ಸದಾ ಒಂದಲ್ಲ ಒಂದು ಮೇಳಗಳ ಗ್ರಾಹಕರನ್ನು ಸೆಳೆಯುತ್ತಿರುವ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ (Amazon) ಪ್ಲಾಟ್‌ಫಾರ್ಮ್‌ನಲ್ಲಿ ಇದೀಗ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ (Amazon Smartphone Upgrade sale) ಲೈವ್ ನಡೆಯುತ್ತಿದೆ. ಈ ಸೇಲ್ಗೆ ಇಂದೇ ಕೊನೆಯ ದಿನವಾಗಿದ್ದು ಮೊಬೈಲ್ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದೆ. ಇದರಲ್ಲಿ ಒನ್‌ಪ್ಲಸ್, ಶವೋಮಿ, ಸ್ಯಾಮ್‌ಸಂಗ್, ಐಕ್ಯೂ, ರಿಯಲ್ ಮಿ (Realme), ಟೆಕ್ನೋ ಮತ್ತು ಒಪ್ಪೋದಂತಹ ಜನಪ್ರಿಯ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಬರೋಬ್ಬರಿ 40% ರಷ್ಟು ರಿಯಾಯಿತಿ ಘೋಷಿಸಿದೆ. ಪ್ರಮುಖವಾಗಿ ಒನ್‌ಪ್ಲಸ್ ನಾರ್ಡ್ CE 2, ರೆಡ್ಮಿ ನೋಟ್10 ಸರಣಿ, ರೆಡ್ಮಿ 9A ಸ್ಪೋರ್ಟ್ಸ್, ಐಕ್ಯೂ 9 ಪ್ರೊ 5G ಮತ್ತು ಐಕ್ಯೂ 9 SE ಫೋನ್‌ಗಳ ಮೇಲೆ ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗ್ರಾಹಕರು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಹಾಗಾದ್ರೆ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಭ್ಯವಾಗುತ್ತಿರುವ ಮೊಬೈಲ್ ಯಾವುದೆಲ್ಲ ಎಂಬುದನ್ನು ನೋಡೋಣ.
ಶವೋಮಿ ಎಂಐ 11 ಲೈಟ್ NE 5G ಫೋನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಕೇವಲ 26,999 ರೂ. ಗೆ ನಿಮ್ಮದಾಗಿಸಬಹುದು. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಫುಲ್ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಬೆಂಬಲವನ್ನು ಒಳಗೊಂಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.
ಅಂತೆಯೆ ಶವೋಮಿ ಸ್ಮಾರ್ಟ್‌ಫೋನ್‌ಗಳು ಹೆಚ್ಚುವರಿ ಬ್ಯಾಂಕ್ ಆಫರ್ ಮೂಲಕ ಲಭ್ಯವಾಗಲಿ. ಇದರಲ್ಲಿ ಗ್ರಾಹಕರು ರೆಡ್ಮಿ 10 ಪ್ರೈಮ್ ಅನ್ನು 11,249 ರೂ. ಗಳಿಗೆ ಖರೀದಿಸಬಹುದು. ರೆಡ್ಮಿ 9A ಸ್ಪೋರ್ಟ್ 6,299 ರೂ. ರೆಡ್ಮಿ ನೋಟ್ 11 ಫೋನ್ 12,499, ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ 16,749 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ರೆಡ್ಮಿ ನೋಟ್ 11T 5G 14,749 ರೂ., ರೆಡ್ಮಿ ನೋಟ್ 10T 11,749 ರೂ. ಗೆ ದೊರೆಯಲಿದೆ.
ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ ಐಕ್ಯೂ ಕಂಪೆನಿಯ ಹಲವು ಸ್ಮಾರ್ಟ್‌ಫೋನ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು. ಇದರಲ್ಲಿ ಐಕ್ಯೂ 9 ಪ್ರೊ 5G ಸ್ಮಾರ್ಟ್‌ಫೋನ್ ಮೇಲೆ ನೀವು ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ 6,000 ರೂ. ರಿಯಾಯಿತಿ ಜೊತೆಗೆ ಎಕ್ಸ್‌ಚೇಂಜ್ ಆಫರ್ ಮೇಲೆ 4,000 ವರೆಗೆ ರಿಯಾಯಿತಿ ಸೇರಿದಂತೆ 54,990 ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಐಕ್ಯೂ 9 SE ಸ್ಮಾರ್ಟ್‌ಫೋನ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 3,000 ರೂ. ವರೆಗೆ ಮತ್ತು ಎಕ್ಸ್‌ಚೇಂಜ್ ಆಫರ್‌ನಲ್ಲಿ 3,000 ರೂ. ವರೆಗೆ ರಿಯಾಯಿತಿ ದೊರೆಯಲಿದ್ದು, ಕೇವಲ 27,990 ರೂ. ಗಳಿಗೆ ಈ ಫೋನ್ ದೊರೆಯಲಿದೆ.
ಇತ್ತ ಅಮೆಜಾನ್ನಲ್ಲಿ ಪ್ರಸಿದ್ಧ ರಿಯಲ್ ಮಿ ಕಂಪನಿಯ ಆಯ್ದ ಗೇಮಿಂಗ್-ಕೇಂದ್ರಿತ ಫೋನ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ರಿಯಲ್‌ಮಿ ನಾರ್ಜೋ 50 ಮತ್ತು ರಿಯಲ್‌ಮಿ ನಾರ್ಜೋ 50A ಫೋನ್‌ಗಳು ಮೇಲೆ ಕ್ರಮವಾಗಿ 11,749 ರೂ. ಮತ್ತು 10,349 ರೂ ಬೆಲೆಯಲ್ಲಿ ದೊರೆಯಲಿವೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳ ಮೇಲೆ 1,250 ವರೆಗಿನ ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ.
WhatsApp: ವಾಟ್ಸ್ಆ್ಯಪ್ನಲ್ಲಿರುವ ಅಟೊಮೆಟಿಕ್ ಡಿಲೀಟೆಡ್ ಫೀಚರ್ ಬಳಸಿದ್ದೀರಾ?: ಇಲ್ಲಿದೆ ನೋಡಿ