32-ಇಂಚಿನ ಸ್ಮಾರ್ಟ್ ಟಿವಿ: 7,000 ರೂ. ಯಿಂದ ಪ್ರಾರಂಭ: ಇಲ್ಲಿದೆ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್ ಟಿವಿ

|

Updated on: Jan 30, 2024 | 12:33 PM

Best Budget Smart TV: ಈ ಹಿಂದೆ ದುಬಾರಿ ಬೆಲೆಗೆ ಸಿಗುತ್ತಿದ್ದ ಸ್ಮಾರ್ಟ್ ಟಿವಿಗಳು ಕೆಲ ದಿನಗಳಿಂದ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ನೀವು 32 ಇಂಚಿನ ಟಿವಿಗಳ ಮೇಲೆ ಕಣ್ಣಿಟ್ಟಿದ್ದರೆ ಇವು ರೂ. 7000 ರಿಂದ ಪ್ರಾರಂಭವಾಗುತ್ತದೆ. ಇವುಗಳಲ್ಲಿ ಎಲ್​ಜಿ, ಸ್ಯಾಮ್​ಸಂಗ್, ಸೋನಿ, ರೆಡ್ಮಿ ಯಂತಹ ಉನ್ನತ ಬ್ರಾಂಡ್‌ಗಳು ಸೇರಿವೆ.

32-ಇಂಚಿನ ಸ್ಮಾರ್ಟ್ ಟಿವಿ: 7,000 ರೂ. ಯಿಂದ ಪ್ರಾರಂಭ: ಇಲ್ಲಿದೆ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್ ಟಿವಿ
Smart TV
Follow us on

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳು (Smart TV) ಹೆಚ್ಚು ಜನಪ್ರಿಯವಾಗುತ್ತಿವೆ. ಬದಲಾಗುತ್ತಿರುವ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸ್ಮಾರ್ಟ್ ಟಿವಿಗಳನ್ನು ಕೂಡ ನವೀಕರಿಸಲಾಗಿದೆ. ಅವುಗಳಲ್ಲಿ, OTT ಪ್ಲಾಟ್‌ಫಾರ್ಮ್‌ಗಳು, ಉತ್ತಮ ವಿಡಿಯೋ ಮತ್ತು ಆಡಿಯೋ ದೃಶ್ಯಗಳು ಸೇರಿವೆ. ಅದರಂತೆ, ಅನೇಕರು ಬಜೆಟ್ ಟಿವಿಗಳನ್ನು ಹುಡುಕುತ್ತಿರುತ್ತಾರೆ. ಈ ಹಿಂದೆ ದುಬಾರಿ ಬೆಲೆಗೆ ಸಿಗುತ್ತಿದ್ದ ಸ್ಮಾರ್ಟ್ ಟಿವಿಗಳು ಕೆಲ ದಿನಗಳಿಂದ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ನೀವು 32 ಇಂಚಿನ ಟಿವಿಗಳ ಮೇಲೆ ಕಣ್ಣಿಟ್ಟಿದ್ದರೆ ಇವು ರೂ. 7000 ರಿಂದ ಪ್ರಾರಂಭವಾಗುತ್ತದೆ. ಇವುಗಳಲ್ಲಿ ಎಲ್​ಜಿ, ಸ್ಯಾಮ್​ಸಂಗ್, ಸೋನಿ, ರೆಡ್ಮಿ ಯಂತಹ ಉನ್ನತ ಬ್ರಾಂಡ್‌ಗಳು ಸೇರಿವೆ.

Mi (32 ಇಂಚು) A ಸರಣಿ HD ರೆಡಿ ಟಿವಿ:

ಈ ಟಿವಿ 60Hz ರಿಫ್ರೆಶ್ ದರದೊಂದಿಗೆ HD ಡಿಸ್​ಪ್ಲೇ ಹೊಂದಿದೆ. ಗೂಗಲ್ TV, ಡ್ಯುಯಲ್ ಬ್ಯಾಂಕ್ Wi-Fi, HDMI ಮತ್ತು USB ಪೋರ್ಟ್‌ಗಳ ಸಹಾಯದಿಂದ ಸಂಪರ್ಕವನ್ನು ಒದಗಿಸಲಾಗಿದೆ. ಡಾಲ್ಬಿ ಆಡಿಯೋ ಸಿಸ್ಟಮ್ ಕೂಡ ಇದೆ. ಇದರ MRP ಬೆಲೆ 24,999. ಅಮೆಜಾನ್​ನಲ್ಲಿ ಶೇಕಡಾ 48 ರಷ್ಟು ರಿಯಾಯಿತಿ ಇದೆ. ಅಂದರೆ ಕೇವಲ ಇದನ್ನು ಕೇವಲ ರೂ. 12,999 ಕ್ಕೆ ಖರೀದಿಸಬಹುದು. ಅಮೆಜಾನ್ ಗ್ರಾಹಕ ವಿಮರ್ಶೆ ರೇಟಿಂಗ್‌ನಲ್ಲಿ ಇದು 4.2 ರೇಟಿಂಗ್ ಅನ್ನು ಹೊಂದಿದೆ.

ರೆಡ್ಮಿ ಎಫ್ ಸರಣಿ:

ಈ HD ರೆಡಿ LED Fire TV 60Hz ರಿಫ್ರೆಶ್ ದರದ ಡಿಸ್​ಪ್ಲೇಯನ್ನು ಹೊಂದಿದೆ. ಡ್ಯುಯಲ್ ಬ್ಯಾಂಕ್ Wi-Fi, HDMI ಮತ್ತು USB ಪೋರ್ಟ್‌ಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಫೈರ್ ಓಎಸ್ 7, ಡಾಲ್ಬಿ ಆಡಿಯೋ, ಡಿಟಿಎಸ್ ವರ್ಚುವಲ್ ಎಕ್ಸ್ ಸಿಸ್ಟಮ್ ಲಭ್ಯವಿರಲಿದೆ. ಇದು ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಂತಹ OTT ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಇದರ ಮೂಲಬೆಲೆ 24,999, ಅಮೆಜಾನ್​ನಲ್ಲಿ 52 ಶೇಕಡಾ ರಿಯಾಯಿತಿ ಲಭ್ಯವಿದೆ. ಅಂದರೆ ಕೇವಲ 11,999 ರೂ. ಗೆ ಪಡೆಯಬಹುದು.

ಇದನ್ನೂ ಓದಿ
ಡೆಡ್​ಲೈನ್ ಬಂತು; ಫಾಸ್​ಟ್ಯಾಗ್​ಗೆ ಕೆವೈಸಿ ಅಪ್​ಡೇಟ್ ಮಾಡುವ ಕ್ರಮ ಇದು
ಒನ್​ಪ್ಲಸ್​ನಿಂದ ಸದ್ದಿಲ್ಲದೆ ಬಂತು ನಾರ್ಡ್ N30 SE ​ಫೋನ್: ಬೆಲೆ ಎಷ್ಟು?
ವಂಚನೆಯ ಕರೆ ನಿಮಗೂ ಬರಬಹುದು, ಎಚ್ಚರಿಕೆ!
ಭಾರತದಲ್ಲಿಂದು ಬರೋಬ್ಬರಿ 6,000mAh ಬ್ಯಾಟರಿಯ ಈ ಬಜೆಟ್ ಫೋನ್ ಬಿಡುಗಡೆ

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡೋದು ಹೇಗೆ ಗೊತ್ತಾ?

ಸ್ಯಾಮ್​ಸಂಗ್ ಎಲ್ಇಡಿ ಟಿವಿ:

ಈ HD ರೆಡಿ LED TV 60Hz ರಿಫ್ರೆಶ್ ದರದ ಡಿಸ್​ಪ್ಲೇ ಹೊಂದಿದೆ. ಸ್ಕ್ರೀನ್ ಹಂಚಿಕೆ, ಬಹು ಸಂಪರ್ಕ ಆಯ್ಕೆಗಳನ್ನು ಒಳಗೊಂಡಿವೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ಇದರ ಮೂಲಬೆಲೆ 18,900 ರೂ. ಆದರೆ, ಅಮೆಜಾನ್​ನಲ್ಲಿ 21 ಶೇಕಡಾ ರಿಯಾಯಿತಿ ಇದೆ. ಅಂದರೆ ಕೇವಲ 14,990 ಕ್ಕೆ ಖರೀದಿಸಬಹುದು. ಇದನ್ನು ಎರಡು HDMI ಪೋರ್ಟ್‌ಗಳು ಮತ್ತು ಒಂದು USB ಪೋರ್ಟ್ ಸಹಾಯದಿಂದ ಸಂಪರ್ಕಿಸಬಹುದು. ವೈಯಕ್ತಿಕ ಕಂಪ್ಯೂಟರ್ ಮತ್ತು ಮ್ಯೂಸಿಕ್ ವ್ಯವಸ್ಥೆಯನ್ನು ಹೊಂದಿದೆ.

ಇಫ್ಫಾಲ್ಕಾನ್ ಎಸ್ ಸರಣಿಯ ಎಲ್ಇಡಿ ಟಿವಿ:

ಇದು ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಬರುತ್ತದೆ. HD ರೆಡಿ LED ಡಿಸ್​ಪ್ಲೇ 60Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ TV, ಗೂಗಲ್ ಅಸಿಸ್ಟೆಂಟ್, Tea Cast, HDR 10 ಬೆಂಬಲದೊಂದಿಗೆ ಬರುತ್ತದೆ. ಇದರ ಮೂಲಬೆಲೆ 19,990 ರೂ. ಅಮೆಜಾನ್​ನಲ್ಲಿ 60 ಪ್ರತಿಶತ ರಿಯಾಯಿತಿಯಲ್ಲಿ ಇದನ್ನು 7,990 ಕ್ಕೆ ಪಡೆಯಬಹುದು.

VW ಎಲ್ಇಡಿ ಟಿವಿ:

ಇದು ಫ್ರೇಮ್‌ಲೆಸ್ ಸರಣಿ HD ರೆಡಿ ಟಿವಿಯಾಗಿದೆ. ಇದರ ವಿನ್ಯಾಸ ತುಂಬಾ ಸ್ಟೈಲಿಶ್ ಆಗಿದೆ. 60Hz ರಿಫ್ರೆಶ್ ದರದೊಂದಿಗೆ HD ಡಿಸ್​ಪ್ಲೇ ಇದೆ. ಇಂಟೆಲಿಜೆಂಟ್ ಪ್ರೊಸೆಸಿಂಗ್ ಎಂಜಿನ್ ತಂತ್ರಜ್ಞಾನ, ಬಹು ಸಂಪರ್ಕ ಆಯ್ಕೆಗಳು ಇವೆ. ಇದರ ಮೂಲಬೆಲೆ 12,999 ಮತ್ತು ಅಮೆಜಾನ್​ನಲ್ಲಿ 48% ರಿಯಾಯಿತಿಯೊಂದಿಗೆ ರೂ. 6,799ಕ್ಕೆ ಖರೀದಿಸಬಹುದು. ಇದು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ