- Kannada News Photo gallery Your phone storage is full from WhatsApp Here is the tricks to free storage
Tech Tips: ವಾಟ್ಸ್ಆ್ಯಪ್ನಿಂದ ಫೋನ್ ಸ್ಟೋರೇಜ್ ಫುಲ್ ಆಗುವ ಸಮಸ್ಯೆಗೆ ಇಲ್ಲಿದೆ ಪರಿಹಾರ
Phone Storage Full: ಹೆಚ್ಚಿನವರ ವಾಟ್ಸ್ಆ್ಯಪ್ನಲ್ಲಿ ಬಂದ ಫೋಟೋ, ವಿಡಿಯೋ ಡೌನ್ಲೋಡ್ ಆಗಿ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸೇವ್ ಆಗುತ್ತದೆ. ಇದರಿಂದ ಅವರ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಈರೀತಿ ಸ್ಟೋರೇಜ್ ಫುಲ್ ಆಗದಂತೆ ತಡೆಯಲು ಒಂದು ಟ್ರಿಕ್ ಇದೆ.
Updated on: Jan 02, 2024 | 6:55 AM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಇಂದು ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸ್ಆ್ಯಪ್ನ (WhatsApp) ಒಂದು ಗ್ರೂಪ್ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್ಗಳು ಬರುತ್ತಲೇ ಇರುತ್ತದೆ.

ವಾಟ್ಸ್ಆ್ಯಪ್ನಲ್ಲಿ ಬಂದ ಫೋಟೋ, ವಿಡಿಯೋ ಡೌನ್ಲೋಡ್ ಆಗಿ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸೇವ್ ಆಗುತ್ತದೆ. ಇದರಿಂದ ನಿಮ್ಮ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಆಗ ಒಂದೊಂದೆ ಫೋಟೋವನ್ನು ಹುಡುಕಿಕೊಂಡು ಡಿಲೀಟ್ ಮಾಡುವ ಪಾಡು ಯಾರಿಗೂ ಬೇಡ. ಆದರೆ, ವಾಟ್ಸ್ಆ್ಯಪ್ನಲ್ಲಿ ಬಂದ ಅನಗತ್ಯ ಫೋಟೋವನ್ನು ಡೌನ್ಲೋಡ್ ಮಾಡದೆ ಇರುವುದಕ್ಕೆ ಟ್ರಿಕ್ ಇದೆ.

ವಾಟ್ಸ್ಆ್ಯಪ್ನಲ್ಲಿ ನಿಮಗೆ ಯಾವುದೇ ಮಿಡಿಯಾ ಬಂದರೆ ಅದು ಅಟೋಮೆಟಿಕ್ ಡೌನ್ಲೋಡ್ ಆಗಿ ಫೋನ್ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಇದನ್ನು ತಡೆಯಲು ವಾಟ್ಸ್ಆ್ಯಪ್ ಸೆಟ್ಟಿಂಗ್ಸ್ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳು ನೀವು ಡೌನ್ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.

ಮೊಬೈಲ್ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್ನಲ್ಲಿ ಸೇವ್ ಮಾಡಬಹುದು.

ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್ನಲ್ಲಿರುವ ಅಪ್ಲಿಕೇಷನ್ಗಳನ್ನು ತೆರೆದಂತೆ ಮೊಬೈಲ್ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ.

ನಮ್ಮ ಮೊಬೈಲ್ನಲ್ಲಿರುವ ಕೆಲವು ಅಪ್ಲಿಕೇಷನ್ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ.



















