iPhone ಕೊಂಡುಕೊಳ್ಳಲು ಇದೇ ಬೆಸ್ಟ್​ ಟೈಮ್: Amazonನಲ್ಲಿ ಬಂಪರ್ ಡಿಸ್ಕೌಂಟ್​ಗೆ iPhone 12

ಈ ಮೇಳದಲ್ಲಿ ಐಫೋನ್ 12 ಮೂಲಬೆಲೆಗಿಂತ ಬರೋಬ್ಬರಿ 9,000 ರೂ. ರಿಯಾಯಿತಿ ದರದಲ್ಲಿ ಸಿಗುತ್ತಿದೆ. ಇದಿಷ್ಟೇ ಅಲ್ಲದೆ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಖರೀದಿ ಮಾಡಿದರೆ 6,000 ರೂ. ಗಳವರೆಗೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ.

iPhone ಕೊಂಡುಕೊಳ್ಳಲು ಇದೇ ಬೆಸ್ಟ್​ ಟೈಮ್: Amazonನಲ್ಲಿ ಬಂಪರ್ ಡಿಸ್ಕೌಂಟ್​ಗೆ iPhone 12
iPhone 12
Follow us
TV9 Web
| Updated By: Vinay Bhat

Updated on: Jul 14, 2021 | 3:53 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ (Amazon) ಸಂಸ್ಥೆ ಗ್ರಾಹಕರಿಗೆ ಒಂದಲ್ಲಾ ಒಂದು ಹೊಸ ಹೊಸ ಆಫರ್​ಗಳನ್ನು ನೀಡುತ್ತಲೇ ಇರುತ್ತದೆ. ಪ್ರಮುಖವಾಗಿ ಡಿಸ್ಕೌಂಟ್​ನಲ್ಲಿ ಸ್ಮಾರ್ಟ್​ಫೋನ್​ಗಳನ್ನು (Smartphone) ಮಾರಾಟ ಮಾಡುವುದರಲ್ಲಿ ಅಮೆಜಾನ್ ಹೆಚ್ಚು ಪ್ರಸಿದ್ದಿ ಪಡೆದಿದೆ. ಸದ್ಯ ಅಮೆಜಾನ್ ಸಂಸ್ಥೆ ಆ್ಯಪಲ್ ಡೇಸ್ ಸೇಲ್ (Apple Days Sale) ಆಯೋಜನೆ ಮಾಡಿದ್ದು, ಆಕರ್ಷಕ ರಿಯಾಯಿತಿಗೆ ಐಫೋನ್​ಗಳು (iPhone) ದೊರೆಯುತ್ತಿದೆ.

ಅಮೆಜಾನ್​ನಲ್ಲಿ ಈಗಾಗಲೇ ಆ್ಯಪಲ್ ಡೇಸ್ ಸೇಲ್​ ಆರಂಭವಾಗಿದ್ದು, ಜುಲೈ 17 ಕೊನೆಯ ದಿನವಾಗಿದೆ. ಹೀಗಾಗಿ ಐಪೋನ್ ಕೊಂಡುಕೊಳ್ಳಬೇಕು ಎಂದು ಕಾದುಕುಳಿತವರಿಗೆ ಇದೇ ಸೂಕ್ತ ಸಮಯ. ಪ್ರಮುಖವಾಗಿ ಐಫೋನ್ 12 ಮೇಲೆ ಬಂಪರ್ ಡಿಸ್ಕೌಂಟ್ ನೀಡಲಾಗಿದೆ.

ಈ ಮೇಳದಲ್ಲಿ ಐಫೋನ್ 12 ಮೂಲಬೆಲೆಗಿಂತ ಬರೋಬ್ಬರಿ 9,000 ರೂ. ರಿಯಾಯಿತಿ ದರದಲ್ಲಿ ಸಿಗುತ್ತಿದೆ. ಇದಿಷ್ಟೇ ಅಲ್ಲದೆ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಖರೀದಿ ಮಾಡಿದರೆ 6,000 ರೂ. ಗಳವರೆಗೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಈ ಫೋನಿನ ಮೂಲಬೆಲೆ 79,900 ರೂ. ಆಗಿದ್ದು, ಆ್ಯಪಲ್ ಡೇಸ್ ಪ್ರಯುಕ್ತ ಆಫರ್​ನಲ್ಲಿ 70,900 ರೂ. ಗೆ ಲಭ್ಯವಾಗುತ್ತಿದೆ.

ಐಫೋನ್ 12 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್  ಪ್ಲೇಯನ್ನು ಹೊಂದಿದೆ. ಇದಲ್ಲದೆ 460 ಪಿಪಿ ಯಲ್ಲಿ 2532 × 1170-ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದರ ಪರದೆಯ ಮೇಲೆ ಸೆರಾಮಿಕ್ ಶೀಲ್ಡ್ ನೀಡಲಾಗಿದ್ದು, ಡ್ರಾಪ್-ಕಾರ್ಯಕ್ಷಮತೆಯನ್ನು 4 ಪಟ್ಟು ಹೆಚ್ಚಿಸುತ್ತದೆ. ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಫ್ರಂಟ್ ಕ್ಯಾಮೆರಾ ನೈಟ್ ಮೋಡ್‌ನ ಬೆಂಬಲವನ್ನು ಹೊಂದಿದ್ದರೆ, ಫೋಟೋಗಳಿಗಾಗಿ ಸ್ಮಾರ್ಟ್ ಎಚ್‌ಡಿಆರ್ 3 ಹೊಂದಿದೆ.

ಹಾಗೆಯೇ ಆ್ಯಪಲ್ ಡೇಸ್ ಸೇಲ್‌ನಲ್ಲಿ ಕೆಲವು ಹಳೆಯ ಐಫೋನ್‌ಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ. ಐಫೋನ್ 12 ಜೊತೆಗೆ ಐಫೋನ್ 11, ಐಫೋನ್ ಎಕ್ಸ್‌ಆರ್, ಐಫೋನ್ ಎಕ್ಸ್, ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್, ಐಫೋನ್ 8 ಮುಂತಾದ ಫೋನ್‌ಗಳು ಕೂಡ ಭರ್ಜರಿ ಡಿಸ್ಕೌಂಟ್​ನಲ್ಲಿ ಸಿಗುತ್ತಿದೆ.

ಅಮೆಜಾನ್ ಪ್ರೈಮ್ ಡೇ ಗೆ ದಿನಗಣನೆ:

ಅಮೆಜಾನ್ ಪ್ರೈಮ್ ಇಂಡಿಯಾ ತನ್ನ 5ನೇ ವಾರ್ಷಿಕೋತ್ಸವವನ್ನು ಜುಲೈ 26 ರಂದು ಆಚರಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಪ್ರೈಮ್ ಡೇ ಸೇಲ್ ನಡೆಸಲಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದ ಗ್ರಾಹಕರು ಇದರಿಂದ ಭಾರೀ ಲಾಭವನ್ನು ಗಳಿಸಲಿದ್ದಾರೆ. ಅಮೆಜಾನ್  ಟ್ವೀಟ್ ಮೂಲಕ ಈ ಸೇಲ್ ಬಗ್ಗೆಅಧಿಕೃತ ಘೋಷಣೆ ಮಾಡಿದೆ. ಅಮೆಜಾನ್‌ನ ಈ ಸೇಲ್ ಜುಲೈ 26 ರಿಂದ ಜುಲೈ 27 ರವರೆಗೆ ನಡೆಯಲಿದೆ.

Google: ಗೂಗಲ್​​ ಕಂಪೆನಿಗೆ ಬಿತ್ತು 4392 ಕೋಟಿ ರೂ. ಹೊಸ ದಂಡ; ಸಾಲಾಗಿ ಬೀಳುತ್ತಿರುವ ದಂಡಕ್ಕೆ ಹೊಸ ಸೇರ್ಪಡೆ

65W ಸೂಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ Oppo Reno 6, 6 Pro ಇಂದು ಭಾರತದಲ್ಲಿ ಲಾಂಚ್

(Amazon Apple days sale iPhone 12 available with a huge discount here is the price offer)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ