AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Great Indian Sale: ಅಮೆಜಾನ್ ಫೆಸ್ಟಿವಲ್ ಸೇಲ್​ನಲ್ಲಿ 50,000 ರೂ. ಒಳಗೆ ಲಭ್ಯವಿದೆ ಅತ್ಯುತ್ತಮ ಲ್ಯಾಪ್​ಟಾಪ್​ಗಳು

Amazon Great Indian Festival Sale: ಅಮೆಜಾನ್​ನಲ್ಲಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ ಸೇಲ್​ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿ (Smart TV) ಸೇರಿದಂತೆ ಹಲವು ಗ್ಯಾಜೆಟ್ಸ್‌ಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ನೀಡಲಿದೆ.

Amazon Great Indian Sale: ಅಮೆಜಾನ್ ಫೆಸ್ಟಿವಲ್ ಸೇಲ್​ನಲ್ಲಿ 50,000 ರೂ. ಒಳಗೆ ಲಭ್ಯವಿದೆ ಅತ್ಯುತ್ತಮ ಲ್ಯಾಪ್​ಟಾಪ್​ಗಳು
Laptop Amazon Great Indian Festival
TV9 Web
| Edited By: |

Updated on:Oct 04, 2021 | 12:31 PM

Share

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ ಸೇಲ್‌ (Amazon Great Indian Festival sale) ಅಕ್ಟೋಬರ್ 3 ರಿಂದ ಆರಂಭವಾಗಿದೆ. ದಸರಾ (Dasara) ಹಾಗೂ ದೀಪಾವಳಿ (Depavali 2021) ಹಬ್ಬದ ಪ್ರಯುಕ್ತ ಅಮೆಜಾನ್ ಸಂಸ್ಥೆಯು ಈ ಮೇಳವನ್ನು ಹಮ್ಮಿಕೊಂಡಿದ್ದು, ಆನ್​ಲೈನ್ ಪ್ರಿಯರು ಪ್ರಾಡಕ್ಟ್​ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ನೀವು ಹೊಸ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್‌ಗಳನ್ನು ರಿಯಾಯಿತಿ ದರದಲ್ಲಿ ಇಲ್ಲಿ ಖರೀದಿಸಬಹುದು. ಪ್ರಮುಖವಾಗಿ ಸ್ಮಾರ್ಟ್‌ಫೋನ್‌ಗಳು (Smartphone), ಲ್ಯಾಪ್‌ಟಾಪ್‌ (Laptop), ಸ್ಮಾರ್ಟ್‌ಟಿವಿ (Smart TV) ಸೇರಿದಂತೆ ಹಲವು ಗ್ಯಾಜೆಟ್ಸ್‌ಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ನೀಡಲಿದೆ. ಹಲವು ಲ್ಯಾಪ್‌ಟಾಪ್‌ಗಳ ಮೇಲೆ ಶೇ. 40 ರಷ್ಟು ಬಂಪರ್ ಡಿಸ್ಕೌಂಟ್‌ ನೀಡಲಾಗಿದೆ.

ಹೆಚ್‌ಪಿ 14 (2021) ಲ್ಯಾಪ್‌ಟಾಪ್‌ ಅಮೆಜಾನ್‌ ಗ್ರೇಟ್ ಇಂಡಯನ್ ಫೆಸ್ಟಿವಲ್ ಸೇಲ್‌ನಲ್ಲಿ 40% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರ ಬೆಲೆ 44,344 ರೂ. ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ 11ನೇ ತಲೆಮಾರಿನ ಇಂಟೆಲ್‌ ಕೋರ್‌ i3 ಪ್ರೊಸೆಸರ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್ ಟಾಪ್ ಇಂಟರ್‌ಬಿಲ್ಟ್‌ ಅಲೆಕ್ಸಾ ವಾಯ್ಸ್‌ ಅನ್ನು ಹೊಂದಿದೆ. ಇದು 14 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 250 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ವಿಂಡೋಸ್‌ 10 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದು Intel UHD ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್‌ 40,000 ರೂ ಬೆಲೆಗೆ ಲಭ್ಯವಾಗಲಿದೆ.ಹೆಚ್‌ಪಿ ಪೆವಿಲಿಯನ್‌(2021)

ಹೆಚ್‌ಪಿ ಪೆವಿಲಿಯನ್‌(2021) ಲ್ಯಾಪ್‌ಟಾಪ್‌ ಕೂಡ ಬಂಪರ್ ಡಿಸ್ಕೌಂಟ್​ಗೆ ಮಾರಾಟವಾಗುತ್ತಿದೆ. 11ನೇ ತಲೆಮಾರಿನ ಇಂಟೆಲ್‌ ಕೋರ್ i5 ಪ್ರೊಸೆಸರ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್ ತೆಳುವಾದ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 16GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಜೊತೆಗೆ ಐರಿಸ್ Xe ಗ್ರಾಫಿಕ್ಸ್ ಹೊಂದಿದ್ದು, ವಿಂಡೋಸ್‌ 10 ಮೂಲಕ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್‌ ಇಂಟರ್‌ಬಿಲ್ಟ್‌ ಅಲೆಕ್ಸಾ ಹೊಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ಇದರ ಜೊತೆಗೆ ಒನ್‌ಪ್ಲಸ್‌, ಶವೋಮಿ, ರಿಯಲ್‌ ಮಿ, ಒಪ್ಪೋ, ವಿವೋ ಮತ್ತು ಆ್ಯಪಲ್ ನಂತಹ ಉನ್ನತ ಬ್ರ್ಯಾಂಡ್‌ಗಳಿಂದ ನೀವು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ರ ಮಾರಾಟದಲ್ಲಿ 40 ಶೇಕಡಾ ರಿಯಾಯಿತಿ. ಇನ್ನೂ ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ರಲ್ಲಿ 80 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಲಭ್ಯವಾಗುತ್ತಿದೆ.

Cyber Crime: ಸಾಮಾಜಿಕ ಜಾಲತಾಣದ ಮೂಲಕ ಮೋಸದ ಬಲೆ; ಎಚ್ಚರ ತಪ್ಪಿದರೆ ಅಪಾಯ ಖಚಿತ!

WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಹಿಡನ್ ಫೀಚರ್ ಅನ್ನು ನೀವು ಬಳಸಿದ್ದೀರಾ?: ಒಮ್ಮೆ ಚೆಕ್ ಮಾಡಿ

(Amazon Great Indian Festival Sale 2021 Here is the top deals on laptops under Rs 50000)

Published On - 12:18 pm, Mon, 4 October 21

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ