ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2022 (Amazon Great Indian Festival Sale) ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಸೇಲ್ ಅಡಿಯಲ್ಲಿ ಹ್ಯಾಪಿನೆಸ್ ಅಪ್ಗ್ರೇಡ್ ಡೇಸ್ (Amazon Happiness Upgrade Days Sale) ನಡೆಯುತ್ತಿದ್ದು ಕೆಲ ಪ್ರಾಡಕ್ಟ್ಗಳಿಗೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಆರ್ಬಿಎಲ್ ಬ್ಯಾಂಕ್, ಸಿಟಿ ಬ್ಯಾಂಕ್, ಒನ್ಕಾರ್ಡ್ ಬ್ಯಾಂಕ್ ಮತ್ತು ರೂಪೆ ಬಳಕೆದಾರರಿಗೆ ಈ ಸೇಲ್‌ನಲ್ಲಿ ಶೇ. 10 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರ ನಡುವೆ ಸ್ಮಾರ್ಟ್ಫೋನ್ಗಳಿಗೂ ಬಂಪರ್ ಆಫರ್ ನೀಡಲಾಗಿದೆ. ಮುಖ್ಯವಾಗಿ 5ಜಿ ಬೆಂಬಲ ಪಡೆದುಕೊಂಡಿರುವ ಕೆಲ ಟಾಪ್ ಮೊಬೈಲ್ಗಳು (5G Smartphone) 20,000 ರೂ. ಒಳಗೆ ಮಾರಾಟ ಆಗುತ್ತಿದೆ. ಅವುಗಳು ಯಾವುವು ಎಂಬುದನ್ನು ನೋಡೋಣ.
ಒಪ್ಪೋ A74 5G: ಈ ಸ್ಮಾರ್ಟ್‌ಫೋನ್ ಅಮೆಜಾನ್ ಹ್ಯಾಪಿನೆಸ್ ಅಪ್ಗ್ರೇಡ್ ಡೇಸ್ ಸೇಲ್‌ನಲ್ಲಿ ಕೇವಲ 14,990 ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದು 6GB RAM ಜೊತೆಗೆ 128GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಆಸಕ್ತ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು 12,400 ರೂ. ವರೆಗಿನ ಹೆಚ್ಚುವರಿ ರಿಯಾಯಿತಿಗಾಗಿ ವಿನಿಮಯ ಮಾಡಿಕೊಳ್ಳಬಹುದು. ಇದು 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಪೂರ್ಣ HD+ LCD ಪರದೆಯನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ 480 SoC ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ.
ಟೆಕ್ನೋ ಪೋವ 5G ಸ್ಮಾರ್ಟ್‌ಫೋನ್ ಮೇಲೆ ಅಮೆಜಾನ್ನಲ್ಲಿ ಶೇ. 47 ರಷ್ಟು ರಿಯಾಯಿತಿ ನೀಡಲಾಗಿದೆ. ಇದನ್ನು 15,299 ರೂ. ಗೆ ನಿಮ್ಮದಾಗಿಸಬಹುದು. 8GB RAM ಅನ್ನು 128GB ಸಂಗ್ರಹದೊಂದಿಗೆ ಬರುತ್ತದೆ. 12,400 ರೂ. ವರೆಗೆ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗಿದೆ. ಈ ಹ್ಯಾಂಡ್‌ಸೆಟ್ 120Hz ರಿಫ್ರೆಶ್ ದರದೊಂದಿಗೆ 6.9-ಇಂಚಿನ ಪೂರ್ಣ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು MediaTek ಡೈಮೆನ್ಸಿಟಿ 900 SoC ನಿಂದ ಚಾಲಿತವಾಗಿದೆ.
ರೆಡ್ಮಿ ನೋಟ್ 11T 5G ಅಮೆಜಾನ್ ಹಬ್ಬದ ಮಾರಾಟದ ಸಮಯದಲ್ಲಿ ಶೇ. 24 ರಷ್ಟು ರಿಯಾಯಿತಿ ಹೊಂದಿದ್ದು 15,999 ರೂ. ಗೆ ಮಾರಾಟ ಆಗುತ್ತಿದೆ. 12,400 ರೂ. ವರೆಗೆ ವಿನಿಮಯ ಕೊಡುಗೆಯನ್ನು ಸಹ ಪಡೆಯಬಹುದು. ಇದು 90Hz ಅಡಾಪ್ಟಿವ್ ರಿಫ್ರೆಶ್ ದರದೊಂದಿಗೆ 6.6-ಇಂಚಿನ ಪೂರ್ಣ HD+ ಡಿಸ್ ಪ್ಲೇಯನ್ನು ಹೊಂದಿದೆ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್ ಕೇವಲ 16,999 ರೂ. ಗೆ ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವುದರಿಂದ ಗ್ರಾಹಕರು 12,400 ರೂ. ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದು 6.6-ಇಂಚಿನ ಪೂರ್ಣ HD+ ಇನ್ಫಿನಿಟಿ V ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಆಕ್ಟಾ-ಕೋರ್ Exynos 1280 SoC ಪ್ರೊಸೆಸರ್ ನೀಡಲಾಗಿದೆ.
ರಿಯಲ್ ಮಿ ನಾರ್ಜೊ 50 ಪ್ರೊ 5G ಸ್ಮಾರ್ಟ್‌ಫೋನ್ ಅಮೆಜಾನ್ ಹ್ಯಾಪಿನೆಸ್ ಅಪ್ಗ್ರೇಡ್ ಡೇಸ್ ಸೇಲ್‌ನಲ್ಲಿ ಕೇವಲ 17,999 ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದು 6.4-ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ದರವನ್ನು ಹೊಂದಿದೆ. MediaTek ಡೈಮೆನ್ಸಿಟಿ 920 SoC ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು 5,000mAh ಬ್ಯಾಟರಿಯನ್ನು ನೀಡಲಾಗಿದೆ.