Updated on: Jan 01, 2024 | 10:50 AM
2023ಕ್ಕೆ ಬೈಬೈ ಹೇಳಿ 2024ಕ್ಕೆ ಹಾಯ್ ಹಾಯ್ ಹೇಳಾಯ್ತು. ನಾಡಿನಾದ್ಯಂತ ಹೊಸ ವರ್ಷವನ್ನು ಜನರು ಸಖತ್ ಆಗಿಯೇ ವೆಲ್ ಕಮ್ ಮಾಡಿಕೊಂಡರು.
ಹೊಸ ವರ್ಷದ ಮೊದಲ ದಿನವಾದ ಇಂದು (ಡಿ.01) ದೇಲಾಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಬೆಂಗಳೂರಿನ ಕಾಡುಮಲ್ಲೆಶ್ವರ, ಗವಿಗಂಗಾಧರೇಶ್ವರ ಮತ್ತು ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯ್ತು. ಭಗವಂತನಿಗೆ ಬೆಳ್ಳಗ್ಗೆ ಪಂಚಾಭಿಷೇಕ ಮಾಡಿ, ವಿಶೇಷ ಅಲಂಕಾರ ಮಾಡಲಾಗಿದೆ. ನೆರದಿದ್ದ ಭಕ್ತರು ಕಣ್ತುಂಬಿಕೊಂಡರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾದಲ್ಲೂ ವಿಶೇಷ ಪೂಜೆ ನೆರವೇರಿತು. ಭಕ್ತರು ನರಸಿಂಹ ಮತ್ತು ಸುಬ್ರಮಣ್ಯನ ದರ್ಶನ ಪಡೆದು ಪುನೀತರಾದರು.
ಹೊಸ ವರ್ಷ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರ ಲೇಔಟ್ನಲ್ಲಿರುವ ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು.
ದೇವಸ್ಥಾನದ ವತಿಯಿಂದ ಎರಡು ಲಕ್ಷ ಲಾಡು ವಿತರಿಸಲಾಯಿತು. 100ಕ್ಕೂ ಹೆಚ್ಚು ಬಾಣಸಿಗರು ಕಳೆದ 10 ದಿನಗಳಿಂದ ಲಾಡು ತಯಾರಿಸಿದ್ದಾರೆ.
ಹೊಸ ವರ್ಷ ಹಿನ್ನೆಲೆಯಲ್ಲಿ ಮಂತ್ರಾಲಯ ಪೀಠಾಧಿಪತಿ ಡಾ.ಸುಬುಧೇಂದ್ರ ಶ್ರೀಗಳು ರಾಯರ ಮೂಲ ಬೃಂದಾವನಕ್ಕೆ ಪೂಜೆ ಸಲ್ಲಿಸಿದರು.
ಬೇಡಿದ ವರಗಳನ್ನು ನೀಡುವ ಮಂತ್ರಾಲಯದ ಗುರು ರಾಘವೇಂದ್ರ ಮಠದಲ್ಲಿ ಭಕ್ತ ಸಾಗರ. ಕಳೆದ 24 ಗಂಟೆಯಲ್ಲಿ ಸುಮಾರು ಒಂದು ಲಕ್ಷ ಭಕ್ತರು ರಾಯರ ದರ್ಶನ ಪಡೆದಿದ್ದಾರೆ.