Sign In

By signing in or creating an account, you agree with Associated Broadcasting Company's Terms & Conditions and Privacy Policy.

Nothing Phone 2A: ನಥಿಂಗ್ ಫೋನ್ 2A ಹೇಗಿರುತ್ತದೆ?: ಬೆಲೆ ಎಷ್ಟಿರಬಹುದು?

ನಥಿಂಗ್‌ನ ನಥಿಂಗ್ ಫೋನ್ 2A ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 27 ರಂದು ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ. ಈ ಮೊದಲು, ಜನವರಿಯಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲು ನಥಿಂಗ್ ತಯಾರಿ ನಡೆಸಿತ್ತು

Nothing Phone 2A: ನಥಿಂಗ್ ಫೋನ್ 2A ಹೇಗಿರುತ್ತದೆ?: ಬೆಲೆ ಎಷ್ಟಿರಬಹುದು?
Nothing Phone 2a
Follow us
Vinay Bhat
|

Updated on: Dec 31, 2023 | 2:29 PM

ಲಂಡನ್ ಮೂಲದ ಟೆಕ್ ಕಂಪನಿ ನಥಿಂಗ್ ಈವರೆಗೆ ಕೇವಲ ಎರಡೇ ಫೋನುಗಳನ್ನು ಬಿಡುಗಡೆ ಮಾಡಿದ್ದರೂ ಇದಕ್ಕೆ ಭರ್ಜರಿ ಬೇಡಿಕೆ ಇದೆ. ಈ ವರ್ಷ ಕಂಪನಿ ನಥಿಂಗ್ ಫೋನ್ 2 ರಿಲೀಸ್ ಮಾಡಿತ್ತು. ಇದೀಗ ಕಂಪನಿ ನಥಿಂಗ್ ಫೋನ್ 2 ಅಡಿಯಲ್ಲಿ ಹೊಸ ನಥಿಂಗ್ ಫೋನ್ 2a (Nothing Phone 2A) ಸ್ಮಾರ್ಟ್‌ಫೋನ್‌ ರಿಲೀಸ್ ಮಾಡಲಿದೆ. 2024 ರ ಆರಂಭದಲ್ಲಿ ಈ ಫೋನ್ ಅನಾವರಣಗೊಳ್ಳಲಿದೆ. ಈ ಫೋನ್‌ಗೆ ಸಂಬಂಧಿಸಿದ ಹಲವು ವಿವರಗಳನ್ನು ಇತ್ತೀಚೆಗೆ ಟಿಪ್‌ಸ್ಟರ್‌ಗಳು ಸೋರಿಕೆ ಮಾಡಿದ್ದಾರೆ. ನಥಿಂಗ್ ಫೋನ್ 2a ಕುರಿತ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

ನಥಿಂಗ್ ಫೋನ್ 2A ವಿನ್ಯಾಸ:

ನಥಿಂಗ್​ನ ಹಳೆಯ ಫೋನ್‌ಗಳಂತೆ, ನಥಿಂಗ್ ಫೋನ್ 2A ವಿಭಿನ್ನ ಲುಕ್ ಹೊಂದಿದೆ. ಇದರಲ್ಲಿ ಲೋಹದ ಚೌಕಟ್ಟನ್ನು ನೀಡಬಹುದು. ಈ ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಯಾವುದೇ ಪಾರದರ್ಶಕ ಗಾಜನ್ನು ನೀಡಲಾಗುವುದಿಲ್ಲ.

50MP ಸೆಲ್ಫಿ ಕ್ಯಾಮೆರಾ, 44W ಫಾಸ್ಟ್ ಚಾರ್ಜರ್: ಸದ್ದಿಲ್ಲದೆ ರಿಲೀಸ್ ಆಯ್ತು ವಿವೋ V30 ಲೈಟ್ 5G

ಇದನ್ನೂ ಓದಿ
Image
Samsung ಹೊಸ ವರ್ಷದ ಉಡುಗೊರೆ: 50MP ಕ್ಯಾಮೆರಾದೊಂದಿಗೆ ಈ ಫೋನ್ ಬೆಲೆ ಇಳಿಕೆ
Image
ನಿಮ್ಮ ಫೋನ್ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಬೇಕೇ?: ಇಲ್ಲಿದೆ ಟಿಪ್ಸ್
Image
ಹೊಸ ವಂಚನೆ: ನಿಮ್ಮ ಮೊಬೈಲ್​ಗೆ ಬರಬಹುದು ಟ್ರಾಫಿಕ್ ಬಿಲ್ ಪಾವತಿ SMS: ಎಚ್ಚರ
Image
ಬೆಲೆ ಕೇವಲ ರೂ. 148, 15 OTT ಪ್ರಯೋಜನ: ಏರ್​ಟೆಲ್​ನಿಂದ ಧಮಾಕ ಆಫರ್

ನಥಿಂಗ್ ಫೋನ್ 2A ಫೀಚರ್ಸ್:

ನಥಿಂಗ್‌ನ ಈ ಸ್ಮಾರ್ಟ್‌ಫೋನ್ 6.7 ಇಂಚಿನ FHD OLED ಡಿಸ್ಪ್ಲೇಯನ್ನು ಹೊಂದಿರುತ್ತದೆ, ಇದು 120Hz ನ ರಿಫ್ರೆಶ್ ದರ ಮತ್ತು 4950mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು 33 ಅಥವಾ 45 ವ್ಯಾಟ್ ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ, ನಥಿಂಗ್ ಫೋನ್ 2A 50+50MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ.

ನಥಿಂಗ್ ಫೋನ್ 2A ಯಾವಾಗ ಬಿಡುಗಡೆ?:

ನಥಿಂಗ್‌ನ ಈ ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 27 ರಂದು ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ. ಈ ಮೊದಲು, ಜನವರಿಯಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲು ನಥಿಂಗ್ ತಯಾರಿ ನಡೆಸಿತ್ತು. ಆದರೆ ಜನವರಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿರುವ ದೃಷ್ಟಿಯಿಂದ, ಫೆಬ್ರವರಿಯಲ್ಲಿ ನಥಿಂಗ್ ಫೋನ್ 2A ಫೋನ್ ಅನ್ನು ಬಿಡುಗಡೆ ಮಾಡಲು ಕಂಪನಿ ನಿಗದಿಪಡಿಸಿದೆ. ನಥಿಂಗ್ ಫೋನ್ ಕುರಿತು ನಾವು ನಿಮಗೆ ನೀಡಿರುವ ಎಲ್ಲಾ ಮಾಹಿತಿಯು ಸೋರಿಕೆಯನ್ನು ಆಧರಿಸಿದೆ. ಸದ್ಯ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ