ಬೆಲೆ ಕೇವಲ ರೂ. 148, 15 OTT ಅಪ್ಲಿಕೇಶನ್‌ಗಳ ಪ್ರಯೋಜನ: ಏರ್ಟೆಲ್ನಿಂದ ಧಮಾಕ ಆಫರ್
Airtel Rs. 149 plan offers: ಏರ್‌ಟೆಲ್‌ನ 148 ರೂ. ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ ಡೇಟಾವನ್ನು ಹೊರತುಪಡಿಸಿ 15 ಕ್ಕೂ ಹೆಚ್ಚು ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಯಾವ ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು ಎಂಬುದನ್ನು ನೋಡೋಣ.
ಇಂದು ಒಟಿಟಿ ಅಪ್ಲಿಕೇಶನ್‌ಗಳನ್ನು ಹೆಚ್ಚಿನವರು ಬಳಸುತ್ತಿದ್ದಾರೆ. ವೆಬ್ ಸರಣಿಗಳು ಮತ್ತು ಸಿನಿಮಾಗಳನ್ನು ವೀಕ್ಷಿಸಲು ಒಟಿಟಿ ಆ್ಯಪ್ಗೆ ತಿಂಗಳಿಗೆ, ವರ್ಷಕ್ಕೆಂದು ಹಣ ಕಟ್ಟುವವರಿದ್ದಾರೆ. ಆದರೀಗ ದೇಶದ ಪ್ರಸಿದ್ಧ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ (Bharti Airtel) ಬಂಪರ್ ಆಫರ್ ಒಂದನ್ನು ನೀಡಿದೆ. ನೀವು ಹೊಸದಾಗಿ ಒಟಿಟಿ ಅಪ್ಲಿಕೇಷನ್ಗಳ ಪ್ರಯೋಜನ ಪಡೆಯುವ ಪ್ಲಾನ್ನಲ್ಲಿದ್ದರೆ ಈ ಯೋಜನೆ ನಿಮಗೆ ಸಹಕಾರಿ ಆಗಲಿದೆ. ನೀವು ಏರ್‌ಟೆಲ್ ಕಂಪನಿಯ ಪ್ರಿಪೇಯ್ಡ್ ಸಂಖ್ಯೆಯನ್ನು ಹೊಂದಿದ್ದರೆ, ಕಂಪನಿಯು ನಿಮಗಾಗಿ ಉತ್ತಮ ಯೋಜನೆಯನ್ನು ತಂದಿದೆ. ಈ ಯೋಜನೆಯ ಬೆಲೆ ಕೇವಲ 148 ರೂ.
ಏರ್‌ಟೆಲ್‌ನ 148 ರೂ. ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ ಡೇಟಾವನ್ನು ಹೊರತುಪಡಿಸಿ 15 ಕ್ಕೂ ಹೆಚ್ಚು ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಏರ್‌ಟೆಲ್‌ನ ಈ ಯೋಜನೆಯಲ್ಲಿ ನಿಮಗೆ ಯಾವ ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು ಎಂಬುದನ್ನು ನೋಡೋಣ.
ಏರ್‌ಟೆಲ್ 148 ಪ್ಲಾನ್ ವಿವರಗಳು
148 ರೂ. ಗಳ ಈ ಏರ್‌ಟೆಲ್ ಪ್ಲಾನ್‌ನೊಂದಿಗೆ, ನೀವು 15 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಡೇಟಾ ಪ್ಲಾನ್ ಆಗಿದೆ, ಅಂದರೆ ಈ ಯೋಜನೆಯೊಂದಿಗೆ ನೀವು ಕರೆ ಮಾಡುವ ಅಥವಾ SMS ಮಾಡುವ ಪ್ರಯೋಜನವನ್ನು ಪಡೆಯುವುದಿಲ್ಲ.
ಸ್ವದೇಶಿ ಸ್ಮಾರ್ಟ್‌ಫೋನ್ ಲಾವಾ ಸ್ಟೋರ್ಮ್ 5G ಮಾರಾಟ ಆರಂಭ: ಇಂದೇ ಖರೀದಿಸಿ
ಏರ್‌ಟೆಲ್ 148 ಯೋಜನೆ ವ್ಯಾಲಿಡಿಟಿ
148 ರೂ. ಗಳ ಈ ಕೈಗೆಟುಕುವ ಯೋಜನೆಯು ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯ ಮಾನ್ಯತೆಯಷ್ಟೇ ಇರುತ್ತದೆ. ಅಂದರೆ, ನಿಮ್ಮ ಅಸ್ತಿತ್ವದಲ್ಲಿರುವ ಪ್ಲಾನ್‌ನ ವ್ಯಾಲಿಡಿಟಿಯು ಫೆಬ್ರವರಿ 1 ರವರೆಗೆ ಇದ್ದರೆ ಮತ್ತು ನೀವು ಈ 148 ರೂಪಾಯಿಗಳ ಈ ರೀಚಾರ್ಜ್ ಯೋಜನೆಯನ್ನು ಇಂದು ಖರೀದಿಸಿದರೆ, ಈ ಪ್ಲಾನ್ 1 ನೇ ಫೆಬ್ರವರಿ 2024 ರವರೆಗೆ ಮಾನ್ಯವಾಗಿರುತ್ತದೆ.
ಹೆಚ್ಚುವರಿ ಪ್ರಯೋಜನಗಳು
148 ರೂ. ಗಳ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ, ಸೋನಿ LIV, ಲಯನ್ಸ್ಗೇಟ್ ಪ್ಲೇ, ಫ್ಯಾನ್ಕೋಡ್, ಎರಾಸ್ ನೌ, Hoichoi ಮತ್ತು ಮನೋರಮಾ ಮ್ಯಾಕ್ಸ್ ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಈ ಪ್ಲಾನ್‌ನೊಂದಿಗೆ 15 GB ಡೇಟಾ ಲಭ್ಯವಿದೆ, ಆದರೆ ಡೇಟಾ ಖಾಲಿಯಾದ ನಂತರ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ.
ಜಿಯೋ 148 ಯೋಜನೆ
ಏರ್‌ಟೆಲ್‌ಗೆ ಪೈಪೋಟಿ ನೀಡಲು, ರಿಲಯನ್ಸ್ ಜಿಯೋ ರೂ. 148 ಡೇಟಾ ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ನೀವು 15 ಕ್ಕೆ ಬದಲಾಗಿ 10 GB ಡೇಟಾವನ್ನು ಪಡೆಯುತ್ತೀರಿ. ಜಿಯೋ ಅಧಿಕೃತ ಸೈಟ್‌ನಲ್ಲಿ 12 OTT ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲಾಗಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಸೋನಿ ಲಿವ್, ಝೀ5, ಜಿಯೋ ಸಿನಿಮಾ ಪ್ರೀಮಿಯಂ, ಲಯನ್ಸ್ಗೇಟ್ ಪ್ಲೇ, ಡಿಸ್ಕವರಿ ಪ್ಲಸ್, ಸ್ ನೆಕ್ಸ್ಟ್, Epic ON ನಂತಹ OTT ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ