Galaxy A54 5G: ಸ್ಯಾಮ್‌ಸಂಗ್‌ನಿಂದ ಹೊಸ ವರ್ಷದ ಉಡುಗೊರೆ: 50MP ಕ್ಯಾಮೆರಾದೊಂದಿಗೆ ಈ ಫೋನ್ ಬೆಲೆ ಇಳಿಕೆ

Samsung Mobile under 40000: ನೀವು ಈಗ ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಯಾದ ಬೆಲೆಗಿಂತ 2,000 ರೂ. ಅಗ್ಗಕ್ಕೆ ಪಡೆಯುತ್ತೀರಿ. ಹಾಗಾದರೆ, ಬೆಲೆ ಕಡಿತದ ನಂತರ ಈ ಸ್ಮಾರ್ಟ್​ಫೋನ್ ಎಷ್ಟು ರೂ. ಗೆ ಮಾರಾಟ ಆಗುತ್ತಿದೆ. ಇದರಲ್ಲಿ ಫೀಚರ್ಸ್ ಏನೆಲ್ಲ ಇದೆ?.

Galaxy A54 5G: ಸ್ಯಾಮ್‌ಸಂಗ್‌ನಿಂದ ಹೊಸ ವರ್ಷದ ಉಡುಗೊರೆ: 50MP ಕ್ಯಾಮೆರಾದೊಂದಿಗೆ ಈ ಫೋನ್ ಬೆಲೆ ಇಳಿಕೆ
galaxy a54 5g
Follow us
Vinay Bhat
|

Updated on: Dec 31, 2023 | 1:49 PM

ಹೊಸ ವರ್ಷದ ಆಗಮನಕ್ಕೆ ಒಂದು ದಿನ ಇರುವಾಗ, ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್‌ಸಂಗ್ ಕಂಪನಿ ಗ್ರಾಹಕರನ್ನು ಮೆಚ್ಚಿಸಲು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G (Galaxy A54 5G) ಬೆಲೆಯನ್ನು ಕಡಿಮೆ ಮಾಡಿದೆ. ಗ್ಯಾಲಕ್ಸಿ A54 5G ಫೋನ್‌ನಲ್ಲಿ ಒಟ್ಟು ಎರಡು ರೂಪಾಂತರಗಳಿವೆ. ಈ ಎರಡೂ ರೂಪಾಂತರಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಫೋನ್ ಅನ್ನು ಕಂಪನಿಯ ಅಧಿಕೃತ ಸೈಟ್ ಮತ್ತು ಅಮೆಜಾನ್‌ನಲ್ಲಿ ನೂತನ ಬೆಲೆಯೊಂದಿಗೆ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ.

ನೀವು ಈಗ ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಯಾದ ಬೆಲೆಗಿಂತ 2,000 ರೂ. ಅಗ್ಗಕ್ಕೆ ಪಡೆಯುತ್ತೀರಿ. ಹಾಗಾದರೆ, ಬೆಲೆ ಕಡಿತದ ನಂತರ ಈ ಸ್ಮಾರ್ಟ್​ಫೋನ್ ಎಷ್ಟು ರೂ. ಗೆ ಮಾರಾಟ ಆಗುತ್ತಿದೆ. ಇದರಲ್ಲಿ ಫೀಚರ್ಸ್ ಏನೆಲ್ಲ ಇದೆ ಎಂಬುದನ್ನು ನೋಡೋಣ.

Flipkart Winter Fest sale: ಫ್ಲಿಪ್‌ಕಾರ್ಟ್​ನಲ್ಲಿ ನಡೆಯುತ್ತಿದೆ ವಿಂಟರ್ ಫೆಸ್ಟ್: ಬಂಪರ್ ಆಫರ್ ಮಿಸ್ ಮಾಡ್ಬೇಡಿ

ಇದನ್ನೂ ಓದಿ
Image
ಹೊಸ ವಂಚನೆ: ನಿಮ್ಮ ಮೊಬೈಲ್​ಗೆ ಬರಬಹುದು ಟ್ರಾಫಿಕ್ ಬಿಲ್ ಪಾವತಿ SMS: ಎಚ್ಚರ
Image
ಬೆಲೆ ಕೇವಲ ರೂ. 148, 15 OTT ಪ್ರಯೋಜನ: ಏರ್​ಟೆಲ್​ನಿಂದ ಧಮಾಕ ಆಫರ್
Image
50MP ಸೆಲ್ಫಿ ಕ್ಯಾಮೆರಾ: ಸದ್ದಿಲ್ಲದೆ ರಿಲೀಸ್ ಆಯ್ತು ವಿವೋ V30 ಲೈಟ್ 5G
Image
ಒನ್​ಪ್ಲಸ್​ನ ಈ ಫೋನ್‌ ಮೇಲೆ ಭಾರಿ ರಿಯಾಯಿತಿ: ರೂ. 30 ಸಾವಿರಕ್ಕಿಂತ ಕಡಿಮೆ

ಈ ಸ್ಯಾಮ್‌ಸಂಗ್ ಮೊಬೈಲ್ ಫೋನ್‌ನ ಎರಡು ರೂಪಾಂತರಗಳನ್ನು ಈ ವರ್ಷ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಯಿತು. ಇದರ 8 GB RAM / 128 GB ಸ್ಟೋರೇಜ್ ರೂಪಾಂತರವನ್ನು ರೂ. 38,999 ಕ್ಕೆ ಮತ್ತು 8 GB RAM / 256 GB ಸ್ಟೋರೇಜ್ ರೂಪಾಂತರವನ್ನು ರೂ. 40,999 ಕ್ಕೆ ಅನಾವರಣ ಮಾಡಲಾಗಿತ್ತು.

ಬೆಲೆ ಕಡಿತದ ನಂತರ, ಈಗ 128 GB ಸ್ಟೋರೇಜ್ ರೂಪಾಂತರವನ್ನು 36,999 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಂತೆಯೆ 256 GB ರೂಪಾಂತರವನ್ನು 38,999 ರೂ. ಗಳಿಗೆ ಖರೀದಿಸಬಹುದು. ಇದರ ಹೊರತಾಗಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯ ಮೇಲೆ ನೀವು 2,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಗ್ಯಾಲಕ್ಸಿ A54 5G ಫೀಚರ್ಸ್

ಡಿಸ್‌ಪ್ಲೇ: ಈ ಸ್ಯಾಮ್‌ಸಂಗ್ ಫೋನ್ 120 Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6.4 ಇಂಚಿನ ಪೂರ್ಣ-HD ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ.

ಚಿಪ್‌ಸೆಟ್: ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಫೋನ್‌ನಲ್ಲಿ ವೇಗ ಮತ್ತು ಬಹುಕಾರ್ಯಕಕ್ಕಾಗಿ Exynos 1380 ಚಿಪ್‌ಸೆಟ್ ಅನ್ನು ಬಳಸಲಾಗಿದೆ.

ಬ್ಯಾಟರಿ ಸಾಮರ್ಥ್ಯ: ಈ ಫೋನ್ 5000 mAh ಬ್ಯಾಟರಿಯನ್ನು ಹೊಂದಿದ್ದು, 25 ವ್ಯಾಟ್ ವೇಗದ ಚಾರ್ಜ್ ಬೆಂಬಲವನ್ನು ನೀಡಲಾಗಿದೆ.

ಕ್ಯಾಮೆರಾ ಸೆಟಪ್: ಫೋನ್‌ನ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸಾರ್ ಜೊತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಸೆನ್ಸಾರ್ ಮತ್ತು 5 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಸೆನ್ಸಾರ್ ಇದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವಿದೆ.

ಹೆಚ್ಚುವರಿ ವೈಶಿಷ್ಟ್ಯಗಳು: ಸ್ಟೀರಿಯೋ ಸ್ಪೀಕರ್‌ಗಳ ಬೆಂಬಲದೊಂದಿಗೆ, ಈ ಸ್ಯಾಮ್‌ಸಂಗ್ ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ