ಮ್ಯಾಕ್‌ಬುಕ್‌ ಮೇಲೆ ಕಾಫಿ ಚೆಲ್ಲಿದ್ದಕ್ಕೆ ಆ್ಯಪಲ್ ವಿರುದ್ಧ ಬೆಂಗಳೂರು ಮಹಿಳೆ ಮೊಕದ್ದಮೆ

|

Updated on: Jan 05, 2024 | 2:40 PM

ಬೆಂಗಳೂರಿನ 31 ವರ್ಷದ ಮಹಿಳೆಯೊಬ್ಬರು ವರ್ಷದ ಹಿಂದೆ ಜನವರಿಯಲ್ಲಿ 1.74 ಲಕ್ಷ ರೂ. ಗೆ ಅತ್ಯಾಧುನಿಕ 13 ಇಂಚಿನ ಆ್ಯಪಲ್ ಲ್ಯಾಪ್‌ಟಾಪ್ ಮ್ಯಾಕ್‌ಬುಕ್ ಪ್ರೊ ಖರೀದಿಸಿದ್ದರು. ಖರೀದಿ ಮಾಡಿದ ಕೆಲವು ದಿನಗಳ ನಂತರ, ಮಹಿಳೆ ಆಕಸ್ಮಿಕವಾಗಿ ತನ್ನ ಹೊಸ ಮ್ಯಾಕ್​ಬುಕ್​ನ ಕೀಬೋರ್ಡ್‌ ಮೇಲೆ ಕಾಫಿಯನ್ನು ಚೆಲ್ಲಿದ್ದಾರೆ.

ಮ್ಯಾಕ್‌ಬುಕ್‌ ಮೇಲೆ ಕಾಫಿ ಚೆಲ್ಲಿದ್ದಕ್ಕೆ ಆ್ಯಪಲ್ ವಿರುದ್ಧ ಬೆಂಗಳೂರು ಮಹಿಳೆ ಮೊಕದ್ದಮೆ
macbook 13
Follow us on

ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಹೊಚ್ಚಹೊಸ ಮ್ಯಾಕ್‌ಬುಕ್‌ (MacBook) ಮೇಲೆ ಆಕಸ್ಮಿಕವಾಗಿ ಕಾಫಿ ಚೆಲ್ಲಿ ಬಳಿಕ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ ಪ್ರಕರಣವನ್ನು ಕಳೆದುಕೊಂಡಿದ್ದಾರೆ. ಮ್ಯಾಕ್‌ಬುಕ್‌ ಸರಿಪಡಿಸಲು ಶುಲ್ಕ ವಿಧಿಸಿದ ಕಾರಣ 31 ವರ್ಷದ ಮಹಿಳೆ ಐಟಿ ದೈತ್ಯ ಆ್ಯಪಲ್ ಅನ್ನು ನ್ಯಾಯಾಲಯಕ್ಕೆ ಎಳೆದುಕೊಂಡು ಬಂದಿದ್ದಾರೆ. ಆದಾಗ್ಯೂ, ಈ ಪ್ರಕರಣದಲ್ಲಿ ಅವರು ಸೋತಿದ್ದಾರೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

ಬೆಂಗಳೂರಿನ 31 ವರ್ಷದ ಮಹಿಳೆಯೊಬ್ಬರು ವರ್ಷದ ಹಿಂದೆ ಜನವರಿಯಲ್ಲಿ 1.74 ಲಕ್ಷ ರೂ. ಗೆ ಅತ್ಯಾಧುನಿಕ 13 ಇಂಚಿನ ಆ್ಯಪಲ್ ಲ್ಯಾಪ್‌ಟಾಪ್ ಮ್ಯಾಕ್‌ಬುಕ್ ಪ್ರೊ ಖರೀದಿಸಿದ್ದರು. ಖರೀದಿ ಮಾಡಿದ ಕೆಲವು ದಿನಗಳ ನಂತರ, ಮಹಿಳೆ ಆಕಸ್ಮಿಕವಾಗಿ ತನ್ನ ಹೊಸ ಮ್ಯಾಕ್​ಬುಕ್​ನ ಕೀಬೋರ್ಡ್‌ ಮೇಲೆ ಕಾಫಿಯನ್ನು ಚೆಲ್ಲಿದ್ದಾರೆ. ನಂತರ, ಮ್ಯಾಕ್‌ಬುಕ್ ಆನ್ ಆಗುತ್ತಿರಲಿಲ್ಲ. ಆಗ ತನ್ನ ಸಾಧನವನ್ನು ಸರಿಪಡಿಸಲು ಅವರು ಆ್ಯಪಲ್ ಸ್ಟೋರ್‌ಗೆ ಹೋದಳು.

Tech Tips: ಕಾರಿನಲ್ಲಿ ಲ್ಯಾಪ್‌ಟಾಪ್ ಚಾರ್ಜ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ಟ್ರಿಕ್

ಇದನ್ನೂ ಓದಿ
ಕಳೆದ 6 ತಿಂಗಳಲ್ಲಿ ನೀವು ಕಾಲ್​ನಲ್ಲಿ ಯಾರೊಂದಿಗೆ ಎಷ್ಟು ಮಾತನಾಡಿದ್ದೀರಿ?
ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ ಆಕರ್ಷಕ ಕ್ಯಾಮೆರಾ ಫೋನ್
ಕ್ರೇಜಿ ಫೀಚರ್ಸ್ ಒಪ್ಪೋ ಫೋನ್ ಆಕರ್ಷಕ ಬೆಲೆಯಲ್ಲಿ ಲಭ್ಯ
ಹೊಸ ವರ್ಷಕ್ಕೆ ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನ್ಯೂಸ್: ಹಣ ಪಾವತಿಸಬೇಕು

AppleCare+ ಸೇವಾ ಕವರೇಜ್‌ಗಾಗಿ ತಾನು ₹ 22, 900 ಪಾವತಿಸಿದ್ದೇನೆ ಎಂದು ಮಹಿಳೆ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಆ್ಯಪಲ್‌ನ ಪ್ರಮಾಣೀಕೃತ ಮಾರಾಟಗಾರರಾದ ಲ್ಯಾಪ್‌ಟಾಪ್‌ನ ಮಾರಾಟಗಾರರು ಲ್ಯಾಪ್‌ಟಾಪ್ ಅನ್ನು ಸರಿಪಡಿಸದೆ ಮಹಿಳೆಗೆ ಹಿಂತಿರುಗಿಸಿದ್ದಾರೆ, ಕಾಫಿ ಚೆಲ್ಲಿ ಮ್ಯಾಕ್​ಬುಕ್​ಗೆ ಹಾಕಿ ಉಂಟಾಗಿರುವುದು AppleCare+ ಅಡಿಯಲ್ಲಿ ಬರುವುದಿಲ್ಲ ಎಂದು ಕಂಪನಿ ಹೇಳಿದೆ.

ತನ್ನ ಮ್ಯಾಕ್‌ಬುಕ್ ಅನ್ನು ಸರಿಪಡಿಸದ ನಂತರ ಆ್ಯಪಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಐಕೇರ್ ಆಂಪಲ್ ಟೆಕ್ನಾಲಜೀಸ್ ಮತ್ತು ಇಮ್ಯಾಜಿನ್ ಸ್ಟೋರ್ ಅನ್ಯಾಯದ ವ್ಯಾಪಾರದ ವಿರುದ್ಧ ಆರೋಪಿಸಿ ಗ್ರಾಹಕರ ವಿವಾದಗಳ ಪರಿಹಾರ ಆಯೋಗಕ್ಕೆ ದೂರು ನೀಡಿದರು. ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದಾಗ, ಯಾವುದೇ ದ್ರವದ ಸೋರಿಕೆಯಿಂದಾಗಿ ಆಂತರಿಕ ಭಾಗಗಳಿಗೆ ಆಕಸ್ಮಿಕ ಅಥವಾ ಉದ್ದೇಶಪೂರ್ವಕವಲ್ಲದ ಹಾನಿ AppleCare+ ಅಡಿಯಲ್ಲಿ ಒಳಗೊಳ್ಳುವುದಿಲ್ಲ ಎಂದು ಆ್ಯಪಲ್ ಇಂಡಿಯಾ ಹೇಳಿದ ನಂತರ ಮಹಿಳೆ ತನ್ನ ಪ್ರಕರಣವನ್ನು ಕಳೆದುಕೊಂಡಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Fri, 5 January 24