Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI Lite: ಪೇಟಿಎಂ ಬಳಿಕ ಫೋನ್​ಪೇನಲ್ಲೂ ಲೈಟ್; ಯುಪಿಐ ವಹಿವಾಟು ಕಡಿಮೆಗೊಳಿಸುವ ಕಾಲ ಬಂತಾ?

PhonePe activates UPI Lite: ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್ ಎರಡೂ ಕೂಡ ಬಹುತೇಕ ಒಂದೇ ರೀತಿಯ ಫೀಚರ್ ಹೊಂದಿವೆಯಾದರೂ ಯುಪಿಐ ಲೈಟ್​ನಲ್ಲಿ 200 ರೂ ಒಳಗಿನ ವಹಿವಾಟು ಮಾತ್ರ ಸಾಧ್ಯ. ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್​ನಿಂದಾಗಿ ಬ್ಯಾಂಕುಗಳ ಮೇಲೆ ಅನಗತ್ಯ ಹೊರೆ ಕಡಿಮೆ ಆಗಲು ಸಾಧ್ಯವಿದೆ. ಹಣದ ವಹಿವಾಟೂ ಕೂಡ ಸುಗಮಗೊಳ್ಳಲಿದೆ.

UPI Lite: ಪೇಟಿಎಂ ಬಳಿಕ ಫೋನ್​ಪೇನಲ್ಲೂ ಲೈಟ್; ಯುಪಿಐ ವಹಿವಾಟು ಕಡಿಮೆಗೊಳಿಸುವ ಕಾಲ ಬಂತಾ?
ಯುಪಿಐ ಪೇಮೆಂಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2023 | 5:12 PM

ನವದೆಹಲಿ: ಫೋನ್​ಪೇ ಸಂಸ್ಥೆ (PhonePe) ತನ್ನ ಪೇಮೆಂಟ್ ಆ್ಯಪ್​ನಲ್ಲಿ ಯುಪಿಐ ಲೈಟ್ ಫೀಚರ್ (UPI Lite) ಅನ್ನು ಅಳವಡಿಸಿದ್ದು, ಇದು ಸಾರ್ವಜನಿಕ ಬಳಕೆಗೆ ಚಾಲನೆಗೊಂಡಿದೆ. ಪೇಟಿಎಂ ಸಂಸ್ಥೆ ಮಾರ್ಚ್ ತಿಂಗಳಲ್ಲಿ ಯುಪಿಐ ಲೈಟ್ ಫೀಚರ್ ಅನ್ನು ಲೈವ್​ಗೊಳಿಸಿತ್ತು. ಪೇಮೆಂಟ್ ಪ್ಲಾಟ್​ಫಾರ್ಮ್​ನಲ್ಲಿರುವ ವ್ಯಾಲಟ್ ಜೊತೆಗೆ ಯುಪಿಐ ಲೈಟ್ ಕೂಡ ಇರಲಿದೆ. ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್ ಎರಡೂ ಕೂಡ ಬಹುತೇಕ ಒಂದೇ ರೀತಿಯ ಫೀಚರ್ ಹೊಂದಿವೆಯಾದರೂ ಯುಪಿಐ ಲೈಟ್​ನಲ್ಲಿ 200 ರೂ ಒಳಗಿನ ವಹಿವಾಟು ಮಾತ್ರ ಸಾಧ್ಯ. ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್​ನಿಂದಾಗಿ ಬ್ಯಾಂಕುಗಳ ಮೇಲೆ ಅನಗತ್ಯ ಹೊರೆ ಕಡಿಮೆ ಆಗಲು ಸಾಧ್ಯವಿದೆ. ಹಣದ ವಹಿವಾಟೂ ಕೂಡ ಸುಗಮಗೊಳ್ಳಲಿದೆ.

ಯುಪಿಐ ಲೈಟ್ ಯಾಕೆ ಬೇಕು?

ಪೇಟಿಎಂ ಮತ್ತು ಫೋನ್​ಪೇಯಂಥ ಯುಪಿಐ ಆ್ಯಪ್​ಗಳಲ್ಲಿ ಯುಪಿಐ ಲೈಟ್ ಫೀಚರ್ ಅನ್ನು ಆ್ಯಕ್ಟಿವೇಟ್ ಮಾಡಬಹುದು. ಯುಪಿಐ ವ್ಯವಸ್ಥೆಯನ್ನು ರೂಪಿಸಿದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಸಂಸ್ಥೆಯೇ ಯುಪಿಐ ಲೈಟ್ ಅನ್ನೂ ತಂದಿರುವುದು. ಇದು ಆನ್ಡಿವೈಸ್ ಫೀಚರ್ ಆಗಿದೆ. ಪೇಟಿಎಂ ಮತ್ತು ಫೋನ್​ಪೇನಲ್ಲಿರುವ ವ್ಯಾಲಟ್​ಗೆ ಇದನ್ನು ಹೋಲಿಸಬಹುದು. 200 ರೂ ಒಳಗಿನ ಮೊತ್ತದ ವಹಿವಾಟುಗಳಿಗೆ ಯುಪಿಐ ಲೈಟ್ ಅನ್ನು ಬಳಸಬಹುದು. ಯಾವುದೇ ಸಮಯದಲ್ಲಿ ಗರಿಷ್ಠ 200 ರೂಳಗಿನ ಮೊತ್ತ ಯುಪಿಐ ಲೈಟ್​ನಲ್ಲಿರಿಸಬಹುದು. ನಾವು ಪೇಮೆಂಟ್ ಮಾಡುವಾಗ, ಮೊತ್ತವು 200 ರೂ ಒಳಗಿದ್ದರೆ ಯುಪಿಐ ಲೈಟ್ ಅನ್ನು ಡೀಫಾಲ್ಟ್ ಆಯ್ಕೆಯಾಗಿ ಮಾಡಬೇಕು ಎಂಬ ನಿಯಮ ಇದೆ.

ಇದನ್ನೂ ಓದಿGreat Returns: 10,000 ರೂ ಎಸ್​ಐಪಿ 23 ವರ್ಷದಲ್ಲಿ 1.14 ಕೋಟಿ ರೂ; ಗಮನ ಸೆಳೆದ ಹೈಬ್ರಿಡ್ ಮ್ಯೂಚುವಲ್ ಫಂಡ್

ಪೇಮೆಂಟ್ ಆ್ಯಪ್​ನಲ್ಲಿ ಪೇಮೆಂಟ್ ಮಾಡಲು ಮೂರು ಅಯ್ಕೆಗಳು ಸಿಗುತ್ತವೆ. ಒಂದು ನೇರವಾಗಿ ಬ್ಯಾಂಕ್​ನಿಂದ ಹಣ ವರ್ಗಾವಣೆ ಮಾಡುವುದು, ಇನ್ನೊಂದು ವ್ಯಾಲಟ್ ಫೀಚರ್, ಮತ್ತೊಂದು ಯುಪಿಐ ಲೈಟ್ ಫೀಚರ್. ವಹಿವಾಟು ಮಾಡುವಾಗ ವ್ಯಾಲಟ್ ಮತ್ತು ಲೈಟ್​ನಲ್ಲಿರುವ ಹಣ ಸಾಕಾಗದಿದ್ದಾಗ ಬ್ಯಾಂಕ್​ನಿಂದ ಹಣ ರವಾನೆ ಮಾಡಬೇಕಾಗುತ್ತದೆ. ಇದರಿಂದ ಬ್ಯಾಂಕ್​ಗಳಿಗೆ ತುಸು ಹೊರೆಯಾಗುತ್ತದೆ. ಬ್ಯಾಂಕ್ ಮೂಲಕ ವಹಿವಾಟು ಮಾಡುವಾಗ ಪಿನ್ ನಂಬರ್ ನಮೂದಿಸಬೇಕಾಗುತ್ತದೆ. ಅದೇ ಯುಪಿಐ ವ್ಯಾಲಟ್ ಮತ್ತು ಯುಪಿಐ ಲೈಟ್ ಮೂಲಕ ವಹಿವಾಟು ಮಾಡುವುದಾದರೆ ಬ್ಯಾಂಕ್ ಖಾತೆಯ ಪಾಸ್​ವರ್ಡ್ ಹಾಕುವ ಅವಶ್ಯಕತೆ ಇರುವುದಿಲ್ಲ.

ವ್ಯಾಲಟ್ ಅಥವಾ ಲೈಟ್ ಎಂಬುದು ಒಂದು ರೀತಿಯಲ್ಲಿ ನೀವು ಹಣ ಇಟ್ಟುಕೊಳ್ಳುವ ಪರ್ಸ್ ಇದ್ದಂತೆ. ಒಂದಿಷ್ಟು ಹಣವನ್ನು ಪ್ಯಾಕೆಟ್​ಗೆ ಹಾಕಿ, ಅದನ್ನು ವೆಚ್ಚಕ್ಕೆ ಬಳಸುತ್ತೀರಿ. ಅದೇ ರೀತಿ, ಬ್ಯಾಂಕ್ ಖಾತೆಯಿಂದ ಮೊದಲೇ ಒಂದಿಷ್ಟು ಹಣವನ್ನು ವ್ಯಾಲಟ್ ಅಥವಾ ಲೈಟ್​ಗೆ ಹಾಕಿದರೆ ಆಗ ಪದೇ ಪದೇ ಬ್ಯಾಂಕ್ ವ್ಯವಸ್ಥೆಯನ್ನು ಬಳಸುವ ಅವಶ್ಯಕತೆ ಬೀಳುವುದಿಲ್ಲ.

ಇದನ್ನೂ ಓದಿYouTube Money: ಯೂಟ್ಯೂಬ್​ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ

ನಿಮ್ಮ ತಿಂಗಳ ವೆಚ್ಚಕ್ಕೆ ಎಷ್ಟು ಬೇಕೋ ಅಷ್ಟೂ ಹಣ ವ್ಯಾಲಟ್​ಗೆ ಹಾಕಿಬಿಡಿ

ಒಂದು ಪೇಮೆಂಟ್ ಆ್ಯಪ್​ನಲ್ಲಿ ಪ್ರೀಪೇಟ್ ಇನ್ಸ್​ಟ್ರುಮೆಂಟ್ ಆಗಿ ವ್ಯಾಲಟ್ ಮತ್ತು ಯುಪಿಐ ಲೈಟ್ ಇವೆ. ಪೇಟಿಎಂ ಮತ್ತು ಫೋನ್​ಪೇ, ಈ ಎರಡರಲ್ಲೂ ಈ ಫೀಚರ್​ಗಳಿವೆ. ಯುಪಿಐ ಲೈಟ್​ಗೆ 2 ಸಾವಿರ ರೂವರೆಗೂ ಹಣ ತುಂಬಿಸಬಹುದು. ವ್ಯಾಲಟ್​ಗೆ ಎಷ್ಟು ಬೇಕಾದರೂ ಹಣ ರವಾನಿಸಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ