗೆ ಅನಿಯಮಿತವಾದ ಕರೆ ಹಾಗೂ 56 ದಿನಗಳ ವ್ಯಾಲಿಡಿಟಿ ಇರುತ್ತದೆ. ಈ ಪ್ಲಾನ್ನಲ್ಲಿ ದಿನಕ್ಕೆ 100 ಎಸ್ಸೆಮ್ಮೆಸ್ ದೊರೆಯುತ್ತದೆ. ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಏರ್ಟೆಲ್ XStream ಮತ್ತು ವಿಂಕ್ ಮ್ಯೂಸಿಕ್ ಚಂದಾದಾರರಾಗಬಹುದು.
ಬಿಎಸ್ಎನ್ಎಲ್ 399 ಪ್ರೀಪೇಯ್ಡ್ ಪ್ಲಾನ್
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನಿಂದಲೂ 399 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ ಇದ್ದು, ಪ್ರತಿ ನಿತ್ಯ 1 ಜಿಬಿ ಹೈಸ್ಪೀಡ್ ಡೇಟಾ ದೊರೆಯುತ್ತದೆ. ಒಂದು ಸಲ ಆ ಡೇಟಾ ಪೂರ್ತಿ ಬಳಕೆಯಾದ ಮೇಲೆ ವೇಗವು 80Kbpsಗೆ ಇಳಿಕೆ ಆಗುತ್ತದೆ. ಇನ್ನು ವ್ಯಾಲಿಡಿಟಿ 80 ದಿನ ಇರುತ್ತದೆ. ಅನಿಯಮಿತವಾದ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಸಿಗುತ್ತದೆ. ಇನ್ನು ಬಿಎಸ್ಎನ್ಎಲ್ ಉಚಿತ ಟ್ಯೂನ್ ಮತ್ತು ಲೋಕ್ಧುನ್ ಅಥವಾ ಬಿಎಸ್ಎನ್ಎಲ್ ಟಿವಿ ಕಂಟೆಂಟ್ ಬಳಕೆ ಕೂಡ ಮಾಡಬಹುದು.
ಜಿಯೋ 399 ರೂಪಾಯಿ ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ರೀಚಾರ್ಜ್ ಪ್ಲಾನ್ಗೆ ಪ್ರತಿ ನಿತ್ಯ 1.5 ಜಿಬಿ ಡೇಟಾ ಹಾಗೂ ಜತೆಗೆ ಅನಿಯಮಿತ ಕರೆ ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ಹಾಗೂ ಕಾಂಪ್ಲಿಮೆಂಟರಿಯಾಗಿ 56 ದಿನಕ್ಕೆ ಜಿಯೋ ಅಪ್ಲಿಕೇಷನ್ಗಳ ಸಬ್ಸ್ಕ್ರಿಪ್ಷನ್ ದೊರೆಯುತ್ತದೆ.
Vi 399 ರೂ. ಪ್ರೀಪೇಯ್ಡ್ ಪ್ಲಾನ್
ಏರ್ಟೆಲ್ ಮತ್ತು ಜಿಯೋ ರೀತಿಯಲ್ಲೇ ಇದು ಕೂಡ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ 100 ಎಸ್ಸೆಮ್ಮೆಸ್ ನೀಡುತ್ತದೆ. ವೀಕೆಂಡ್ ಡೇಟಾ ಅನುಕೂಲಗಳಿದ್ದು, Vi ಮೂವೀಸ್ ಮತ್ತು ಟೀವಿಯನ್ನು ನೋಡಬಹುದು. ಆ್ಯಪ್ ಮೂಲಕ ರೀಚಾರ್ಜ್ ಮಾಡಿದರೆ 5 ಜಿಬಿ ಎಕ್ಸ್ಟ್ರಾ ಡೇಟಾ ಸಿಗುತ್ತದೆ.
ಏರ್ಟೆಲ್ ವರ್ಸಸ್ ಬಿಎಸ್ಎನ್ಎಲ್ ವರ್ಸಸ್ Vi ಪ್ಲೀಪೇಯ್ಡ್ ಪ್ಲಾನ್- ದಿನಕ್ಕೆ 3ಜಿಬಿ ಡೇಟಾ- 500 ರೂ.ಗೂ ಕಡಿಮೆಗೆ
ಜಿಯೋ
ಜಿಯೋದ 349 ರೂಪಾಯಿಯ ಪ್ಲಾನ್ ದಿನಕ್ಕೆ 3ಜಿಬಿ ಡೇಟಾ ನೀಡುತ್ತದೆ. ಮತ್ತು ಅನಿಯಮಿತವಾಗಿ ನೆಟ್- ಕಾಲಿಂಗ್ ಸೌಲಭ್ಯವನ್ನು 28 ದಿನಗಳ ಅವಧಿಗೆ ನೀಡುತ್ತದೆ. ಅನಿಯಮಿತವಾಗಿ ದೇಶೀಯ ಕರೆಗಳನ್ನು ಕೂಡ ಮಾಡಬಹುದು. ಕಾಂಪ್ಲಿಮೆಂಟರಿಯಾಗಿ ಜಿಯೋ ಅಪ್ಲಿಕೇಷನ್ಗಳ ಸಬ್ಸ್ಕ್ರಿಪ್ಷನ್ ಕೂಡ ದೊರೆಯುತ್ತದೆ.
ಏರ್ಟೆಲ್
ಏರ್ಟೆಲ್ನ 398 ರೂಪಾಯಿ ಪ್ರೀಪೇಯ್ಡ್ ಪ್ಲಾನ್ನಲ್ಲಿ ದಿನಕ್ಕೆ 3ಜಿಬಿ ಡೇಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಅನಿಯಮಿತವಾದ ಕರೆ ಹಾಗೂ ದಿನಕ್ಕೆ 100 ಎಸ್ಸೆಮ್ಮೆಸ್ ದೊರೆಯುತ್ತದೆ. ಹೆಚ್ಚುವರಿಯಾಗಿ Airtel Xstream ಪ್ರೀಮಿಯಂ ಚಂದಾದಾರಿಕೆ, ವಿಂಕ್ ಮ್ಯೂಸಿಕ್ ಮತ್ತು ಷಾ ಅಕಾಡೆಮಿ ಚಂದಾದಾರಿಕೆ ಸಿಗುತ್ತದೆ. ಉಚಿತ ಹಲೋ ಟ್ಯೂನ್, ಫಾಸ್ಟ್ಯಾಗ್ ವಹಿವಾಟಿಗೆ 150 ರೂ. ಕ್ಯಾಶ್ಬ್ಯಾಕ್ ಸಿಗುತ್ತದೆ. ಆದರೆ ಈ ಪ್ಲಾನಿಂಗ್ನಲ್ಲಿ ಸ್ಟ್ರೀಮಿಂಗ್ ಅನುಕೂಲ ಇಲ್ಲ.
ಬಿಎಸ್ಎನ್ಎಲ್
ಇದು 398 ರೂಪಾಯಿಯ ಪ್ರೀಪೇಯ್ಡ್, ಪ್ರಮೋಷನಲ್ ಆಫರ್. ಅನಿಯಮಿತವಾದ ಡೇಟಾ ಇದ್ದು, ಯಾವುದೇ FUP ಮಿತಿ ಇಲ್ಲ. ಅನಿಯಮಿತ ಕರೆ ಹಾಗೂ ಜತೆಗೆ 100 ಎಸ್ಸೆಮ್ಮೆಸ್ ದೊರೆಯುತ್ತದೆ ಮತ್ತು 30 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಈ ಪ್ಲಾನ್ನಲ್ಲಿ ಹೊರಹೋಗುವ ಪ್ರೀಮಿಯಂ ನಂಬರ್ಸ್, ಅಂತರರಾಷ್ಟ್ರೀಯ ನಂಬರ್ಗಳು ಮತ್ತು ಇತರ ಚಾರ್ಜ್ ಆಗುವ ಸಣ್ಣ ಕೋಡ್ಗಳಿಗೆ ಅನ್ವಯ ಆಗಲ್ಲ.
Vi
ಇದು 401 ರೂಪಾಯಿಯ ಪ್ಲಾನ್. ಪ್ರತಿ ನಿತ್ಯ 3GB ಡೇಟಾ 28 ದಿನಗಳ ಅವಧಿಗೆ ಸಿಗುತ್ತದೆ. ಪ್ರತಿ ನಿತ್ಯ 100 ಎಸ್ಸೆಮ್ಮೆಸ್ ಸಿಗುತ್ತದೆ. 16ಜಿಬಿ ಹೆಚ್ಚುವರಿಯಾಗಿ ಡೇಟಾ ಮತ್ತು ಡಿಸ್ನಿ+ ಹಾಟ್ಸ್ಟಾರ್ 1 ವರ್ಷದ VIP ಸಬ್ಸ್ಕ್ರಿಪ್ಷನ್ ದೊರೆಯುತ್ತದೆ. ಹೈಸ್ಪೀಡ್ ರಾತ್ರಿ ವೇಳೆ ಇಂಟರ್ನೆಟ್, ವಾರಾಂತ್ಯದ ರೋಲ್ಓವರ್ ಡೇಟಾ ಅನುಕೂಲ, Vi ಮೂವೀಸ್ ಮತ್ತು ಟಿವಿ ಕೂಡ ಸಿಗುತ್ತದೆ.
ಇದನ್ನೂ ಓದಿ: ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ
(Airtel Vs BSNL Vs Jio Vs Vi prepaid plans under Rs 500 explained here. Which one is the best to use?)
Published On - 4:37 pm, Fri, 7 May 21