ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತುಗಳು ಬರುತ್ತಾ?: ಪರಿಹಾರ ಇಲ್ಲಿದೆ

Disney Hotstar Add Free Subscription: ಇತ್ತೀಚೆಗಷ್ಟೆ ಡಿಸ್ನಿ ಹಾಟ್‌ಸ್ಟಾರ್ ಬಳಕೆದಾರರಿಗೆ ಚಂದಾದಾರಿಕೆ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈಗ ನೀವು ಹಾಟ್​ಸ್ಟಾರ್​ನ ಕೆಲವು ಯೋಜನೆಗಳಲ್ಲಿ ಜಾಹೀರಾತುಗಳು ಬರುತ್ತವೆ. ನೀವು ಯಾವುದೇ ಜಾಹೀರಾತುಗಳಿಲ್ಲದೆ ವೀಕ್ಷಿಸಲು ಬಯಸಿದರೆ ಏನು ಮಾಡಬೇಕು?.

ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತುಗಳು ಬರುತ್ತಾ?: ಪರಿಹಾರ ಇಲ್ಲಿದೆ
Disney Hotstar
Follow us
Vinay Bhat
|

Updated on:Jan 27, 2024 | 2:32 PM

ಇಂದಿನ ದಿನಗಳಲ್ಲಿ ಟಿವಿಯಲ್ಲಿ ಸಿನಿಮಾ ಅಥವಾ ಧಾರಾವಾಹಿ ನೋಡುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಇದರ ಹಿಂದೆ ಜನರ ಬಿಡುವಿಲ್ಲದ ಜೀವನವೂ ಕಾರಣ. ಜೊತೆಗೆ ಜಾಹೀರಾತುಗಳ ಕಿರಿಕಿರಿಯೂ ಹೌದು. ಹೆಚ್ಚಿನ ಜನರು ತಮ್ಮ ಪ್ರಯಾಣದ ಸಮಯದಲ್ಲಿ ಧಾರಾವಾಹಿ ಅಥವಾ ಸಿನಿಮಾವನ್ನು ವೀಕ್ಷಿಸುತ್ತಾರೆ. ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ, ನೀವು ಯಾವಾಗ ಬೇಕಾದರೂ ಸಿನಿಮಾ ಮತ್ತು ಧಾರಾವಾಹಿಗಳನ್ನು ಆನಂದಿಸಬಹುದು. ಆದರೆ ಈಗ ಒಟಿಟಿಯಲ್ಲೂ ಆ್ಯಡ್ಸ್ ಕಾಣಿಸಿಕೊಳ್ಳಲಾರಂಭಿಸಿದೆ. ಮುಖ್ಯವಾಗಿ ನೀವು ಡಿಸ್ನಿ ಹಾಟ್‌ಸ್ಟಾರ್ ಅನ್ನು ಬಳಸುತ್ತಿದ್ದರೆ ಮತ್ತು ಇದರಲ್ಲಿ ನಿಮಗೆ ಪದೇ ಪದೇ ಜಾಹೀರಾತು ಬರುತ್ತಿದ್ದರೆ ಅದಕ್ಕೆ ಇಲ್ಲಿದೆ ಪರಿಹಾರ.

ಇತ್ತೀಚೆಗಷ್ಟೆ ಡಿಸ್ನಿ ಹಾಟ್‌ಸ್ಟಾರ್ ಬಳಕೆದಾರರಿಗೆ ಚಂದಾದಾರಿಕೆ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈಗ ನೀವು ಹಾಟ್​ಸ್ಟಾರ್​ನ ಕೆಲವು ಯೋಜನೆಗಳಲ್ಲಿ ಜಾಹೀರಾತುಗಳು ಬರುತ್ತವೆ. ನೀವು ಯಾವುದೇ ಜಾಹೀರಾತುಗಳಿಲ್ಲದೆ ವೀಕ್ಷಿಸಲು ಬಯಸಿದರೆ, ಹಾಟ್​ಸ್ಟಾರ್​ನ ಪ್ರೀಮಿಯಂ ಯೋಜನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಯೋಜನೆಯಲ್ಲಿ ಯಾವುದೇ ಜಾಹೀರಾತು ಇರುವುದಿಲ್ಲ.

ವೊಡಾಫೋನ್ ಐಡಿಯಾದಿಂದ ರಿಪಬ್ಲಿಕ್ ಡೇ ಆಫರ್: ಬರೋಬ್ಬರಿ 50GB ಉಚಿತ ಡೇಟಾ

ಇದನ್ನೂ ಓದಿ
Image
ಸದ್ದಿಲ್ಲದೆ ದಿಢೀರ್ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಬಜೆಟ್ ಫೋನ್
Image
ಬಲಿಷ್ಠ ಪ್ರೊಸೆಸರ್, 50MP ಕ್ಯಾಮೆರಾ: ರಿಲೀಸ್ ಆಯಿತು ವಿವೋ Y100 5G ಫೋನ್
Image
ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿರುವ ಒಪ್ಪೋ ರೆನೋ 11 5G ಖರೀದಿಗೆ ಲಭ್ಯ
Image
ಇದೀಗ ಸೇಲ್ ಕಾಣುತ್ತಿದೆ ಆಸಸ್ ರಾಗ್ ಫೋನ್ 8 ಸರಣಿ, ಬೆಲೆ ಎಷ್ಟು?

ನೀವು ಹಾಟ್​ಸ್ಟಾರ್​ನ ಪ್ರೀಮಿಯಂ ಸದಸ್ಯತ್ವವನ್ನು ತೆಗೆದುಕೊಂಡಿದ್ದರೆ, ಲೈವ್ ಕ್ರೀಡೆಗಳು, ಲೈವ್ ಶೋಗಳಲ್ಲಿ ಜಾಹೀರಾತು ಇರುತ್ತವೆ. ಲೈವ್ ಶೋಗಳ ಹೊರತಾಗಿ, ನೀವು ಯಾವುದೇ ಜಾಹೀರಾತುಗಳಿಲ್ಲದೆ ಚಲನಚಿತ್ರಗಳು, ಧಾರಾವಾಹಿಗಳು ಮತ್ತು ಸಿರೀಸ್​ಗಳನ್ನು ಸ್ಟ್ರೀಮ್ ಮಾಡಬಹುದು.

ನೀವು ಮೊಬೈಲ್ ಮತ್ತು ಸೂಪರ್ ಪ್ಲಾನ್ ಬಳಕೆದಾರರಾಗಿದ್ದರೆ, ಜಾಹೀರಾತುಗಳನ್ನು ನೋಡುತ್ತೀರಿ. ನೀವು ಜಾಹೀರಾತು-ಮುಕ್ತ ವಿಷಯವನ್ನು ವೀಕ್ಷಿಸಲು ಬಯಸಿದರೆ, ಪ್ಲಾನ್ ಅನ್ನು ಅಪ್‌ಗ್ರೇಡ್ ಮಾಡಬಹುದು. ಜಾಹೀರಾತು ಉಚಿತ ಆ್ಯಡ್ ಆನ್ ಸೇವೆಯು ಒಂದು ವರ್ಷದ ಮಾನ್ಯತೆಯೊಂದಿಗೆ ಬರುತ್ತದೆ, ಇದರ ಬೆಲೆ ಕೇವಲ 200 ರೂ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Sat, 27 January 24