Asus Zenfone 10: ರೋಚಕತೆ ಸೃಷ್ಟಿಸುತ್ತಿದೆ ಏಸಸ್‌ ಜೆನ್‌ಫೋನ್‌ 10: ಜೂನ್ 29ಕ್ಕೆ ಬಿಡುಗಡೆ

|

Updated on: Jun 19, 2023 | 1:45 PM

ಏಸಸ್‌ ಜೆನ್‌ಫೋನ್‌ 10 ಇದೇ ತಿಂಗಳು ಜೂನ್ 29 ರಂದು ಮಾರುಕಟ್ಟೆಗೆ ಅಪ್ಪಳಿಸಲಿದೆ. ಈ ಫೋನ್ ಐದು ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದ್ದು ಕಪ್ಪು, ಬೂದು-ನೀಲಿ, ಹಸಿರು, ಕೆಂಪು ಮತ್ತು ಬಿಳಿ ಕಲರ್​ನಲ್ಲಿ ಅನಾವರಣಗೊಳ್ಳುವುದು ಖಚಿತವಾಗಿದೆ.

Asus Zenfone 10: ರೋಚಕತೆ ಸೃಷ್ಟಿಸುತ್ತಿದೆ ಏಸಸ್‌ ಜೆನ್‌ಫೋನ್‌ 10: ಜೂನ್ 29ಕ್ಕೆ ಬಿಡುಗಡೆ
Asus ZenFone 10
Follow us on

ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಏಸಸ್ (Asus) ಸದ್ಯ ಹೊಸ ಮೊಬೈಲ್​ನೊಂದಿಗೆ ಮತ್ತೆ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಜೆನ್‌ಫೋನ್‌ (Asus Zenfone) ಸರಣಿಯಲ್ಲಿ ವಿನೂತನ ಫೋನ್‌ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಅದುವೇ ಜೆನ್‌ಫೋನ್‌ 10 (Asus Zenfone 10). ಹೊಸ ಏಸಸ್‌ ಜೆನ್‌ಫೋನ್‌ 10 ಇದೇ ತಿಂಗಳು ಜೂನ್ 29 ರಂದು ಮಾರುಕಟ್ಟೆಗೆ ಅಪ್ಪಳಿಸಲಿದೆ. ಈ ಫೋನ್ ಐದು ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದ್ದು ಕಪ್ಪು, ಬೂದು-ನೀಲಿ, ಹಸಿರು, ಕೆಂಪು ಮತ್ತು ಬಿಳಿ ಕಲರ್​ನಲ್ಲಿ ಅನಾವರಣಗೊಳ್ಳುವುದು ಖಚಿತವಾಗಿದೆ.

ಬೆಲೆ ಎಷ್ಟಿರಬಹುದು?:

ಏಸಸ್‌ ಜೆನ್‌ಫೋನ್‌ 10 ಫೋನ್‌ ಆರಂಭದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದರ 16GB RAM + 256GB ವೇರಿಯಂಟ್‌ಗೆ ವಿದೇಶದಲ್ಲಿ $749. ಅಂದರೆ ಭಾರತದಲ್ಲಿ ಬೆಲೆ ಅಂದಾಜು 62,000ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ
Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ತೆರೆಯದೆ ಮೆಸೇಜ್ ಓದುವ ಟ್ರಿಕ್ ನಿಮಗೆ ಗೊತ್ತೇ?
Best Camera Phones: ಕೇವಲ 10,000 ರೂ. ಒಳಗೆ ಸಿಗುತ್ತಿರುವ ಅದ್ಭುತ ಕ್ಯಾಮೆರಾದ ಸ್ಮಾರ್ಟ್​ಫೋನ್ ಬೇಕಿದ್ದರೆ ಇಲ್ಲಿದೆ ನೋಡಿ
WhatsApp New Feature: ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್
iQoo Neo 7 Pro: ಗೇಮಿಂಗ್ ಪ್ರಿಯರು ಸಿದ್ಧರಾಗಿ: ಬರುತ್ತಿದೆ ಬಲಿಷ್ಠ ಪ್ರೊಸೆಸರ್​ನ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್

Xiaomi Pad 6: ಶಓಮಿ ರೆಡ್ಮಿ ಸೂಪರ್ ಫೀಚರ್ಸ್ ಹೊಸ ಪ್ಯಾಡ್ ಭಾರತದಲ್ಲಿ ಬಿಡುಗಡೆ

ಫೀಚರ್ಸ್ ಏನಿದೆ?:

ಜೆನ್‌ಫೋನ್‌ 10 ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯದ 6.3 ಇಂಚಿನ AMOLED ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಇದು 120Hz ರಿಫ್ರೆಶ್ ರೇಟ್​ನೊಂದಿಗೆ ಬರಲಿದ್ದು, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿರುತ್ತದೆ. ಅತ್ಯಂತ ಬಲಿಷ್ಠವಾದ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್‌ ಸಪೋರ್ಟ್‌ ಸಹ ಪಡೆದಿರಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿರಲಿದೆ. ಇನ್ನೊಂದು ಕ್ಯಾಮೆರಾವು ಅಲ್ಟ್ರಾ-ವೈಡ್ 12 ಮೆಗಾ ಪಿಕ್ಸಾಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ. ಅಂತೆಯೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12 ಮೆಗಾ ಪಿಕ್ಸಾಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆತರಾ ಅಳವಡಿಸಲಾಗಿದೆ.

ಏಸಸ್‌ ಜೆನ್‌ಫೋನ್‌ 10 ಫೋನಿನ ಬ್ಯಾಟರಿ 5,000mAh ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದೆ. ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿರಲಿದೆ. ಉಳಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಮಾಡಲಿದೆ. ಉಳಿದಂತೆ 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ