AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Airtel ಗ್ರಾಹಕರು ಫುಲ್ ಖುಷ್: ಈ ಪ್ಲಾನ್ ಹಾಕಿಸಿಕೊಂಡರೆ ಒಂದು ವರ್ಷದವರೆಗೆ ನೋ ಟೆನ್ಶನ್

ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಏರ್ಟೆಲ್ ಹೊಸ ಪ್ರಿಪೇಯ್ಡ್‌ ಪ್ಲಾನ್ ಬಿಡುಗಡೆ ಮಾಡಿದೆ.

Airtel ಗ್ರಾಹಕರು ಫುಲ್ ಖುಷ್: ಈ ಪ್ಲಾನ್ ಹಾಕಿಸಿಕೊಂಡರೆ ಒಂದು ವರ್ಷದವರೆಗೆ ನೋ ಟೆನ್ಶನ್
ಏರ್‌ಟೆಲ್‌ 399 ರೂ. ಪ್ಲ್ಯಾನ್: ಏರ್​ಟೆಲ್​ 399 ರೂ. ಪ್ರಿಪೇಯ್ಡ್ ಪ್ಲ್ಯಾನ್​ನಲ್ಲೂ ಪ್ರತಿದಿನ 1.5 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯವಿದೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು. ಆದರೆ ಇದರ ವಾಲಿಡಿಟಿ 56 ದಿನಗಳು ಎಂಬುದು ವಿಶೇಷ.
TV9 Web
| Updated By: Vinay Bhat|

Updated on: Jul 14, 2021 | 5:56 PM

Share

ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಜಿಯೋ (Jio) ಓಟವನ್ನು ತಡೆಯಲು ಏರ್ಟೆಲ್ (Airtel) ಹರಸಾಹಸ ಪಡುತ್ತಿದೆ. ಜಿಯೋಕ್ಕೆ ಪೈಪೋಟಿ ನೀಡಲು ಆಕರ್ಷಕ ಆಫರ್​ಗಳಿರುವ ಹೊಸ ಹೊಸ ಪ್ಲಾನ್​ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಪೈಕಿ ಇತ್ತೀಚೆಗಷ್ಟೆ ಪರಿಚಯಿಸಿದ ಒಂದು ವರ್ಷದ ಹೊಸ ಪ್ರಿಪೇಯ್ಡ್ ಪ್ಲಾನ್ (Prepaid Plan) ಸಾಕಷ್ಟು ಮಂದಿ ನೆಚ್ಚಿಕೊಂಡಿದ್ದಾರೆ. ಆ ಪ್ಲಾನ್ ಯಾವುದು? ಏನೆಲ್ಲಾ ಆಫರ್ ಎಂಬ ಕುರಿತ ಮಾಹಿತಿ ಇಲ್ಲಿದೆ.

ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಏರ್ಟೆಲ್ ಹೊಸ ಪ್ರಿಪೇಯ್ಡ್‌ ಪ್ಲಾನ್ ಬಿಡುಗಡೆ ಮಾಡಿದೆ. ಆ ಪೈಕಿ ಏರ್ಟೆಲ್​ನ 2498 ರೂ. ವಾರ್ಷಿಕ ಪ್ರಿಪೇಯ್ಡ್‌ ಪ್ಲಾನ್ ಹೆಚ್ಚಿನವರು ಉಪಯೋಗಿಸುತ್ತಿದ್ದಾರೆ.

ಈ ಪ್ಲಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೆ ಯಾವುದೇ ನೆಟವರ್ಕ್​ಗೆ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಉಚಿತವಾಗಿ ಲಭ್ಯವಿದೆ. ಹಾಗೆಯೇ ಹೆಚ್ಚುವರಿಯಾಗಿ ಹೆಲೋ ಟ್ಯೂನ್, ಏರ್‌ಟೆಲ್‌ ಎಕ್ಸ್‌ಟ್ರೀಮ್ ಸೇವೆಗಳು ದೊರೆಯುತ್ತವೆ.

ಇದರ ಜೊತೆಎಗೆ ಮತ್ತೊಂದು 2698 ರೂ. ವಿನ ಪ್ರಿಪೇಯ್ಡ್‌ ಪ್ಲಾನ್ ಕೂಡ ಒಂದು ವರ್ಷ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್‌ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100ಎಸ್‌ಎಮ್‌ಎಸ್‌ ಲಭ್ಯ. ವಿಶೇಷ ಎಂದರೆ ಇದರಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಹಾಟ್‌ ಸ್ಟಾರ್ ವಿಐಪಿಯ ಉಚಿತ ಚಂದಾದಾರಿಕೆ ಪಡೆಯಬಹುದು. ಜೊತೆಗೆ ಹೆಲೋ ಟ್ಯೂನ್, ಏರ್‌ಟೆಲ್‌ ಎಕ್ಸ್‌ಟ್ರೀಮ್ ಸೇವೆಗಳು ದೊರೆಯುತ್ತವೆ.

ಇನ್ನೂ ಜಿಯೋದಲ್ಲಿ ಕೂಡ ಎರಡು ವಾರ್ಷಿಕ್ ಪ್ಲಾನ್ ನೀಡಲಾಗಿದೆ. 2,599 ರೂ. ನ ಪ್ರಿಪೇಯ್ಡ್ ಪ್ಲಾನ್​ನಲ್ಲಿ ಗ್ರಾಹಕರು ಪ್ರತಿದಿನ 2GB ಡೇಟಾ ಪ್ರಯೋಜನ ಪಡೆಯುತ್ತಾರೆ. ಇದರ ಜೊತೆಗೆ ಹೆಚ್ಚುವರಿಯಾಗಿ 10GB ಉಚಿತ ಡೇಟಾ ನೀಡುತ್ತಿದೆ. ಇನ್ನೂ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಉಚಿತ ಎಸ್​ಎಮ್​ಎಸ್​ ಸೇರಿದಂತೆ ಡಿಸ್ನಿ ಹಾಟ್‌ ಸ್ಟಾರ್ ವಿಐಪಿಯ ಉಚಿತ ಚಂದಾದಾರಿಕೆ ಕೂಡ ಪಡೆಯಬಹುದು. ಜಿಯೋ ಟಿವಿ ಉಚಿತವಾಗಿದೆ.

ಮತ್ತೊಂದು ಪ್ಲಾನ್ 2,399 ರೂ. ಆಗದ್ದು ಇದುಕೂಡ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ನೀಡುತ್ತಿದೆ. ಹೆಚ್ಚುವರಿಯಾಗಿ ಯಾವುದೇ ಡೇಟಾ ಆಯ್ಕೆ ಇಲ್ಲ. ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್ ಉಚಿತವಿದೆ. ಜಿಯೋ ಟಿವಿ ಕೂಡ ಫ್ರೀ ನೀಡಲಾಗಿದೆ.​

65W ಫಾಸ್ಟ್​ ಚಾರ್ಜಿಂಗ್ ಜೊತೆಗೆ ಆಕರ್ಷಕ ಫೀಚರ್: ಒಪ್ಪೋದಿಂದ ಎರಡು 5G ಸ್ಮಾರ್ಟ್​ಫೋನ್ ರಿಲೀಸ್: ಬೆಲೆ?

iPhone ಕೊಂಡುಕೊಳ್ಳಲು ಇದೇ ಬೆಸ್ಟ್​ ಟೈಮ್: Amazonನಲ್ಲಿ ಬಂಪರ್ ಡಿಸ್ಕೌಂಟ್​ಗೆ iPhone 12

(Airtel Recharge Plans Airtel rs 2498 one year prepaid plan offers daily data with bumper benifits)