Amazon: ಅಮೆಜಾನ್​​ನಲ್ಲಿ ಕೇವಲ 740 ರೂ.ಗೆ Nokia G20 ಸ್ಮಾರ್ಟ್​ಫೋನ್ ಖರೀದಿಸಿ: ಇಂದಿನಿಂದ ಸೇಲ್ ಆರಂಭ

| Updated By: Vinay Bhat

Updated on: Jul 15, 2021 | 1:50 PM

Nokia G20: ಅಮೆಜಾನ್ ಆಕರ್ಷಕ ಆಫರ್​ಗಳ ಮೂಲಕ ನೋಕಿಯಾ G20 ಫೋನನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಅತ್ಯುತ್ತಮ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಬ್ಯಾಕಪ್ ಅನ್ನು ಈ ಫೋನ್ ಹೊಂದಿದೆ.

Amazon: ಅಮೆಜಾನ್​​ನಲ್ಲಿ ಕೇವಲ 740 ರೂ.ಗೆ Nokia G20 ಸ್ಮಾರ್ಟ್​ಫೋನ್ ಖರೀದಿಸಿ: ಇಂದಿನಿಂದ ಸೇಲ್ ಆರಂಭ
Nokia G20
Follow us on

ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ (Nokia) ಕಂಪೆನಿ ನಂತರದಲ್ಲಿ ಚೀನೀ ಸ್ಮಾರ್ಟ್​ಫೋನ್ (Smartphone) ಬ್ರ್ಯಾಂಡ್​ಗಳ ಹೊಡೆತಕ್ಕೆ ಸಿಲುಕಿ ಈಗಲೂ ಮೇಲೇರಲು ಪ್ರಯತ್ನಿಸುತ್ತಿದೆ. ಆದರೂ ಎವರ್‌ಗ್ರೀನ್‌ ಬ್ರ್ಯಾಂಡ್ ಎನಿಸಿಕೊಂಡಿರುವ ನೋಕಿಯಾ ಇತ್ತೀಚೆಗಷ್ಟೆ ನೋಕಿಯಾ G20 (Nokia G20) ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌ ಮಾಡಿತ್ತು. ಇಂದಿನಿಂದ ಈ ಫೋನ್ ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್​ನಲ್ಲಿ (Amazon) ಖರೀದಿಗೆ ಲಭ್ಯವಾಗುತ್ತಿದೆ.

ಅಮೆಜಾನ್ ಆಕರ್ಷಕ ಆಫರ್​ಗಳ ಮೂಲಕ ನೋಕಿಯಾ G20 ಸ್ಮಾರ್ಟ್​ಫೋನ್ ಅನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಅತ್ಯುತ್ತಮ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಬ್ಯಾಕಪ್ ಹೊಂದಿರುವ ನೋಕಿಯಾ G20 ಒಂದು ಮಾದರಿಯಲ್ಲಷ್ಟೆ ಲಭ್ಯವಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಈ ಫೋನಿನ ಬೆಲೆ 12,999 ರೂ. ಆಗಿದೆ.

ಇಂದು ಸೇಲ್ ಕಾಣುತ್ತಿರುವ ಹಿನ್ನಲೆಯಲ್ಲಿ ಆಫರ್​ಗಳನ್ನು ನೀಡಲಾಗಿದ್ದು, 500 ರೂ. ಡಿಸ್ಕೌಂಟ್​ನಲ್ಲಿ ಸಿಗಲಿದೆ. ಇದು ನೋಕಿಯಾ ಇಂಡಿಯಾ ವೆಬ್​ಸೈಟ್​ನಲ್ಲೂ ಲಭ್ಯವಿದೆ. ಪ್ರೈಮ್ ಸದಸ್ಯತ್ವ ಹೊಂದಿರುವವರು ಐಸಿಸಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಕ್ಯಾಶ್​​ಬ್ಯಾಕ್ ಆಫರ್ ನೀಡಲಾಗಿದೆ. ಅಷ್ಟೇ ಅಲ್ಲದೆ ವಿಶೇಷವಾಗಿ 12,250 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ನೀಡಲಾಗಿದ್ದು, ನಿಮ್ಮ ಹಳೆಯ ಸ್ಮಾರ್ಟ್​ಫೋನ್ ಅಷ್ಟೂ ಮೊತ್ತಕ್ಕೆ ಸೇಲ್ ಆದರೆ ನೋಕಿಯಾ G20 ಯನ್ನು ಕೇವಲ 740 ರೂ. ಗೆ ನಿಮ್ಮದಾಗಿಸಬಹುದು.

ಏನು ವಿಶೇಷತೆ?:

ನೋಕಿಯಾ G20 ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G35 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 11 ಬೆಂಬಲ ಪಡೆದುಕೊಂಡಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌-ಸೆನ್ಸಾರ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

5050mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಹೊಂದಿದ್ದು, 10W ಯುಎಸ್‌ಬಿ-ಸಿ ಚಾರ್ಜರ್‌ನೊಂದಿಗೆ ಬರುತ್ತದೆ. ಸಿಂಗಲ್‌ ಚಾರ್ಜ್‌ನಲ್ಲಿ ಮೂರು ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ. ಇದಲ್ಲದೆ ಬಯೋಮೆಟ್ರಿಕ್ ಪರಿಶೀಲನೆಗಾಗಿ ಪವರ್ ಕೀ-ಆರೋಹಿತವಾದ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

ನೀವು WhatsApp Web ಬಳಸುತ್ತಿದ್ದೀರಾ?: ಹಾಗಾದ್ರೆ ಒಮ್ಮೆ ಈ ಟ್ರಿಕ್ ಫಾಲೋ ಮಾಡಿನೋಡಿ

ಸ್ಯಾಮ್​​ಸಂಗ್​ನಿಂದ ಮತ್ತೊಂದು ಭರ್ಜರಿ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಫೋನ್: ಮಾಹಿತಿ ಸೋರಿಕೆ

(Amazon Nokia G20 Goes on Sale in India via Amazon here is the Price and best offers)

Published On - 1:07 pm, Thu, 15 July 21