ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿನ ಭರ್ಜರಿ ಮೇಳಗಳು ಕೊನೆಯಾಗುತ್ತಾ ಬರುತ್ತಿವೆ. ಅತ್ತ ಅಮೇಜಾನ್ನಲ್ಲಿನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಇಂದಿಗೆ ಅಂತ್ಯಕಂಡರೆ, ಇತ್ತ ಫ್ಲಿಪ್ಕಾರ್ಟ್ನಲ್ಲಿ ನಡೆಯುತ್ತಿರುವ ಬಿಗ್ ಸೇವಿಂಗ್ ಡೇಸ್ (Flipkart Big Saving Days sale) ಸೇಲ್ ಜನವರಿ 22ಕ್ಕೆ ಕೊನೆಯಾಗಲಿದೆ. ಫ್ಲಿಪ್ಕಾರ್ಟ್ನ ಈ ಈ ವಿಶೇಷ ಸೇಲ್‌ನಲ್ಲಿ ಆಯ್ದ ಕೆಲವು ಐಫೋನ್ ಮಾಡೆಲ್‌ಗಳು ಹಾಗೂ ನೂತನ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಪ್ರಮುಖವಾಗಿ ಈ ಬಾರಿ ಕೂಡ ಆ್ಯಪಲ್ ಕಂಪನಿಯ ಐಫೋನ್ (iPhone ) ಸರಣಿಯಲ್ಲಿ ಬಂಪರ್ ರಿಯಾಯಿತಿಯನ್ನು ನೀಡಲಾಗಿದೆ. ನೀವು ಐಫೋನ್ 12 ಮಿನಿ ಖರೀದಿಸಲು ಯೋಜಿಸುತ್ತಿದ್ದರೆ, ಈ ಸೇಲ್ ನಿಮಗೆ ಉಪಯುಕ್ತವಾಗಬಹುದು. ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆದರೆ, ಅರ್ಧಕ್ಕಿಂತ ಕಡಿಮೆ ಬೆಲೆಗೆ ಈ ಫೋನನ್ನು ಖದಿಸಬಹುದು.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2022 ಸೇಲ್‌ನಲ್ಲಿ ಐಫೋನ್ 12 ಮಿನಿ ಫೋನಿಗೆ ಭರ್ಜರಿ ಆಫರ್ ತಿಳಿಸಿದೆ. 64GB ಸ್ಟೋರೇಜ್‌ನ ಬೇಸ್ ವೇರಿಯಂಟ್ ಐಫೋನ್ 12 ಮಿನಿ ಫೋನ್ ಬೆಲೆಯು ಕೇವಲ 40,249 ರೂ. ದರದಲ್ಲಿ ಕಾಣಿಸಿಕೊಂಡಿದೆ. ಎಕ್ಸ್‌ಚೇಂಜ್ ಕೊಡುಗೆಯು ಸಹ ಲಭ್ಯ ಮಾಡಿದೆ. ಆಯ್ದ ಬ್ಯಾಂಕ್‌ನ ಡಿಸ್ಕೌಂಟ್ ಸಹ ದೊರೆಯಲಿವೆ. ಈ ಫೋನ್ 5.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಯನ್ನು ಪಡೆದಿದೆ.
ಇನ್ನು ಐಫೋನ್ 12 ಕೇವಲ 52,999 ರೂ. ಗೆ ಮಾರಾಟ ಆಗುತ್ತಿದೆ. ಇದರ ಮೂಲಬೆಲೆ 65,900 ರೂ. ಆಗಿದೆ. ಈ ಫೋನ್ OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್ ಮೋಡ್ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.
ಐಫೋನ್ 13 ಫೋನ್ ಕೂಡ 79,000 ರೂ. ಗೆ ಖರೀದಿಸಬಹುದಾಗಿದ್ದು ಫ್ರೀ ಡೆಲಿವರಿ ಆಯ್ಕೆ ನೀಡಿದೆ. ಇದು 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಫೋನ್ 1200nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ.
Tecno Pop 5 Pro: ಬರೋಬ್ಬರಿ 6000mAh ಬ್ಯಾಟರಿಯ ಹೊಸ ಫೋನ್ ಬಿಡುಗಡೆ ಮಾಡಿದ ಟೆಕ್ನೋ ಕಂಪನಿ
ಶಿಯೋಮಿ 11ಟಿ ಪ್ರೊ 5ಜಿ ಹೈಪರ್‌ಫೋನ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು? ಇಲ್ಲಿದೆ ಮಾಹಿತಿ