AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

65W ಫಾಸ್ಟ್​ ಚಾರ್ಜಿಂಗ್ ಜೊತೆಗೆ ಆಕರ್ಷಕ ಫೀಚರ್: ಒಪ್ಪೋದಿಂದ ಎರಡು 5G ಸ್ಮಾರ್ಟ್​ಫೋನ್ ರಿಲೀಸ್: ಬೆಲೆ?

65Wನ ವೇಗದ ಚಾರ್ಜಿಂಗ್ ಬೆಂಬಲದ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದ ಒಪ್ಪೋ ರೆನೋ 6 5G (Oppo Reno 6) ಮತ್ತು ಒಪ್ಪೋ ರೆನೋ 6 ಪ್ರೊ 5G ಫೋನ್ ಇಂದು ಮಧ್ಯಾಹ್ನ 3 ಗಂಟೆಗೆ ಭಾರತದಲ್ಲಿ ಅನಾವರಣಗೊಂಡಿದೆ.

65W ಫಾಸ್ಟ್​ ಚಾರ್ಜಿಂಗ್ ಜೊತೆಗೆ ಆಕರ್ಷಕ ಫೀಚರ್: ಒಪ್ಪೋದಿಂದ ಎರಡು 5G ಸ್ಮಾರ್ಟ್​ಫೋನ್ ರಿಲೀಸ್: ಬೆಲೆ?
Oppo Reno 6 5G
TV9 Web
| Edited By: |

Updated on: Jul 14, 2021 | 4:30 PM

Share

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಆಕರ್ಷಕ ಫೀಚರ್​ಗಳುಳ್ಳ ಫೋನನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಒಪ್ಪೋ (Oppo) ಕಂಪೆನಿ ಇಂದು ಭಾರತದಲ್ಲಿ ಎರಡು ಹೊಸ ಮೊಬೈಲ್ ಅನ್ನು ಲಾಂಚ್ ಮಾಡಿದೆ. ತನ್ನ ರೆನೋ ಸರಣಿಯಲ್ಲಿ ಒಪ್ಪೋ ರೆನೋ 6 5G (Oppo Reno 6) ಮತ್ತು ಒಪ್ಪೋ ರೆನೋ 6 ಪ್ರೊ 5G ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಿದೆ.

65Wನ ವೇಗದ ಚಾರ್ಜಿಂಗ್ ಬೆಂಬಲದ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದ ಈ ಎರಡೂ ಫೋನ್ ಇಂದು ಮಧ್ಯಾಹ್ನ 3 ಗಂಟೆಗೆ ಭಾರತದಲ್ಲಿ ಅನಾವರಣಗೊಂಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡುವುದಾದರೆ…

ಒಪ್ಪೋ ರೆನೋ 6 5G:

ಒಪ್ಪೋ ರೆನೋ 6 5G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಿ ಲಭ್ಯವಿದೆ. 8GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಫೋನಿನ ಬೆಲೆ 29,990 ರೂ. ಆಗಿದೆ. ಜುಲೈ 29 ರಂದು ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ರೆನೋ 6 ಸೇಲ್ ಕಾಣಲಿದೆ.

ಇದು 6.43-ಇಂಚಿನ ಫುಲ್‌-ಹೆಚ್‌ಡಿ +ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 11 ಆಧಾರಿತ ಕಲರ್ ಓಎಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನೂ ವಿಶೇಷವಾಗಿ ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್‌ ಅನ್ನು ಒಳಗೊಂಡಿದೆ.

ಒಪ್ಪೋ ರೆನೋ 6 ಪ್ರೊ 5G:

ಒಪ್ಪೋ ರೆನೋ 6 ಪ್ರೊ ಸ್ಮಾರ್ಟ್‌ಫೋನ್‌ ಕೂಡ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. 12GB RAM ಮತ್ತು 256GB ಸ್ಟೋರೆಜ್ ಸಾಮರ್ಥ್ಯದ ಈ ಫೋನಿನ ಬೆಲೆ 39,990 ರೂ. ನಿಗದಿ ಮಾಡಲಾಗಿದೆ. ಇದು ಜುಲೈ 20 ರಿಂದ ಖರೀದಿಗೆ ಸಿಗಲಿದೆ. ಹೆಚ್​ಡಿಎಫ್​ಸಿ ಬ್ಯಾಂಕ್ ಮೂಲಕ ಈ ಎರಡೂ ಮೊಬೈಲ್ ಕೊಂಡುಕೊಂಡರೆ 4,000 ರೂ. ಕ್ಯಾಶ್​ಬ್ಯಾಕ್ ಆಫರ್ ನೀಡಲಾಗಿದೆ.

ಈ ಫೋನ್ 6.55-ಇಂಚಿನ ದೊಡ್ಡ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದು 12GB RAM ವರೆಗೆ ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು ಕೂಡ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 65W ಫಾಸ್ಟ್ ಚಾರ್ಜಿಂಗ್‌ ಬೆಂಬಲಿಸಲಿದೆ.

iPhone ಕೊಂಡುಕೊಳ್ಳಲು ಇದೇ ಬೆಸ್ಟ್​ ಟೈಮ್: Amazonನಲ್ಲಿ ಬಂಪರ್ ಡಿಸ್ಕೌಂಟ್​ಗೆ iPhone 12

Google: ಗೂಗಲ್​​ ಕಂಪೆನಿಗೆ ಬಿತ್ತು 4392 ಕೋಟಿ ರೂ. ಹೊಸ ದಂಡ; ಸಾಲಾಗಿ ಬೀಳುತ್ತಿರುವ ದಂಡಕ್ಕೆ ಹೊಸ ಸೇರ್ಪಡೆ

(Oppo Reno 6 5G Reno 6 Pro 5G With 65W Fast Charging Launched in India Price Specifications here)