Android 12: ಇನ್ಮುಂದೆ ಮುಖಭಾವದಲ್ಲೇ ನಿಮ್ಮ ಮೊಬೈಲ್ ಅನ್ನು ನಿಯಂತ್ರಿಸಬಹುದು..!

| Updated By: ಝಾಹಿರ್ ಯೂಸುಫ್

Updated on: Aug 19, 2021 | 6:56 PM

Android 12 facial expressions: ಮೊಬೈಲ್ ನೋಡಿ ನೀವು ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

1 / 6
ಗೂಗಲ್ ತನ್ನ ಮುಂಬರುವ ಹೊಸ ಆಪರೇಟಿಂಗ್ ಸಿಸ್ಟಂ (ಓಎಸ್) ಅಂಡ್ರಾಯ್ಡ್ 12 ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ.  ಟೆಕ್ ವೆಬ್‌ಸೈಟ್ ಎಕ್ಸ್‌ಡಿಎ ಡೆವಲಪರ್‌ಗಳ ಪ್ರಕಾರ, ಈ ಹೊಸ ಫೀಚರ್ ಸಹಾಯದಿಂದ ಅಂಡ್ರಾಯ್ಡ್​-12 ಸ್ಮಾರ್ಟ್​ಫೋನ್ ಬಳಕೆದಾರರು ಮುಖಭಾವದಲ್ಲೇ ತಮ್ಮ ಮೊಬೈಲ್​ ಅನ್ನು ನಿಯಂತ್ರಿಸಬಹುದು.

2 / 6
ಅಂದರೆ ಹೊಸ ಅಂಡ್ರಾಯ್ಡ್​ ಆಪರೇಟಿಂಗ್ ಸಿಸ್ಟಂ ಹೊಸ ಅಪ್​ಗ್ರೇಡ್​ನಲ್ಲಿ ಮನುಷ್ಯನ ಹಾವಭಾವಗಳನ್ನು ಗುರುತಿಸುವ ಫೀಚರ್​ ನೀಡಲಾಗುತ್ತದೆ. ಇದರ ಸಹಾಯದಿಂದ ನೀವು ಮೊಬೈಲ್​ನ ಸ್ಕ್ರೀನ್ ಮುಟ್ಟದೇ ನಿಮಗೆ ಬೇಕಾದ ಆಯ್ಕೆಗಳನ್ನು ಪಡೆಯಬಹುದು.

3 / 6
ಉದಾಹರಣೆಗೆ: ಬಳಕೆದಾರರು ಬಾಯಿ ತೆರೆಯುವ ಫೋನ್ ಅನ್​ಲಾಕ್ ಮಾಡಬಹುದು ಅಥವಾ ಕ್ಯಾಮೆರಾ ಆನ್ ಮಾಡಿಕೊಳ್ಳಬಹುದು. ಇನ್ನು ಕಣ್ಣಿನ ಹುಬ್ಬೇರಿಸುವ ಮೂಲಕ ಸ್ಕ್ರೀನ್ ಸ್ಕ್ರಾಲ್ ಮಾಡಬಹುದು. ಹಾಗೆಯೇ ಮುಖವನ್ನು ಎಡ, ಬಲ, ಮೇಲೆ, ಕೆಳಗೆ ಮಾಡುವ ಮೂಲಕ ಫೋನ್​ನಲ್ಲಿರುವ ಆಯ್ಕೆಗಳನ್ನು ಓಪನ್ ಮಾಡಿಕೊಳ್ಳಬಹುದು.

4 / 6
ಇದಕ್ಕಾಗಿ ಅಂಡ್ರಾಯ್ಡ್​-12 ಓಎಸ್​ನಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುತ್ತಿದ್ದು, ಅದರಲ್ಲಿ ನಿಮಗೆ ಬೇಕಾದ ಆಯ್ಕೆಗೆ ಸರಿಯಾಗಿ ಕ್ಯಾಮೆರಾದಲ್ಲಿ ಮುಖಭಾವವನ್ನು ಸೆರೆಯಿಡಿಯಬೇಕಾಗುತ್ತದೆ. ಉದಾಹರಣೆಗೆ: ನೀವು ನಿಮ್ಮ ನಗುವಿನ ಮೂಲಕ ಕ್ಯಾಮೆರಾ ಓಪನ್ ಮಾಡಬೇಕೆಂದು ಬಯಸಿದರೆ, ಹೊಸ ಫೀಚರ್​ನಲ್ಲಿ ನೀಡಲಾದ ಆಯ್ಕೆಯಲ್ಲಿ ನಿಮ್ಮ ನಗುವನ್ನು ಸೆರೆಯಿಡಿಯಬೇಕು. ಆ ಬಳಿಕ ಮೊಬೈಲ್ ನೋಡಿ ನೀವು  ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.

5 / 6
ಇದಾಗ್ಯೂ ಈ ಹೊಸ ಫೀಚರ್ ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಅಂದರೆ ಅಂಡ್ರಾಯ್ಡ್-12 ಹಾವಭಾವ ಆಯ್ಕೆಗಳನ್ನು ಬಳಸಿಕೊಂಡರೆ ಬ್ಯಾಟರಿ ಕೂಡ ಬೇಗನೆ ಮುಗಿಯಲಿದೆ.

6 / 6
ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಅಂಡ್ರಾಯ್ಡ್​-12 ಓಎಸ್​ನ ಸ್ಮಾರ್ಟ್​ಫೋನ್​ಗಳಲ್ಲಿ ಹೊಸ ಆಯ್ಕೆ ಬರಲಿರುವುದಂತು ಪಕ್ಕಾ. ಇದರಿಂದ ಪದೇ ಪದೇ ಟಚ್​ಸ್ಕ್ರೀನ್ ಮುಟ್ಟುವುದು ಕೂಡ ತಪ್ಪಲಿದೆ.