
ಬೆಂಗಳೂರು (ಜು. 12): ಅಮೆಜಾನ್ ಪ್ರೈಮ್ ಡೇ (Amazon Prime Day) ಸೇಲ್ ಮಧ್ಯರಾತ್ರಿ 12 ಗಂಟೆಯಿಂದ ಆರಂಭವಾಗಿದೆ. ಜುಲೈ 12 ರಿಂದ ಜುಲೈ 14 ರವರೆಗೆ ನಡೆಯುವ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಎಸಿಗಳು, ಫ್ರಿಡ್ಜ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳು ಅರ್ಧದಷ್ಟು ಬೆಲೆಗೆ ಲಭ್ಯವಿರುತ್ತವೆ. ಇ-ಕಾಮರ್ಸ್ ವೆಬ್‌ಸೈಟ್ ಈ ಸೇಲ್‌ನಲ್ಲಿ ಲಭ್ಯವಿರುವ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಒನ್‌ಪ್ಲಸ್, ಸ್ಯಾಮ್‌ಸಂಗ್, ಐಕ್ಯೂ, ಆಪಲ್‌ನಂತಹ ಬ್ರಾಂಡ್‌ಗಳ ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು. ಸೇಲ್‌ನಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ನೋಡೋಣ…
ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು
ಈ ಸೇಲ್ ನಲ್ಲಿ, ಈ ವರ್ಷ ಮತ್ತು ಕಳೆದ ವರ್ಷ ಬಿಡುಗಡೆಯಾದ OnePlus 13s, OnePlus 13, OnePlus 13R, OnePlus Nord 5, OnePlus Nord 5 CE, Samsung Galaxy M36, Samsung Galaxy S24, Galaxy S24 Plus, Galaxy S24 Ultra, iQOO 13, iQOO Z10, iQOO Z10 Lite, Redmi Note 14, Redmi Note 14 Pro ಸೇರಿದಂತೆ ಹಲವು ಫೋನ್ ಗಳ ಖರೀದಿಯಲ್ಲಿ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. ಸ್ಮಾರ್ಟ್ ಫೋನ್ ಗಳ ಜೊತೆಗೆ, ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ನೀವು ಟ್ಯಾಬ್ಲೆಟ್ ಗಳು ಮತ್ತು ಲ್ಯಾಪ್ ಟಾಪ್ ಪಿಸಿಗಳನ್ನು ಅಗ್ಗವಾಗಿ ಮನೆಗೆ ತರಬಹುದು. Lenovo, Dell, HP, Acer ನಂತಹ ಬ್ರಾಂಡ್ ಗಳ ಲ್ಯಾಪ್ ಟಾಪ್ ಗಳ ಮೇಲೆ ನಿಮಗೆ ಉತ್ತಮ ರಿಯಾಯಿತಿಗಳು ಸಿಗುತ್ತವೆ.
ಕಡಿಮೆ ದರದಲ್ಲಿ ಲಭ್ಯವಾಗಲಿದೆ ಎಸಿ ಮತ್ತು ಫ್ರಿಡ್ಜ್
ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ, ಬಳಕೆದಾರರು ಸ್ಯಾಮ್‌ಸಂಗ್, ಎಲ್‌ಜಿ, ಡೈಕಿನ್, ವೋಲ್ಟಾಸ್, ಬ್ಲೂಸ್ಟಾರ್‌ನಂತಹ ಬ್ರಾಂಡ್‌ಗಳ ವಿಂಡೋ ಮತ್ತು ಸ್ಪ್ಲಿಟ್ ಎಸಿಗಳ ಖರೀದಿಯ ಮೇಲೆ ಉತ್ತಮ ಕೊಡುಗೆಗಳನ್ನು ಪಡೆಯಬಹುದು. ಪ್ರತಿಯೊಂದು ಬ್ರಾಂಡ್‌ನ 1 ಟನ್, 1.5 ಟನ್ ಅಥವಾ 2 ಟನ್ ಎಸಿಗಳನ್ನು ಅಗ್ಗವಾಗಿ ಖರೀದಿಸಬಹುದು. ಈ ಎಸಿಗಳನ್ನು ಎಂಆರ್‌ಪಿಯ ಅರ್ಧದಷ್ಟು ಬೆಲೆಯಲ್ಲಿ ಕಾಣಬಹುದು. ಇದಲ್ಲದೆ, ಈ ಸೇಲ್‌ನಲ್ಲಿ ನೀವು ಮನೆಗೆ ಫ್ರಿಡ್ಜ್‌ಗಳು, ವಾಷಿಂಗ್ ಮೆಷಿನ್‌ಗಳು ಇತ್ಯಾದಿಗಳನ್ನು ಉತ್ತಮ ರಿಯಾಯಿತಿಯಲ್ಲಿ ತರಬಹುದು. ಇವುಗಳ ಮೇಲೆ ಶೇಕಡಾ 70 ರಿಂದ 80 ರಷ್ಟು ರಿಯಾಯಿತಿ ನೀಡಲಾಗಿದೆ.
Tech Tips: ಫೋನ್‌ಗೆ ಯಾವ ರೀತಿಯ ಕವರ್ ಹಾಕಬೇಕು, ಅಗ್ಗವೋ ಅಥವಾ ದುಬಾರಿಯೋ?
ಹೆಸರೇ ಸೂಚಿಸುವಂತೆ, ಈ ಮಾರಾಟವು ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಮಾತ್ರ. ಅಮೆಜಾನ್ ಪ್ರೈಮ್ ಸದಸ್ಯತ್ವದ ಬಗ್ಗೆ ಹೇಳುವುದಾದರೆ, ಇದರ ಶಾಪಿಂಗ್ ಆವೃತ್ತಿಯ ಯೋಜನೆಯು ರೂ. 399 ರಿಂದ ಪ್ರಾರಂಭವಾಗುತ್ತದೆ. ಈ ರೂ. 399 ಯೋಜನೆಯಲ್ಲಿ, ಬಳಕೆದಾರರು 12 ತಿಂಗಳವರೆಗೆ ಅಂದರೆ ಪೂರ್ಣ ವರ್ಷಕ್ಕೆ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಅಮೆಜಾನ್ ಪ್ರೈಮ್ ಲೈಟ್‌ಗೆ ವಾರ್ಷಿಕವಾಗಿ ರೂ. 799 ಪಾವತಿಸಬೇಕಾಗುತ್ತದೆ. ಸ್ಟ್ಯಾಂಡರ್ಡ್ ಪ್ರೈಮ್ ಸದಸ್ಯತ್ವದ ವಾರ್ಷಿಕ ಯೋಜನೆ ರೂ 1,499 ಗೆ ಬರುತ್ತದೆ. ಮಾಸಿಕ ಯೋಜನೆಯ ಬಗ್ಗೆ ಹೇಳುವುದಾದರೆ, ಸ್ಟ್ಯಾಂಡರ್ಡ್ ಯೋಜನೆ ತಿಂಗಳಿಗೆ ರೂ 299 ರಿಂದ ಪ್ರಾರಂಭವಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Sat, 12 July 25