BSNL 4G ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್; ಆತ್ಮನಿರ್ಭರ ಭಾರತ ನನಸಾಗುತ್ತಿದೆ ಎಂದ ಸಚಿವ

| Updated By: ganapathi bhat

Updated on: Oct 10, 2021 | 10:08 PM

BSNL Network: ಬಿಎಸ್​ಎನ್​ಎಲ್ 4ಜಿ ಭಾರತದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇದೆ. ಹಾಗೂ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೆ ಉಚಿತ 4ಜಿ ಸಿಮ್​ನ್ನು ಬಿಎಸ್​ಎನ್​ಎಲ್ ನೀಡುತ್ತಿದೆ.

BSNL 4G ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್; ಆತ್ಮನಿರ್ಭರ ಭಾರತ ನನಸಾಗುತ್ತಿದೆ ಎಂದ ಸಚಿವ
ಅಶ್ವಿನಿ ವೈಷ್ಣವ್
Follow us on

ದೆಹಲಿ: ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್​ಎನ್​ಎಲ್ 4ಜಿ ನೆಟ್​ವರ್ಕ್​ನ (BSNL 4G Network) ಮೊದಲ ಫೋನ್ ಕಾಲ್ ಮಾಡಿದರು. ಈ ಬಗ್ಗೆ, ಅವರು ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಬಿಎಸ್​ಎನ್​ಎಲ್ 4ಜಿ ಭಾರತದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇದೆ. ಹಾಗೂ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೆ ಉಚಿತ 4ಜಿ ಸಿಮ್​ನ್ನು ಬಿಎಸ್​ಎನ್​ಎಲ್ ನೀಡುತ್ತಿದೆ.

ಇದು ಭಾರತದ್ದೇ ಆದ ಮೊದಲ 4ಜಿ ನೆಟ್​ವರ್ಕ್ ಆಗಿದೆ. ಇದರ ಅಭಿವೃದ್ಧಿ ಅಥವಾ ರೋಲ್​ಔಟ್ ಸರಳ, ಸುಲಭ ಆಗಿರಲಿಲ್ಲ. ವರದಿಗಳು ಹೇಳುವಂತೆ ಬಿಎಸ್​ಎನ್​ಎಲ್ ರೋಲ್​ಔಟ್​ನ ಮುಂದಿನ ಹಂತಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕೂಡ ಯೋಜನೆಯ ಸಹಭಾಗಿತ್ವ ಹೊಂದಬಹುದು. ಬಿಎಸ್​ಎನ್​ಎಲ್ ತನ್ನ 4ಜಿ ನೆಟ್​ವರ್ಕ್​ಗಾಗಿ ಇಂಡಿಯನ್ ಟೆಕ್ನಾಲಜಿ ಜೊತೆಗೆ ಕೆಲವು ಕಾಲದಿಂದ ಕೆಲಸ ಮಾಡುತ್ತಿದೆ.

ಐಟಿ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್​ಎನ್​ಎಲ್ ಭಾರತೀಯ 4ಜಿ ನೆಟ್​ವರ್ಕ್ ಮೂಲಕ ಮೊದಲ ಕರೆ ಮಾಡಿದರು. ಕೇಂದ್ರ ಸರ್ಕಾರ 4ಜಿ ಸೇವೆಗಳಿಗಾಗಿ 24,084 ಕೋಟಿ ರೂಪಾಯಿಗಳನ್ನು 2021-22 ರ ಬಜೆಟ್​ನಲ್ಲಿ ಮೀಸಲಿರಿಸಿದೆ. ಇದು ಒಟ್ಟಾರೆ 69,000 ಕೋಟಿ ರೂಪಾಯಿಯ ಬಿಎಸ್​ಎನ್​ಎಲ್ ಹಾಗೂ ಎಮ್​ಟಿಎನ್​ಎಲ್ ಪ್ಯಾಕೇಜ್​ನ ಭಾಗವಾಗಿದೆ.

ಬಿಎಸ್​ಎನ್​ಎಲ್​ ಈ ಹಣಕಾಸು ವರ್ಷದಲ್ಲಿ 4ಜಿ ನೆಟ್​ವರ್ಕ್ ಕಾರ್ಯಾರಂಭಿಸಿದ್ದರೆ, ಅದರ ಆರ್​-ಡಿ ಆರ್ಗನೈಸೇಷನ್ ಸಿ-ಡಾಟ್​ಗೆ 6ಜಿ ನೆಟ್​ವರ್ಕ್ ಟೆಕ್ನಾಲಜಿ ಮೇಲೆ ಕೆಲಸ ಮಾಡಲು ಟೆಲಿಕಾಂ ಡಿಪಾರ್ಟ್​ಮೆಂಟ್ ಸೂಚಿಸಿದೆ. ಆ ಮೂಲಕ ಭವಿಷ್ಯದ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡಲು ಹಾಗೂ ಜಾಗತಿಕ ಮಾರುಕಟ್ಟೆಯೊಂದಿಗೆ ಬೆಳೆಯಲು ಹೇಳಲಾಗಿದೆ. ಸ್ಯಾಮ್​ಸಂಗ್, ಹುವಾಯಿ, ಎಲ್​ಜಿ ಮತ್ತು ಇತರ ಕೆಲವು ಕಂಪೆನಿಗಳು 6ಜಿ ಟೆಕ್ನಾಲಜಿಗಾಗಿ ಕೆಲಸ ಮಾಡುತ್ತಿವೆ ಎಂದು ಹೇಳಲಾಗಿದೆ. 6ಜಿ ತಂತ್ರಜ್ಞಾನವು 5ಜಿ ಗಿಂತ 50 ಪಟ್ಟು ವೇಗವಾಗಿ ಇರಲಿದೆ ಎನ್ನಲಾಗಿದೆ. ಈ ತಂತ್ರಜ್ಞಾನ 2028- 2030 ರ ವೇಳೆಗೆ ವಾಣಿಜ್ಯ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಯುಪಿಐ ವಹಿವಾಟಿನಲ್ಲಿ ಗಮನಾರ್ಹ ಪ್ರಗತಿ: ಆರ್ಥಿಕತೆ ಮುನ್ನಡೆಯ ದ್ಯೋತಕ ಎಂದ ಸಚಿವ ಅಶ್ವಿನಿ ವೈಷ್ಣವ್

ಇದನ್ನೂ ಓದಿ: BSNL 3G ನೇ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇನ್ನು 4G ಎಲ್ಲಿಂದ ಬರಬೇಕು: ಜಿಎಂ ಸಿದ್ದೇಶ್ವರ್​ ವಾಗ್ದಾಳಿ

Published On - 10:04 pm, Sun, 10 October 21