Tech Tips: ಫೋನ್‌ಗೆ ಯಾವ ರೀತಿಯ ಕವರ್ ಹಾಕಬೇಕು, ಅಗ್ಗವೋ ಅಥವಾ ದುಬಾರಿಯೋ?
Smartphone Back Cover Tips: ನಿಮ್ಮ ಮೊಬೈಲ್‌ಗೆ TPU, ಸಿಲಿಕೋನ್, ಹೈಬ್ರಿಡ್, ಶಾಕ್‌ಪ್ರೂಫ್ ಕವರ್‌ಗಳನ್ನು ಅಳವಡಿಸಿದರೆ ಉತ್ತಮ. ಅವು ಫೋನ್ ಅನ್ನು ಎಲ್ಲಾ ಕೋನಗಳಿಂದಲೂ ಆವರಿಸುತ್ತವೆ. ಅಂತಹ ಕೇಸ್‌ಗಳು ವಾಟರ್‌ಪ್ರೂಫ್, ಮ್ಯಾಗ್ನೆಟಿಕ್ ಅಥವಾ ಸ್ಟ್ಯಾಂಡ್‌ನೊಂದಿಗೆ ಬರುತ್ತವೆ. ಈ ಕವರ್‌ಗಳು ಅತ್ಯುತ್ತಮವಾಗಿವೆ. 100-200 ಬೆಲೆಯ ಕವರ್‌ಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಅಥವಾ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ಪ್ಲಾಸ್ಟಿಕ್ ಅಥವಾ ರಬ್ಬರ್ ವಸ್ತುಗಳಿಂದ ಮಾಡಲ್ಪಟ್ಟಿರುತ್ತವೆ.

ಬೆಂಗಳೂರು (ಜು. 11): ಇತ್ತೀಚಿನ ದಿನಗಳಲ್ಲಿ, ನಾವು ಸ್ಮಾರ್ಟ್ಫೋನ್ (Smartphone) ಖರೀದಿಸಲು ಹೆಚ್ಚು ಹಣ ಖರ್ಚು ಮಾಡುತ್ತೇವೆ ಹಾಗಂತ ಅದರ ರಕ್ಷಣೆಗೆ ಗಮನ ಕೊಡುವುದು ಕಡಿಮೆ. ಫೋನ್ ಖರೀದಿಸಿದ ಬಳಿಕ ಅದಕ್ಕೊಂದು ಕವರ್ ಬೇಕಲ್ವಾ ಎಂದು, ಕೆಲವರು 100 ರೂ. ಗಳ ಅಗ್ಗದ ಕವರ್‌ಗಳನ್ನು ಖರೀದಿಸುತ್ತಾರೆ. ಕೆಲವರು ಬ್ರಾಂಡೆಡ್ ಮತ್ತು ದುಬಾರಿ ಕವರ್‌ಗಳನ್ನು ಸಹ ಖರೀದಿಸುತ್ತಾರೆ. ಆದರೆ ಪ್ರಶ್ನೆಯೆಂದರೆ, ನಮ್ಮ ಫೋನ್‌ಗಳಿಗೆ ನಾವು ಯಾವ ರೀತಿಯ ಕವರ್ ಬಳಸಬೇಕು? ಮತ್ತು ಮುಖ್ಯವಾಗಿ, ಫೋನ್ ಕವರ್ ಮೊಬೈಲ್‌ನ ಕಾರ್ಯಕ್ಷಮತೆ ಅಥವಾ ಬ್ಯಾಟರಿಯ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ?. ನಿಮ್ಮಲ್ಲಿ ಕೂಡ ಇಂತಹ ಪ್ರಶ್ನೆಗಳಿದ್ದರೆ, ಇಲ್ಲಿ ನೀವು ಪ್ರತಿ ಪ್ರಶ್ನೆಗೆ ಉತ್ತರವನ್ನು ಪಡೆಯುತ್ತೀರಿ. ಬಳಿಕ ನೀವೇ ನಿಮ್ಮ ಫೋನ್‌ಗೆ ಯಾವ ಕವರ್ ಒಳ್ಳೆಯದು ಎಂದು ನಿರ್ಧರಿಸಬಹುದು.
ನಿಮ್ಮ ಮೊಬೈಲ್‌ಗೆ TPU, ಸಿಲಿಕೋನ್, ಹೈಬ್ರಿಡ್, ಶಾಕ್‌ಪ್ರೂಫ್ ಕವರ್‌ಗಳನ್ನು ಅಳವಡಿಸಿದರೆ ಉತ್ತಮ. ಅವು ಫೋನ್ ಅನ್ನು ಎಲ್ಲಾ ಕೋನಗಳಿಂದಲೂ ಆವರಿಸುತ್ತವೆ. ಅಂತಹ ಕೇಸ್‌ಗಳು ವಾಟರ್‌ಪ್ರೂಫ್, ಮ್ಯಾಗ್ನೆಟಿಕ್ ಅಥವಾ ಸ್ಟ್ಯಾಂಡ್‌ನೊಂದಿಗೆ ಬರುತ್ತವೆ. ಈ ಕವರ್‌ಗಳು ಅತ್ಯುತ್ತಮವಾಗಿವೆ.
ಅಗ್ಗದ ಕವರ್‌ಗಳು ಫೋನ್ ಅನ್ನು ರಕ್ಷಿಸುತ್ತವೆಯೇ? 100-200 ಬೆಲೆಯ ಕವರ್‌ಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಅಥವಾ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ಪ್ಲಾಸ್ಟಿಕ್ ಅಥವಾ ರಬ್ಬರ್ ವಸ್ತುಗಳಿಂದ ಮಾಡಲ್ಪಟ್ಟಿರುತ್ತವೆ. ಅವುಗಳ ವಿನ್ಯಾಸ ನೋಡಲು ಉತ್ತಮವಾಗಿರುತ್ತದೆ. ಆದರೆ ಇದು ಫೋನ್‌ಗೆ ಕಡಿಮೆ ರಕ್ಷಣೆ ನೀಡುತ್ತದೆ. ಬಿದ್ದಾಗ ಇದು ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದಿಲ್ಲ. ಅಷ್ಟೇ ಅಲ್ಲ, ಇದು ಬೇಗನೆ ಸವೆಯುತ್ತದೆ ಅಥವಾ ಒಡೆಯುತ್ತದೆ.
ದುಬಾರಿ ಕೇಸ್ ಫೋನ್ ಅನ್ನು ರಕ್ಷಿಸುತ್ತದೆಯೇ?: ಸ್ಪೈಜೆನ್, ರಿಂಗ್ಕೆ, ಯುಎಜಿ, ಇತ್ಯಾದಿ ಬ್ರಾಂಡ್ ಕಂಪನಿಗಳ 300 ರಿಂದ 2000 ರವರೆಗಿನ ಕವರ್‌ಗಳು ಸ್ವಲ್ಪ ದುಬಾರಿಯಾಗಿದ್ದರೂ ಈ ಕವರ್‌ಗಳು ಬಲವಾದ ಮತ್ತು ಬಾಳಿಕೆ ಬರುವವು. ಈ ಎಲ್ಲಾ ಕವರ್‌ಗಳು ಟಿಪಿಯು, ಸಿಲಿಕೋನ್, ಹೈಬ್ರಿಡ್, ಶಾಕ್‌ಪ್ರೂಫ್ ಆಗಿವೆ. ಈ ಕವರ್‌ಗಳು ಸ್ವಲ್ಪ ದುಬಾರಿಯಾಗಿದ್ದರೂ ಅವು ಫೋನ್ ಅನ್ನು ರಕ್ಷಿಸುತ್ತವೆ.
Infinix Hot 60 5G: ನೆಟ್ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದಾದ ಫೋನ್ ಭಾರತದಲ್ಲಿ ಬಿಡುಗಡೆ: ಬೆಲೆ 10,499 ರೂ.
ಫೋನ್ ಕವರ್ ಮೊಬೈಲ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆಯೇ? ಕೆಲವು ಅಗ್ಗದ ಮತ್ತು ದಪ್ಪ ಕವರ್‌ಗಳು ಫೋನ್‌ನ ಶಾಖವನ್ನು ಹೊರಹೋಗಲು ಬಿಡುವುದಿಲ್ಲ. ಇಂತಹ ಸಂದರ್ಭ ಇದು ಫೋನ್ ಬೇಗನೆ ಬಿಸಿಯಾಗಲು ಮತ್ತು ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಕವರ್ ತುಂಬಾ ದಪ್ಪವಾಗಿದ್ದರೆ, ವೈರ್‌ಲೆಸ್ ಚಾರ್ಜಿಂಗ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, ಕಂಪನಿಯು ವೈರ್‌ಲೆಸ್ ಚಾರ್ಜಿಂಗ್ ಹೊಂದಾಣಿಕೆಯಾಗಿದೆ ಎಂದು ಹೇಳಿಕೊಳ್ಳುವ ಕವರ್ ಅನ್ನು ಯಾವಾಗಲೂ ಖರೀದಿಸಿ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Fri, 11 July 25