ನೆಟ್‌ಫ್ಲಿಕ್ಸ್-ಹಾಟ್‌ಸ್ಟಾರ್ ವೀಕ್ಷಿಸಲು 1 ರೂ. ಖರ್ಚು ಮಾಡಬೇಕಿಲ್ಲ: ಜಸ್ಟ್ ಹೀಗೆ ಮಾಡಿ
Free OTT Subscription: ಈಗ ಓಟಿಟಿ ಕ್ರೇಜ್ ಎಷ್ಟು ಬೆಳೆದಿದೆ ಎಂದರೆ ಜನರು ಟಿವಿಯನ್ನು ಬಿಟ್ಟು ತಮ್ಮ ಬಿಡುವಿನ ವೇಳೆಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೇ ಸಮಯ ಕಳೆಯುತ್ತಾರೆ. ಹಾಗಾದರೆ, ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್‌ನಂತಹ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಉಚಿತ ಪ್ರವೇಶ ಹೇಗೆ ಎಂದು ನೋಡೋಣ.
ನಿಮ್ಮ ಸ್ನೇಹಿತರು ಹೊಸ ಸಿನಿಮಾ ಅಥವಾ ವೆಬ್ ಸೀರಿಸ್ ನೋಡಿದ ಬಗ್ಗೆ ಸದಾ ಮಾತನಾಡುತ್ತಿರುತ್ತಾರೆ. ಆದರೆ ನಿಮಗೆ ನೋಡಲು ಓಟಿಟಿ (OTT) ಚಂದಾದಾರಿಕೆಯನ್ನು ಹೊಂದಿಲ್ಲ ಎಂದಾದರೆ ಈಗ ತಲೆಕಡೆಸಿಕೊಳ್ಳಬೇಕಿಲ್ಲ. ನೀವು ಯಾವುದೇ ಹೊಸ ಚಲನಚಿತ್ರಗಳು, ವೆಬ್ ಸರಣಿಗಳನ್ನು ನೀವು ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ನಂತಹ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈಗ ಓಟಿಟಿ ಕ್ರೇಜ್ ಎಷ್ಟು ಬೆಳೆದಿದೆ ಎಂದರೆ ಜನರು ಟಿವಿಯನ್ನು ಬಿಟ್ಟು ತಮ್ಮ ಬಿಡುವಿನ ವೇಳೆಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೇ ಸಮಯ ಕಳೆಯುತ್ತಾರೆ. ಹಾಗಾದರೆ, ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್‌ನಂತಹ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಉಚಿತ ಪ್ರವೇಶ ಹೇಗೆ ಎಂದು ನೋಡೋಣ.
ನೀವು ಫೋನ್‌ನಲ್ಲಿ ಏರ್‌ಟೆಲ್ ಸಿಮ್ ಅನ್ನು ಬಳಸುವುದರಿಂದ ಮಾತ್ರ ನೀವು ಈ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ರೀಚಾರ್ಜ್ ಮಾಡಿದರೆ ಪ್ರತ್ಯೇಕವಾಗಿ ಚಂದಾದಾರಿಕೆಗೆ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಏರ್‌ಟೆಲ್ ಕಂಪನಿಯು 839 ರೂಪಾಯಿಗಳು ಮತ್ತು 1499 ರೂಪಾಯಿಗಳ ಎರಡು ಯೋಜನೆಗಳನ್ನು ಹೊಂದಿದೆ. ಈ ಎರಡೂ ಯೋಜನೆಗಳಲ್ಲಿ ನೀವು ಹಲವು ದಿನಗಳ ಮಾನ್ಯತೆ ಮತ್ತು ಉಚಿತ ಕರೆ ಪ್ರಯೋಜನಗಳನ್ನು ಕೂಡ ಪಡೆಯುತ್ತೀರಿ.
Moto G24 Power: ಭಾರತದಲ್ಲಿಂದು ಬರೋಬ್ಬರಿ 6,000mAh ಬ್ಯಾಟರಿಯ ಈ ಬಜೆಟ್ ಫೋನ್ ಬಿಡುಗಡೆ
839 ಯೋಜನೆ:
ಈ ಏರ್‌ಟೆಲ್ ಯೋಜನೆಯು ಗ್ರಾಹಕರಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ನೀವು ದಿನಕ್ಕೆ 2 GB ಡೇಟಾವನ್ನು ಪಡೆಯುತ್ತೀರಿ. ಹೆಚ್ಚುವರಿ ಪ್ರಯೋಜನಗಳ ಕುರಿತು ಮಾತನಾಡುತ್ತಾ, ಗ್ರಾಹಕರಿಗೆ 100SMS ನ ಪ್ರಯೋಜನ ಇರಲಿದೆ. ಜೊತೆಗೆ ಉಚಿತ ಕರೆ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ. ಈ ಯೋಜನೆಯ ವಿಶೇಷವೆಂದರೆ ನೀವು ಡಿಸ್ನಿ ಹಾಟ್ಸ್ಟಾರ್ಗೆ ಚಂದಾದಾರಿಕೆಯನ್ನು ಪಡೆಯುತ್ತೀರಿ. 3 ತಿಂಗಳವರೆಗೆ ಈ ಪ್ರಯೋಜನವನ್ನು ಪಡೆಯಬಹುದು.
1,499 ಯೋಜನೆ:
ಈ ಯೋಜನೆಯಲ್ಲಿ ಕೂಡ ನೀವು 84 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ. ದಿನಕ್ಕೆ 3 GB ಡೇಟಾ ಬಳಸಬಹುದು. ಈ ಯೋಜನೆಯಲ್ಲಿ ಒಟ್ಟು 252 GB ಡೇಟಾವನ್ನು ಒದಗಿಸಲಾಗುತ್ತದೆ. ದಿನಕ್ಕೆ 100 SMS ನ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಓಟಿಟಿ ಸೌಲಭ್ಯವಿದೆ. ಇದರಲ್ಲಿ ನೀವು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತೀರಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ