AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

50MP ಕ್ಯಾಮೆರಾ, 5000mAh ಬ್ಯಾಟರಿ: ಸೈಲೆಂಟ್ ಆಗಿ ರಿಲೀಸ್ ಆಯಿತು ಹುವೈ ನೋವಾ Y62 ಸರಣಿ

Huawei Nova Y62 and Huawei Nova Y62 Plus Launched: ಹುವೈ ನೋವಾ ವೈ62 ಮತ್ತು ಹುವೈ ನೋವಾ ವೈ62 ಪ್ಲಸ್ ಎಂಬ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಕ್ಟಾ-ಕೋರ್ ಪ್ರೊಸೆಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ. 5,000mAh ಬ್ಯಾಟರಿಯನ್ನು ಹೊಂದಿದ್ದು, ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

50MP ಕ್ಯಾಮೆರಾ, 5000mAh ಬ್ಯಾಟರಿ: ಸೈಲೆಂಟ್ ಆಗಿ ರಿಲೀಸ್ ಆಯಿತು ಹುವೈ ನೋವಾ Y62 ಸರಣಿ
Huawei Nova Y62 and Nova Y62 Plus
Vinay Bhat
|

Updated on: Jan 02, 2024 | 12:03 PM

Share

ಪ್ರಸಿದ್ಧ ಹುವೈ ಕಂಪನಿ ಹೊಸ ವರ್ಷದಂದು ಸದ್ದಿಲ್ಲದೆ ಹೊಸ ಹುವೈ ನೋವಾ Y62 ಸರಣಿಯ (Huawei Nova Y62 Series) ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೊಂದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಹುವೈ ನೋವಾ ವೈ62 ಮತ್ತು ಹುವೈ ನೋವಾ ವೈ62 ಪ್ಲಸ್ ಎಂಬ ಎರಡು ಮಾದರಿಗಳನ್ನು ಒಳಗೊಂಡಿದೆ. ಸದ್ಯಕ್ಕೆ ವಿದೇಶದಲ್ಲಿ ಅನಾವರಣಗೊಂಡಿರುವ ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಬಹುದು. ಹುವೈ ನೋವಾ Y62 ಸರಣಿಯ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಹುವೈ ನೋವಾ Y62, Y62 ಪ್ಲಸ್ ಬೆಲೆ ಮತ್ತು ಲಭ್ಯತೆ:

ಹುವೈ ನೋವಾ Y62 ಮತ್ತು ಹುವೈ ನೋವಾ Y62 ಪ್ಲಸ್ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ದಕ್ಷಿಣ ಆಫ್ರಿಕಾದಲ್ಲಿ ಸಫೈರ್ ಬ್ಲೂ ಮತ್ತು ಮಿಡ್‌ನೈಟ್ ಬ್ಲ್ಯಾಕ್‌ನಲ್ಲಿ ಲಭ್ಯವಿರುತ್ತವೆ.

Nothing Phone 2A: ನಥಿಂಗ್ ಫೋನ್ 2A ಹೇಗಿರುತ್ತದೆ?: ಬೆಲೆ ಎಷ್ಟಿರಬಹುದು?

ಇದನ್ನೂ ಓದಿ
Image
ಐಫೋನ್‌ನ ಈ ಎರಡು ಸೆಟ್ಟಿಂಗ್‌ಗಳು ಅಪಾಯಕಾರಿ: ತಕ್ಷಣ ಆಫ್ ಮಾಡಿ
Image
ಕಳೆದ ವಾರ ಬಿಡುಗಡೆ ಆದ ಪೋಕೋ M6 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Image
ಹೊಸ ವರ್ಷಕ್ಕೆ ಸ್ವಾಗತ: ಜನವರಿಯಲ್ಲಿ ರಿಲೀಸ್ ಆಗಲಿರುವ ಫೋನುಗಳು ಯಾವುವು?
Image
ನಥಿಂಗ್ ಫೋನ್ 2A ಹೇಗಿರುತ್ತದೆ?: ಬೆಲೆ ಎಷ್ಟಿರಬಹುದು?

ಹುವೈ ನೋವಾ Y62, ಹುವೈ ನೋವಾ Y62 ಪ್ಲಸ್ ಫೀಚರ್ಸ್:

ಹುವೈ ನೋವಾ Y62 ಮತ್ತು ಹುವೈ ನೋವಾ Y62 ಪ್ಲಸ್ 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 20:9 ಆಕಾರ ಅನುಪಾತದೊಂದಿಗೆ 6.52-ಇಂಚಿನ IPS LCD HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಕ್ಟಾ-ಕೋರ್ ಪ್ರೊಸೆಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ. ನೋವಾ Y62 4GB RAM ಹೊಂದಿದ್ದರೆ, Y62 Plus 8GB RAM ಹೊಂದಿದೆ.

ಈ ಎರಡೂ ಸ್ಮಾರ್ಟ್‌ಫೋನ್‌ಗಳು 128GB ಅಂತರ್ಗತ ಸಂಗ್ರಹಣೆಯನ್ನು ಹೊಂದಿವೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸಬಹುದು. ಹುವೈ ನೋವಾ Y62 ಮತ್ತು ಹುವೈ ನೋವಾ Y62 ಪ್ಲಸ್ ಸ್ಮಾರ್ಟ್‌ಫೋನ್‌ಗಳು 5,000mAh ಬ್ಯಾಟರಿಯನ್ನು ಹೊಂದಿದ್ದು, ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಫೋನಿನ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗವು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ. ಹುವೈ ನೋವಾ Y62 ಸರಣಿಯು ಆಂಡ್ರಾಯ್ಡ್ 12 ಆಧಾರಿತ EMU 12 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್‌ಗಳು ಹುವೈ ಮೊಬೈಲ್ ಸರ್ವಿಸ್ (HMS) ಆನ್‌ಬೋರ್ಡ್‌ನಲ್ಲಿ ಇದೆ. ಗೂಗಲ್ ಮೊಬೈಲ್ ಸೇವೆಗಳನ್ನು ಹೊಂದಿಲ್ಲ. ಇತರ ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 4G VoLTE, Wi-Fi 802.11 b/g/n, ಬ್ಲೂಟೂತ್ 5.1, GPS, USB-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. ಈ ಸ್ಮಾರ್ಟ್‌ಫೋನ್ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!