AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Great Summer Sale: ಅಮೆಜಾನ್ ಗ್ರೇಟ್ ಸಮ್ಮರ್ ಡೇಸ್ ಸೇಲ್: ಸ್ಮಾರ್ಟ್​ಫೋನ್​ಗಳ ಮೇಲೆ ಬಂಪರ್ ಆಫರ್

ಒನ್​ಪ್ಲಸ್ 11 5G ಸ್ಮಾರ್ಟ್​ಫೋನ್​ನ8GB RAM + 128GB ಸ್ಟೋರೇಜ್ ಅಮೆಜಾನ್ ಸೇಲ್​ನಲ್ಲಿ ಕೇವಲ 56,999 ಕ್ಕೆ ಲಭ್ಯವಿದೆ. ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು 19,950 ರೂ. ವರೆಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು.

Amazon Great Summer Sale: ಅಮೆಜಾನ್ ಗ್ರೇಟ್ ಸಮ್ಮರ್ ಡೇಸ್ ಸೇಲ್: ಸ್ಮಾರ್ಟ್​ಫೋನ್​ಗಳ ಮೇಲೆ ಬಂಪರ್ ಆಫರ್
Amazon Great Summer Sale
Vinay Bhat
|

Updated on: May 04, 2023 | 2:45 PM

Share

ಪ್ರಸಿದ್ಧ ಇ ಕಾಮರ್ಸ್​ ತಾಣಗಳಲ್ಲಿ ಭರ್ಜರಿ ಮೇಳಗಳು ಆರಂಭವಾಗುತ್ತಿದೆ. ಫ್ಲಿಪ್​ಕಾರ್ಟ್​ನಲ್ಲಿ (Flipkart) ನಾಳೆಯಿಂದ ಬಿಗ್‌ ಸೇವಿಂಗ್‌ ಡೇಸ್‌ ಸೇಲ್ ಶುರುವಾಗಲಿದೆ. ಇದೀಗ ಈ ಸೇಲ್​ಗಿಂತ ಒಂದು ದಿನ ಮುಂಚಿತವಾಗಿ ಅಮೆಜಾನ್ ತನ್ನ ತಾಣದಲ್ಲಿ ಗ್ರೇಟ್ ಸಮ್ಮರ್ ಡೇಸ್ ಸೇಲ್ (Amazon Great Summer Sale) ಆಯೋಜನೆ ಮಾಡಿದೆ. ಇಂದಿನಿಂದ ಪ್ರೈಮ್ ಬಳಕೆದಾರರಿಗೆ ಈ ಸೇಲ್ ಲೈವ್ ಆಗಿದ್ದು ಐದು ದಿನಗಳ ಕಾಲ ನಡೆಯಲಿದೆ. ಮೇ 8ಕ್ಕೆ ಕೊನೆಗೊಳ್ಳಲಿದೆ. ಮಾರಾಟದ ಸಮಯದಲ್ಲಿ ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್‌ ಆಫರ್‌ಗಳನ್ನು ನೀಡಲಾಗಿದೆ. ನೀವು ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್​ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್​ನಲ್ಲಿ ಮೊಬೈಲ್​ಗಳ ಮೇಲೆ ಸೇರಿದಂತೆ ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ಅಮೆಜಾನ್ ಮುಂದಾಗಿದೆ.

ಐಫೋನ್ 14: ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆದ ಐಫೋನ್ 14 ಸ್ಮಾರ್ಟ್ ಫೋನ್ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಈ ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಇದರ 12GB RAM ಆಯ್ಕೆಯ ಫೋನ್ ಈಗ ಕೇವಲ 67,999 ರೂ. ಗೆ ಖರೀದಿಸಬಹುದು. ಇದರ ಮೂಲ ಬೆಲೆ 79,900 ರೂ. ಆಗಿದೆ. ಆಫರ್ ನಲ್ಲಿ ನೀವು ಬರೋಬ್ಬರಿ 11,901 ರೂ. ಗಳ ಆಕರ್ಷಕ ಡಿಸ್ಕೌಂಟ್ ಪಡೆಯಬಹುದು. idu ಸೂಪರ್ ರೆಟಿನಾ 6.1 ಇಂಚಿನ XDR OLED ಡಿಸ್‌ಪ್ಲೇ ಹೊಂದಿದ್ದು, A15 ಬಯೋನಿಕ್ ಚಿಪ್ಸೆಟ್ ​ನಿಂದ ಕಾರ್ಯನಿರ್ವಹಿಸುತ್ತದೆ. ಎರಡೂ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು ಇ-ಸಿಮ್ ಆಯ್ಕೆಯನ್ನು ನೀಡಲಾಗಿದೆ.

WhatsApp Ban: ಮಾರ್ಚ್ ತಿಂಗಳಲ್ಲಿ ಭಾರತದ 47 ಲಕ್ಷ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ

ಇದನ್ನೂ ಓದಿ
Image
Infinix Smart 7 HD: ಬೆಲೆ ಕೇವಲ 5,999 ರೂ.: ಇಂದಿನಿಂದ ಭಾರತದಲ್ಲಿ ಈ ಹೊಸ ಫೋನ್ ಖರೀದಿಗೆ ಲಭ್ಯ
Image
UPI Lite: ಪೇಟಿಎಂ ಬಳಿಕ ಫೋನ್​ಪೇನಲ್ಲೂ ಲೈಟ್; ಯುಪಿಐ ವಹಿವಾಟು ಕಡಿಮೆಗೊಳಿಸುವ ಕಾಲ ಬಂತಾ?
Image
Instagram, Google: ಇನ್‌ಸ್ಟಾಗ್ರಾಮ್, ಗೂಗಲ್​​ನಲ್ಲಿ ಮಕ್ಕಳ ಲೈಂಗಿಕ ನಿಂದನೆ ವರದಿ ಹೆಚ್ಚಳ, ಸೂಕ್ತ ಕ್ರಮ ಅಗತ್ಯ ಎಂದ ಕೇಂದ್ರ
Image
Moto G13: ಮೋಟೋ G13 ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಅತಿ ಕಡಿಮೆ ಬೆಲೆಗೆ ಖರೀದಿಸಿ

ಒನ್​ಪ್ಲಸ್ 11 5G: ಒನ್​ಪ್ಲಸ್ 11 5G ಸ್ಮಾರ್ಟ್​ಫೋನ್​ನ8GB RAM + 128GB ಸ್ಟೋರೇಜ್ ಅಮೆಜಾನ್ ಸೇಲ್​ನಲ್ಲಿ ಕೇವಲ 56,999 ಕ್ಕೆ ಲಭ್ಯವಿದೆ. ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು 19,950 ರೂ. ವರೆಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು. ಇದಲ್ಲದೆ, ICICI ಕ್ರೆಡಿಟ್ ಕಾರ್ಡ್ EMI ವಹಿವಾಟಿನ ಮೇಲೆ 1000 ರೂ. ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದು 6.7 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಇದರಲ್ಲಿರುವ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್‌ ನೀಡಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ತಕ್ಕಂತೆ 100W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S20 FE 5G: ಈ ಸ್ಮಾರ್ಟ್‌ಫೋನ್​ನ 8GB RAM+128GB ಸಂಗ್ರಹಣೆ ಅಮೆಜಾನ್ ಸಮ್ಮರ್ ಸೇಲ್​ನಲ್ಲಿ 30,499 ರೂ. ಗೆ ಮಾರಾಟ ಕಾಣುತ್ತಿದೆ. ಗ್ರಾಹಕರು ಹಳೆಯ ಸ್ಮಾರ್ಟ್‌ಫೋನ್ ಅನ್ನು 20,450 ರೂ. ವರೆಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಬೆಲೆಯನ್ನು ಕಡಿಮೆ ಮಾಡಬಹುದು. ಇದಲ್ಲದೆ, ICICI ಕ್ರೆಡಿಟ್ ಕಾರ್ಡ್ EMI ವಹಿವಾಟಿನ ಮೇಲೆ 1000 ರೂ. ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದು 6.5-ಇಂಚಿನ ಫುಲ್‌-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಎಕ್ಸಿನೋಸ್ 990 SoC ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ವೈಡ್-ಆಂಗಲ್ ಲೆನ್ಸ್ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು ಡ್ಯುಯಲ್ ಫೇಸ್ ಡಿಟೆಕ್ಷನ್ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ. 4,500mAh ಸಾಮರ್ಥ್ಯದ ಬ್ಯಾಟರಿ, 15W ಫಾಸ್ಟ್ ಚಾರ್ಜಿಂಗ್ ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಐಕ್ಯೂ ನಿಯೋ 7 5G: ಈ ಸ್ಮಾರ್ಟ್​ಫೋನ್​ನ 8GB RAM + 128GB ಸ್ಟೋರೇಜ್ ಆಯ್ಕೆ 28,999 ರೂ. ಗೆ ಮಾರಾಟ ಕಾಣುತ್ತಿದೆ. ನಿಮ್ಮ ಬಳಿ ಹಳೆಯ ಸ್ಮಾರ್ಟ್‌ಫೋನ್ ಇದ್ದರೆ 19,950 ರೂ. ವರೆಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಬೆಲೆಯನ್ನು ಕಡಿಮೆ ಮಾಡಬಹುದು. ಇದಲ್ಲದೆ, ICICI ಕ್ರೆಡಿಟ್ ಕಾರ್ಡ್ EMI ವಹಿವಾಟಿನ ಮೇಲೆ 1000 ರೂ. ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದು 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8200+ SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್​ನ OIS ಕ್ಯಾಮೆರಾ ನೀಡಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 120W ಫ್ಲ್ಯಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ