Tecno Pop 5 Pro: ಬರೋಬ್ಬರಿ 6000mAh ಬ್ಯಾಟರಿಯ ಹೊಸ ಫೋನ್ ಬಿಡುಗಡೆ ಮಾಡಿದ ಟೆಕ್ನೋ ಕಂಪನಿ

ಟೆಕ್ನೋ ಪಾಪ್‌ 5 ಪ್ರೊ ಬಜೆಟ್ ಬೆಲೆಯ ಫೋನ್ ಆಗಿರುವುದು ವಿಶೇಷ. ಆದರೆ, ಇದರಲ್ಲಿ ಅಚ್ಚರಿ ಪಡುವಂತಹ ಫೀಚರ್​ಗಳಿವೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಜೊತೆಗೆ ಬರೋಬ್ಬರಿ 6,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ.

Tecno Pop 5 Pro: ಬರೋಬ್ಬರಿ 6000mAh ಬ್ಯಾಟರಿಯ ಹೊಸ ಫೋನ್ ಬಿಡುಗಡೆ ಮಾಡಿದ ಟೆಕ್ನೋ ಕಂಪನಿ
Tecno Pop 5 Pro
Follow us
TV9 Web
| Updated By: Vinay Bhat

Updated on: Jan 20, 2022 | 1:36 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳಿಗೆ (Budget Smartphone) ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಪೈಕಿ ಇದೀಗ ಭಾರತದಲ್ಲಿ ತನ್ನ ಹೊಸ ಟೆಕ್ನೋ ಪಾಪ್‌ 5 ಪ್ರೊ (Tecno Pop 5 Pro) ಎಂಬ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಇದುಕೂಡ ಬಜೆಟ್ ಬೆಲೆಯ ಫೋನ್ ಆಗಿರುವುದು ವಿಶೇಷ. ಆದರೆ, ಇದರಲ್ಲಿ ಅಚ್ಚರಿ ಪಡುವಂತಹ ಫೀಚರ್​ಗಳಿವೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಜೊತೆಗೆ ಬರೋಬ್ಬರಿ 6,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡುವುದಾದರೆ…

ಬೆಲೆ ಎಷ್ಟು?:

ಭಾರತದಲ್ಲಿ ಟೆಕ್ನೋ ಪಾಪ್‌ 5 ಪ್ರೊ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಆಯ್ಕೆಗೆ 8,499 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಡೀಪ್‌ಸೀ ಲಸ್ಟರ್, ಐಸ್ ಬ್ಲೂ ಮತ್ತು ಸ್ಕೈ ಸಯಾನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಅಥವಾ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಆಗುವ ನಿರೀಕ್ಷೆಯಿದೆ.

ಏನು ವಿಶೇಷತೆ?:

ಟೆಕ್ನೋ ಪಾಪ್ 5 ಪ್ರೊ ಸ್ಮಾರ್ಟ್‌ಫೋನ್‌ 6.52 ಇಂಚಿನ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 269ppi ಪಿಕ್ಸೆಲ್ ಸಾಂದ್ರತೆ ಮತ್ತು 480 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್​ನಿಂದ ಕೂಡಿದೆ. ಆಂಡ್ರಾಯ್ಡ್‌ 11 Go ಆವೃತ್ತಿಯನ್ನು ಆಧರಿಸಿ HiOS 7.6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಎಐ ಲೆನ್ಸ್ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಡ್ಯುಯಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಎಐ ಪೋಟ್ರೇಟ್ ಮೋಡ್, ಎಚ್‌ಡಿಆರ್ ಮೋಡ್ ಮತ್ತು ಫಿಲ್ಟರ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ ಫ್ರಂಟ್ ಫೇಸಿಂಗ್ ಫ್ಲ್ಯಾಷ್‌ ಬೆಂಬಲಿಸುವ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

6,000mAh ಸಾಮರ್ಥ್ಯದ ದೊಡ್ಡ ಬಲಿಷ್ಠ ಬ್ಯಾಟರಿಯನ್ನು ನೀಡಲಾಗಿದೆ. ಇದು ಟೆಕ್ನೋ ಕಂಪನಿಯ ಪ್ರಕಾರ 54 ಗಂಟೆಗಳ ಟಾಕ್‌ಟೈಮ್ ಅಥವಾ 120 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ ಅನ್ನು ನೀಡುತ್ತದೆ. ಇದಲ್ಲದೆ ಟೆಕ್ನೋ ಪಾಪ್ 5 ಪ್ರೊ ಬ್ಯಾಟರಿ ಲ್ಯಾಬ್ ಫೀಚರ್ಸ್‌ ಮತ್ತು ವಿಸ್ತೃತ ಬ್ಯಾಟರಿ ಬಾಳಿಕೆಗಾಗಿ ಅಲ್ಟ್ರಾ ಪವರ್ ಸೇವಿಂಗ್ ಮೋಡ್ ಸೇರಿದಂತೆ ಸಾಫ್ಟ್‌ವೇರ್ ಆಪ್ಟಿಮೈಸೇಶನ್‌ಗಳನ್ನು ಹೊಂದಿದೆ.

ಶಿಯೋಮಿ 11ಟಿ ಪ್ರೊ 5ಜಿ ಹೈಪರ್‌ಫೋನ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

Amazon Great Republic Day sale: ಕೊನೇ ದಿನದ ಅಮೆಜಾನ್ ರಿಪಬ್ಲಿಕ್ ಡೇ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್