ಅಮೆಜಾನ್ ಇಂಡಿಯಾ (Amazon India) ತನ್ನ ಗ್ರಾಹಕರಿಗಾಗಿ ನಾಲ್ಕನೇ ಆವೃತ್ತಿಯ ಆಹಾರ ಮೇಳವನ್ನು (Amazon Great Foodie Fest) ಆರಂಭಿಸಿದ್ದು, ಸೆಪ್ಟೆಂಬರ್ 11ರವರೆಗೆ ಈ ಮೇಳ ನಡೆಯಲಿದೆ. ಈಗಾಗಲೇ ಪ್ರಾರಂಭವಾಗಿರುವ ಆಹಾರಮೇಳವು ಒಟ್ಟು 10 ದಿನಗಳ ಕಾಲ ಇರಲಿದೆ. ಈ ಆಹಾರ ಮೇಳದ ಅಂಗವಾಗಿ ಗ್ರಾಹಕರಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಡೊಮಿನೋಸ್ (Dominos), ಮೆಕ್‌ಡೊನಾಲ್ಡ್ಸ್, ಬರ್ಗರ್ ಕಿಂಗ್, ಸಬ್‌ವೇ, ಬೆಹ್ರೂಜ್ ಬಿರಿಯಾನಿ, ಫ್ರೆಶ್‌ಮೆನು, ಬಾಸ್ಕಿನ್ ರಾಬಿನ್ಸ್ ಮತ್ತು ಮೇಘನಾ ಫುಡ್ಸ್, ಎಂಪೈರ್ ರೆಸ್ಟೋರೆಂಟ್, ಒನೆಸ್ಟಾ ಸೇರಿದಂತೆ 6 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಅಮೆಜಾನ್‌ನಲ್ಲಿವೆ. ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ನೀವು ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದು.
ಕೆಲವು ಪ್ರಮುಖ ರೆಸ್ಟೋರೆಂಟ್‌ಗಳಲ್ಲಿ ನೀವು ಆರ್ಡರ್ ಮಾಡುವ ಆಹಾರದ ಮೇಲೆ ಶೇ. 60 ರಷ್ಟು ರಿಯಾಯಿತಿ ಪಡೆಯಬಹುದು. ಜೊತೆಗೆ, ವಿಶೇಷ ದಿನಗಳಲ್ಲಿ ನಿಮ್ಮ ಮೊದಲ ಆರ್ಡರ್‌ಗೆ 150 ರೂ. ಕ್ಯಾಶ್‌ಬ್ಯಾಕ್ ಪಡೆಯುವ ಕೊಡುಗೆ ನೀಡಲಾಗಿದೆ. ಅಷ್ಟೇ ಅಲ್ಲದೆ, ನಿಮ್ಮ ಆಹಾರದ ಆರ್ಡರ್‌ಗಳ ಮೇಲೆ 120 ರೂ. ವರೆಗೆ ಬಹುಮಾನ ಗೆಲ್ಲುವ ಅವಕಾಶವೂ ಇದೆ.
ಅಮೆಜಾನ್‌ನ ಅಪ್ಲಿಕೇಷನ್ ಮುಖ ಪುಟದಲ್ಲಿ ಫುಡ್ ಐಕಾನ್ ಕ್ಲಿಕ್ ಮಾಡುವ ಮೂಲಕ ಈ ಎಲ್ಲಾ ರಿಯಾಯಿತಿ ಹಾಗೂ ಕೊಡುಗೆಗಳನ್ನು ಪಡೆಯಬಹುದು. ಮತ್ತೊಂದು ವಿಶೇಷವೆಂದರೆ, ಗ್ರಾಹಕರು ಆಹಾರ ಆರ್ಡರ್ ಮಾಡುವ ಜೊತೆಗೆ ಬಹುಮಾನ ಗೆಲ್ಲಲು ಡೈಲಿ ವೀಲ್ ಆಫ್ ಫಾರ್ಚೂನ್, ರೂಲೆಟ್ ಅಥವಾ ಜಾಕ್‌ಪಾಟ್‌ನಂತಹ ಅತ್ಯಾಕರ್ಷಕ ಆಟಗಳನ್ನು ಆಡಬಹುದು.
ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್:
ಪ್ರಮುಖ ಇ–ಕಾಮರ್ಸ್ ತಾಣ ಅಮೆಜಾನ್ ತನ್ನ ವಾರ್ಷಿಕ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭಿಸುವುದಾಗಿ ತಿಳಿಸಿದೆ. ಈ ಸೇಲ್ ಮೇಳವು ಇದೇ ಅಕ್ಟೋಬರ್ 3 ರಂದು ಆರಂಭವಾಗಲಿದೆ ಎಂದು ಹೇಳಲಾಗಿದೆ. ಹಬ್ಬದ ಸಂದರ್ಭದಲ್ಲಿ ಈ ಸೇಲ್ ಹೆಚ್ಚು ಆಕರ್ಷಕ ಎನಿಸಲಿದ್ದು, ಎಲ್ಲ ಬಗೆಯ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಅಮೆಜಾನ್ ತನ್ನ ಈ ಬಿಗ್ ಸೇಲ್‌ನಲ್ಲಿ ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ದೊಡ್ಡ ರಿಯಾಯಿತಿ ಕೊಡುಗೆಗಳನ್ನು ನೀಡುವ ಸಂಭವವಿದೆ. ಜೊತೆಗೆ ಕೆಲವು ಬ್ಯಾಂಕ್ಗಳು ಕೂಡ ಕೈಜೋಡಿಸಲಿದ್ದು, ಅದರಲ್ಲಿ HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ, ಗ್ರಾಹಕರು ಹೆಚ್ಚುವರಿ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
Published On - 1:43 pm, Mon, 5 September 22