Tech Tips: ಕಾರಿನಲ್ಲಿ ಲ್ಯಾಪ್‌ಟಾಪ್ ಚಾರ್ಜ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ಟ್ರಿಕ್

Laptop Car Charger: ಲ್ಯಾಪ್‌ಟಾಪ್ ಕಾರ್ ಚಾರ್ಜರ್: ಕಾರಿನಲ್ಲಿ ಮೊಬೈಲ್ ಚಾರ್ಜ್ ಆಗುತ್ತದೆ. ಇದು ಎಲ್ಲರಿಗೂ ಗೊತ್ತು. ಆದರೆ ಕಾರಿನಲ್ಲಿ ಲ್ಯಾಪ್‌ಟಾಪ್ ಚಾರ್ಜ್ ಮಾಡುವ ವಿಧಾನ ಹೇಗೆ ಗೊತ್ತಾ?. ನೀವು ಸಹ ಕಾರಿನಲ್ಲಿ ಪ್ರಯಾಣಿಸುವಾಗ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸ್ಟೋರಿ ಓದಿ.

Tech Tips: ಕಾರಿನಲ್ಲಿ ಲ್ಯಾಪ್‌ಟಾಪ್ ಚಾರ್ಜ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ಟ್ರಿಕ್
Laptop Car Charger
Follow us
Vinay Bhat
|

Updated on:Jan 02, 2024 | 1:47 PM

ನೀವು ಪ್ರಯಾಣಿಸುವ ಸಂದರ್ಭ ಸ್ಮಾರ್ಟ್​ಫೋನ್ ಅನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಯುಎಸ್‌ಬಿ ಪೋರ್ಟ್‌ಗೆ ಪ್ಲಗ್ ಮಾಡುವ ಮೂಲಕ ಅಥವಾ ಕಾರ್ ಚಾರ್ಜರ್‌ನ ಸಹಾಯದಿಂದ ಪ್ರಯಾಣಿಸುವಾಗ ಫೋನ್ ಚಾರ್ಜ್ ಮಾಡಬಹುದು. ಆದರೆ ಕಾರಿನಲ್ಲಿ ಲ್ಯಾಪ್‌ಟಾಪ್ (Laptop) ಅನ್ನು ಹೇಗೆ ಚಾರ್ಜ್ ಮಾಡಬಹುದು ಎಂದು ನಿಮಗೆ ಗೊತ್ತೇ?. ನೀವು ಕಾರಿನಲ್ಲಿ ಪ್ರಯಾಣಿಸುವ ಸಂದರ್ಭ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಬ್ಯಾಟರಿ ಖಾಲಿಯಾದರೆ ಹೇಗೆ ಚಾರ್ಜ್ ಮಾಡುತ್ತೀರಿ ಎಂದು ಕಲ್ಪಿಸಿಕೊಳ್ಳಿ. ಕಾರಿನಲ್ಲಿ ಪ್ರಯಾಣಿಸುವಾಗ ಅಂತಹ ಪರಿಸ್ಥಿತಿ ಬಂದರೆ, ಅದಕ್ಕಾಗಿ ನೀವು ಮುಂಚಿತವಾಗಿ ಕೆಲವೊಂದನ್ನು ಸಿದ್ಧಪಡಿಸಬೇಕು.

ನೀವು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಎಲ್ಲಿಂದಲಾದರೂ ಲ್ಯಾಪ್‌ಟಾಪ್ ಕಾರ್ ಚಾರ್ಜರ್ ಖರೀದಿಸಬೇಕು. ಲ್ಯಾಪ್‌ಟಾಪ್ ಕಾರ್ ಚಾರ್ಜರ್ ಅನ್ನು ಖರೀದಿಸಿದ ನಂತರ, ನೀವು ಈ ಚಾರ್ಜರ್ ಅನ್ನು ಕಾರಿನಲ್ಲಿಯೇ ಇಟ್ಟುಕೊಳ್ಳಬೇಕು. ಇದರಿಂದ ಮುಂದಿನ ಬಾರಿ ನಿಮ್ಮ ಲ್ಯಾಪ್‌ಟಾಪ್‌ನ ಬ್ಯಾಟರಿ ಕೆಲಸ ಮಾಡುವಾಗ ಖಾಲಿಯಾದರೆ, ಸುಲಭವಾಗಿ ಕಾರ್‌ನಲ್ಲಿ ಲ್ಯಾಪ್‌ಟಾಪ್ ಅನ್ನು ಚಾರ್ಜ್ ಮಾಡಬಹುದು.

Flipkart Offer: ಕಳೆದ ವಾರ ಬಿಡುಗಡೆ ಆದ ಪೋಕೋ M6 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಇದನ್ನೂ ಓದಿ
Image
ಭಾರತದ ಬರೋಬ್ಬರಿ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್
Image
ಸೈಲೆಂಟ್ ಆಗಿ ರಿಲೀಸ್ ಆಯಿತು ಹುವೈ ನೋವಾ Y62 ಸರಣಿ: ಏನಿದೆ ಫೀಚರ್ಸ್?
Image
ವಾಟ್ಸ್​ಆ್ಯಪ್​ನಿಂದ ಫೋನ್ ಸ್ಟೋರೇಜ್ ಫುಲ್ ಆಗುವ ಸಮಸ್ಯೆಗೆ ಇಲ್ಲಿದೆ ಪರಿಹಾರ
Image
ಐಫೋನ್‌ನ ಈ ಎರಡು ಸೆಟ್ಟಿಂಗ್‌ಗಳು ಅಪಾಯಕಾರಿ: ತಕ್ಷಣ ಆಫ್ ಮಾಡಿ

ಸೆಪ್ಟಿಕ್ಸ್ 200W ಕಾರ್ ಲ್ಯಾಪ್‌ಟಾಪ್ ಚಾರ್ಜರ್

ಅಮೆಜಾನ್​ನಲ್ಲಿ ಕಾರ್ ಚಾರ್ಜರ್

ನೀವು ಈ ಕಾರ್ ಲ್ಯಾಪ್‌ಟಾಪ್ ಚಾರ್ಜರ್ ಅನ್ನು ಅಮೆಜಾನ್​ನಲ್ಲಿ ಖರೀದಿಸಬಹುದು. ಈ ಚಾರ್ಜರ್ ಅನ್ನು 18 ತಿಂಗಳ ವಾರಂಟಿಯೊಂದಿಗೆ ಪಡೆಯುತ್ತೀರಿ. ಅಮೆಜಾನ್​ನಲ್ಲಿ 74 ಶೇಕಡಾ ರಿಯಾಯಿತಿಯ ನಂತರ ಇದನ್ನು 2,299 ರೂ. ಗಳಿಗೆ ನಿಮ್ಮದಾಗಿಸಬಹುದು.

CAZAR ಕಾರ್ ಲ್ಯಾಪ್‌ಟಾಪ್ ಚಾರ್ಜರ್

ಫ್ಲಿಪ್‌ಕಾರ್ಟ್‌ನಲ್ಲಿ ಕಾರ್ ಚಾರ್ಜರ್

ಈ ಚಾರ್ಜರ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ, 50 ಪ್ರತಿಶತ ರಿಯಾಯಿತಿಯ ನಂತರ, ಈ ಚಾರ್ಜರ್ ಅನ್ನು ರೂ. 2479 ಕ್ಕೆ ಖರೀದಿಸಬಹುದು. ಈ ಚಾರ್ಜರ್ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ವಿಶೇಷ ವಿಷಯಗಳಿವೆ. ಅಂದರೆ ನೀವು ಈ ಚಾರ್ಜರ್ ಅನ್ನು ಓವರ್ ವೋಲ್ಟೇಜ್ ರಕ್ಷಣೆ, ಓವರ್‌ಲೋಡ್ ರಕ್ಷಣೆ, ಕಡಿಮೆ ವೋಲ್ಟೇಜ್ ರಕ್ಷಣೆ, ಶಾರ್ಟ್ ಸರ್ಕ್ಯೂಟ್ ರಕ್ಷಣೆ ಮತ್ತು ಓವರ್ ಹೀಟಿಂಗ್ ರಕ್ಷಣೆಯೊಂದಿಗೆ ಪಡೆಯುತ್ತೀರಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Tue, 2 January 24