Apple iPhone: ಐಫೋನ್‌ನ ಈ ಎರಡು ಸೆಟ್ಟಿಂಗ್‌ಗಳು ಅಪಾಯಕಾರಿ: ತಕ್ಷಣ ಆಫ್ ಮಾಡಿ

Tech Tips: ಐಫೋನ್‌ನ ಸೆಟ್ಟಿಂಗ್‌ಗಳಲ್ಲಿ, ನೀವು ಹಾಟ್‌ಸ್ಪಾಟ್‌ನ ಆಯ್ಕೆಯನ್ನು ನೋಡಿರುತ್ತೀರಿ, ಈ ಆಯ್ಕೆಯು ನಿಜವಾಗಿಯೂ ಅದ್ಭುತವಾಗಿದೆ. ಆದರೆ ಈ ಆಪ್ಷನ್​ನಲ್ಲಿ ಒಂದು ವೈಶಿಷ್ಟ್ಯವನ್ನು ಮರೆಮಾಡಲಾಗಿದೆ. ಅದನ್ನು ಹಾಗೆ ಬಿಟ್ಟರೆ ಸಮಸ್ಯೆಗಳಿಗೆ ಕಾರಣವಾಗಬಹುದು.

Apple iPhone: ಐಫೋನ್‌ನ ಈ ಎರಡು ಸೆಟ್ಟಿಂಗ್‌ಗಳು ಅಪಾಯಕಾರಿ: ತಕ್ಷಣ ಆಫ್ ಮಾಡಿ
iPhone
Follow us
Vinay Bhat
|

Updated on: Jan 01, 2024 | 1:59 PM

ಪ್ರತಿಯೊಬ್ಬ ಮೊಬೈಲ್ (Mobile) ಬಳಕೆದಾರರಿಗೆ ಯಾವಾಗಲೂ ಒಂದು ಭಯ ಇರುತ್ತದೆ. ಅದು ಗೌಪ್ಯತೆಯ ಬಗ್ಗೆ. ನಮ್ಮ ಫೋನಿನಲ್ಲಿ ಅನೇಕ ವೈಯಕ್ತಿಕ ಮಾಹಿತಿ ಅಡಕವಾಗಿರುತ್ತದೆ. ಅದು ಸೋರಿಕೆಯಾದರೆ ಏನು ಗತಿ. ಇದಕ್ಕಾಗಿ ನಮ್ಮ ಫೋನನ್ನು ಜಾಗರೂಕವಾಗಿ ಇಟ್ಟುಕೊಳ್ಳುವುದು ಮುಖ್ಯ. ನೀವು ಆ್ಯಪಲ್ ಐಫೋನ್ ಅನ್ನು ಬಳಸುತ್ತಿದ್ದರೆ, ನಿಮ್ಮ ಫೋನ್‌ನಲ್ಲಿ ಕೆಲವು ಸೆಟ್ಟಿಂಗ್‌ಗಳಿವೆ, ಅದನ್ನು ನೀವು ಇಂದೇ ಆಫ್ ಮಾಡಬೇಕು. ಇಲ್ಲದಿದ್ದರೆ ಈ ಸೆಟ್ಟಿಂಗ್‌ಗಳು ಭವಿಷ್ಯದಲ್ಲಿ ನಿಮ್ಮನ್ನು ತೊಂದರೆ ಸಿಲುಕಿಸಬಹುದು.

ಐಫೋನ್‌ನ ಸೆಟ್ಟಿಂಗ್‌ಗಳಲ್ಲಿ, ನೀವು ಹಾಟ್‌ಸ್ಪಾಟ್‌ನ ಆಯ್ಕೆಯನ್ನು ನೋಡಿರುತ್ತೀರಿ, ಈ ಆಯ್ಕೆಯು ನಿಜವಾಗಿಯೂ ಅದ್ಭುತವಾಗಿದೆ. ಆದರೆ ಈ ಆಪ್ಷನ್​ನಲ್ಲಿ ಒಂದು ವೈಶಿಷ್ಟ್ಯವನ್ನು ಮರೆಮಾಡಲಾಗಿದೆ. ಅದನ್ನು ಹಾಗೆ ಬಿಟ್ಟರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂದು ನಿಮ್ಮ ಐಫೋನ್‌ನಲ್ಲಿ ನೀವು ಆಫ್ ಮಾಡಬೇಕಾದ ಸೆಟ್ಟಿಂಗ್‌ಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳಿತ್ತೇವೆ.

Tech Tips: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಬೇಕೇ?: ಇಲ್ಲಿದೆ ಟಿಪ್ಸ್

ಇದನ್ನೂ ಓದಿ
Image
ಕಳೆದ ವಾರ ಬಿಡುಗಡೆ ಆದ ಪೋಕೋ M6 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Image
ಹೊಸ ವರ್ಷಕ್ಕೆ ಸ್ವಾಗತ: ಜನವರಿಯಲ್ಲಿ ರಿಲೀಸ್ ಆಗಲಿರುವ ಫೋನುಗಳು ಯಾವುವು?
Image
ನಥಿಂಗ್ ಫೋನ್ 2A ಹೇಗಿರುತ್ತದೆ?: ಬೆಲೆ ಎಷ್ಟಿರಬಹುದು?
Image
Samsung ಹೊಸ ವರ್ಷದ ಉಡುಗೊರೆ: 50MP ಕ್ಯಾಮೆರಾದೊಂದಿಗೆ ಈ ಫೋನ್ ಬೆಲೆ ಇಳಿಕೆ

ಮೊದಲು ಈ ಸೆಟ್ಟಿಂಗ್ ಆಫ್ ಮಾಡಿ

ಐಫೋನ್‌ನ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ, ನಂತರ ನೀವು ಹಾಟ್‌ಸ್ಪಾಟ್ ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ಆಟೋ ಜಾಯಿನ್ ಹಾಟ್‌ಸ್ಪಾಟ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಈಗ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಮೊದಲ ಆಯ್ಕೆ ನೆವರ್, ಎರಡನೆಯ ಆಯ್ಕೆ ಆಸ್ಕ್ ಟು ಜಾಯ್ನ್ ಮತ್ತು ಮೂರನೇ ಆಯ್ಕೆ ಸ್ವಯಂಚಾಲಿತವಾಗಿರುತ್ತದೆ. ನೀವು ಮೊದಲ ಆಯ್ಕೆಯನ್ನು ಆರಿಸಿಕೊಳ್ಳಬೇಕು (ನೆವರ್).

ಇದರ ಹೊರತಾಗಿ, ಸಫಾರಿ ಬ್ರೌಸರ್ ಅನ್ನು ಬಳಸುತ್ತಿದ್ದರೆ, ಇದರಲ್ಲಿ ಅನಗತ್ಯ ಜಾಹೀರಾತುಗಳನ್ನು ನೋಡಿದರೆ, ಇದಕ್ಕಾಗಿ ಸೆಟ್ಟಿಂಗ್‌ಗಳಲ್ಲಿ ನೀವು ಈ ಆಯ್ಕೆಯನ್ನು ಆಫ್ ಮಾಡಬೇಕು.

ಐಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಕೆಳಗೆ ಸ್ಕ್ರಾಲ್ ಮಾಡಿ. ಇಲ್ಲಿ ನೀವು ಸಫಾರಿ ಬ್ರೌಸರ್ ಇರುತ್ತದೆ. ಈ ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ, ನೀವು ಮತ್ತೊಮ್ಮೆ ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ, ಕೆಳಭಾಗದಲ್ಲಿ ನೀವು ಅಡ್ವಾನ್ಸ್ ಆಯ್ಕೆಯನ್ನು ನೋಡುತ್ತೀರಿ. ಈ ಆಯ್ಕೆಯನ್ನು ಟ್ಯಾಪ್ ಮಾಡಿದ ನಂತರ, ನೀವು ಗೌಪ್ಯತೆ ಆಯ್ಕೆಯಲ್ಲಿ ಗೌಪ್ಯತೆಯನ್ನು ಕಾಪಾಡುವ ಜಾಹೀರಾತನ್ನು ಆಫ್ ಮಾಡಬೇಕು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ