Asus ROG Phone 5s: ಭಾರತದಲ್ಲಿ ಏಸಸ್​ನಿಂದ ಹೊಸ ಪವರ್​ಫುಲ್ ​ಫೋನ್ ಬಿಡುಗಡೆ: ಹುಚ್ಚೆದ್ದು ಕುಣಿದ ಗೇಮಿಂಗ್ ಪ್ರಿಯರು

| Updated By: Vinay Bhat

Updated on: Feb 15, 2022 | 2:53 PM

Asus ROG Phone 5s Pro: ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 5s ಸರಣಿಯನ್ನು ಭಾರತದಲ್ಲಿ ಪರಿಚಯಿಸಿದೆ.

Asus ROG Phone 5s: ಭಾರತದಲ್ಲಿ ಏಸಸ್​ನಿಂದ ಹೊಸ ಪವರ್​ಫುಲ್ ​ಫೋನ್ ಬಿಡುಗಡೆ: ಹುಚ್ಚೆದ್ದು ಕುಣಿದ ಗೇಮಿಂಗ್ ಪ್ರಿಯರು
Asus ROG Phone 5s and Asus ROG Phone 5s Pro
Follow us on

ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಏಸಸ್ (Asus) ಸದ್ಯ ಹೊಸ ಮೊಬೈಲ್​ನೊಂದಿಗೆ ಮತ್ತೆ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 5s ಸರಣಿಯನ್ನು ಭಾರತದಲ್ಲಿ ಪರಿಚಯಿಸಿದೆ. ಇದರಲ್ಲಿ ಒಟ್ಟು ಎರಡು ಫೋನ್​ಗಳಿದ್ದು ಏಸಸ್ ರಾಗ್ ಫೋನ್ 5s ಮತ್ತು ರಾಗ್ ಫೋನ್ 5s ಪ್ರೊ (Asus ROG Phone 5s and ROG Phone 5s Pro) ಅನ್ನು ದೇಶದಲ್ಲಿ ಅನಾವರಣ ಮಾಡಿದೆ. ವಿಶೇಷ ಎಂದರೆ ರಾಗ್ ಫೋನ್ 5s ಮತ್ತು ರಾಗ್ ಫೋನ್ 5s ಪ್ರೊ ಈ ಎರಡೂ ಸ್ಮಾರ್ಟ್​ಫೋನ್​ಗಳು (Smartphone) 5G ಬೆಂಬಲ ಪಡೆದುಕೊಂಡಿದೆ. ಅತ್ಯಂತ ಬಲಿಷ್ಠವಾದ ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 888 ಪ್ಲಸ್ ಪ್ರೊಸೆಸರ್ ಅಳವಡಿಸಲಾಗಿದ್ದು, ಗೇಮಿಂಗ್ ಪ್ರಿಯರಂತು ಕಾದುಕುಳಿತಿದ್ದಾರೆ. ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ.

ಏನು ಹೈಲೇಟ್?:

ಏಸಸ್​​​ ROG ಫೋನ್ 5s ಮತ್ತು ROG ಫೋನ್ 5s ಪ್ರೊ ಎರಡು ಸ್ಮಾರ್ಟ್‌ಫೋನ್‌ಗಳು 1,080×2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಸ್ಯಾಮ್‌ಸಂಗ್‌ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 144Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿವೆ. ಇದಲ್ಲದೆ 1ms ರೆಸ್ಪಾನ್ಸ್‌ ಟೈಂ, 24ms ಟಚ್ ಲೇಟೆನ್ಸಿ, HDR10+ ಬೆಂಬಲ ಮತ್ತು 1200 ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದಲ್ಲದೆ ಈ ಎರಡೂ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದುಕೊಂಡಿವೆ.

ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888+ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಆದರೆ ಆಸುಸ್‌ ROG ಫೋನ್ 5s ಫೋನ್‌ 12GB RAM ಮತ್ತು 256GB ಸ್ಟೋರೇಜ್‌ ಹೊಂದಿದೆ. ಹಾಗೆಯೇ ಆಸುಸ್‌ ROG ಫೋನ್ 5s ಪ್ರೊ 18GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿವೆ.

ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ IMX686 ಸೆನ್ಸಾರ್‌, ಎರಡನೇ ಕ್ಯಾಮೆರಾ 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 24 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಆಸುಸ್‌ ROG ಫೋನ್ 5s ಮತ್ತು ROG ಫೋನ್ 5s Pro ಸ್ಮಾರ್ಟ್‌ಫೋನ್‌ಗಳು 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿವೆ. ಇವುಗಳು 30W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಭಾರತದಲ್ಲಿ ಆಸುಸ್‌ ROG ಫೋನ್ 5s ಬೆಲೆ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 49,999 ರೂ.ಆಗಿದೆ. ಇನ್ನು 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 57,999.ರೂ.ಆಗಿದೆ. ಇದಲ್ಲದೆ ಆಸುಸ್‌ ROG ಫೋನ್ 5s ಪ್ರೊ ಸ್ಮಾರ್ಟ್‌ಫೋನ್‌ ಬೆಲೆ 79,999ರೂ.ಆಗಿದೆ. ಈ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು ಫೆಬ್ರವರಿ 18 ರಂದು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.

Nokia G21: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬಜೆಟ್ ಬೆಲೆಯ ನೋಕಿಯಾದ ಹೊಸ ಸ್ಮಾರ್ಟ್​ಫೋನ್: ಏನು ವಿಶೇಷತೆ?

WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಲುಕ್ ಹೇಗಿದೆ ನೋಡಿ