AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿವೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳು: ಯಾವುವು ನೋಡಿ

Upcoming Smartphones January 2024: ಜನವರಿ ಅಂತ್ಯದಲ್ಲಿ ಕೆಲವು ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಮೊಬೈಲ್​ಗಳು ಅನಾವರಣಗೊಳ್ಳಲಿದೆ. ಇದರಲ್ಲಿ ರಿಯಲ್ ಮಿ, ಟೆಕ್ನೋ ದಂತಹ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಜನಪ್ರಿಯ ಸಾಧನಗಳನ್ನು ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ.

ಜನವರಿ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿವೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳು: ಯಾವುವು ನೋಡಿ
Smartphone
Vinay Bhat
|

Updated on:Jan 28, 2024 | 12:27 PM

Share

2024 ರ ಮೊದಲ ತಿಂಗಳಲ್ಲಿ ಇಲ್ಲಿಯವರೆಗೆ ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿ (Samsung Galaxy S24 Series), ಒನ್​ಪ್ಲಸ್ 12 ಸೇರಿದಂತೆ ಕೆಲ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆವೆ ಆದರೆ ಫೋನುಗಳ ಬಿಡುಗಡೆ ಕಾರ್ಯಕ್ರಮ ಇನ್ನೂ ಬಾಕಿ ಇದೆ. ಜನವರಿ ಅಂತ್ಯದಲ್ಲಿ ಕೆಲವು ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಮೊಬೈಲ್​ಗಳು ಅನಾವರಣಗೊಳ್ಳಲಿದೆ. ಇದರಲ್ಲಿ ರಿಯಲ್ ಮಿ, ಟೆಕ್ನೋ ದಂತಹ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಜನಪ್ರಿಯ ಸಾಧನಗಳನ್ನು ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ.

ರಿಯಲ್ ಮಿ 12 ಪ್ರೊ: ರಿಯಲ್ ಮಿ 12 ಪ್ರೊ ಫೋನ್ ಜನವರಿ 29 ರಂದು ಬಿಡುಗಡೆಯಾಗಲಿದೆ. ಈ ಫೋನ್ ಫುಲ್‌ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಇದು ಒಎಲ್‌ಇಡಿ ಪ್ಯಾನೆಲ್ ಎಂದು ಹೇಳಲಾಗುತ್ತಿದೆ. 120Hz ರಿಫ್ರೆಶ್ ರೇಟ್ ಇದರಲ್ಲಿ ಕಾಣಬಹುದು. ಕ್ವಾಲ್ಕಂ ಸ್ನಾಪ್​ಡ್ರಾಗನ್ 6 Gen 1 SoC ಮೂಲಕ ಕಾರ್ಯನಿರ್ವಹಿಸಲಿದೆ. ಇದಲ್ಲದೆ, 32-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಅಳವಡಿಸಲಾಗಿದೆ.ಇದು 2X ಜೂಮ್ ಹೊಂದಿದೆ. ಈ ಫೋನ್ ಲೆದರ್ ಫಿನಿಶ್ ವಿನ್ಯಾಸದೊಂದಿಗೆ ಬರಬಹುದು. 5000 mAh ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್ ಬೆಂಬಲವನ್ನು ಸಹ ಪಡೆದುಕೊಂಡಿದೆ.

ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿರುವ ಒಪ್ಪೋ ರೆನೋ 11 5G ಇದೀಗ ಖರೀದಿಗೆ ಲಭ್ಯ: ಬೆಲೆ ಎಷ್ಟು?

ಇದನ್ನೂ ಓದಿ
Image
ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್
Image
ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬರುತ್ತಾ?
Image
ಸದ್ದಿಲ್ಲದೆ ದಿಢೀರ್ ಆಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಬಜೆಟ್ ಫೋನ್
Image
ಬಲಿಷ್ಠ ಪ್ರೊಸೆಸರ್, 50MP ಕ್ಯಾಮೆರಾ: ರಿಲೀಸ್ ಆಯಿತು ವಿವೋ Y100 5G ಫೋನ್

ರಿಯಲ್ ಮಿ 12 ಪ್ರೊ ಪ್ಲಸ್ ರಿಯಲ್ ಮಿ 12 ಪ್ರೊ ಪ್ಲಸ್ ಅನ್ನು ಕಂಪನಿಯ ಮುಂಬರುವ ಸರಣಿಯಲ್ಲಿ ಬಿಡುಗಡೆ ಮಾಡಲಿದೆ. ಈ ಫೋನ್ FHD+ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಅದು OLED ಪ್ಯಾನೆಲ್ ಎಂದು ಹೇಳಲಾಗುತ್ತಿದೆ. 120Hz ರಿಫ್ರೆಶ್ ರೇಟ್ ಅನ್ನು ಇದರಲ್ಲಿ ಕಾಣಬಹುದು. ಕ್ವಾಲ್ಕಂ ಸ್ನಾಪ್​ಡ್ರಾಗನ್ 7s Gen 2 ಚಿಪ್ ಈ ಫೋನ್‌ನಲ್ಲಿದೆ. ಫೋನ್‌ನ ಪ್ರಮುಖ ಅಂಶವೆಂದರೆ ಅದರ 64 ಮೆಗಾಪಿಕ್ಸೆಲ್ ಓಮ್ನಿವಿಷನ್ OV64B 3.2x ಪೆರಿಸ್ಕೋಪ್ ಜೂಮ್ ಲೆನ್ಸ್. ಈ ಫೋನ್ 50MP ಸೋನಿ IMX890 ಸಂವೇದಕವನ್ನು ಸಹ ಹೊಂದಿರುತ್ತದೆ. ಛಾಯಾಗ್ರಹಣದ ವಿಷಯದಲ್ಲಿ, ಫೋನ್ ಬಳಕೆದಾರರನ್ನು ಆಕರ್ಷಿಸುವ ವೈಶಿಷ್ಟ್ಯಗಳೊಂದಿಗೆ ಬರಬಹುದು.

ಟೆಕ್ನೋ ಸ್ಪಾರ್ಕ್ 20 ಟೆಕ್ನೋ ಸ್ಪಾರ್ಕ್ 20 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ. ಕಂಪನಿಯು ಇದದ ಫೀಚರ್ಸ್ ಬಹಿರಂಗಪಡಿಸಲು ಪ್ರಾರಂಭಿಸಿದೆ. ಕೈಗೆಟಕುವ ಬೆಲೆಯಲ್ಲಿ ಫೋನ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಸುಮಾರು 10 ಸಾವಿರ ಎಂಬ ಮಾತಿದೆ. ಇದನ್ನು ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಬೇಕಾಗಿದೆ.

ಟೆಕ್ನೋ ಸ್ಪಾರ್ಕ್ 20 ವಿಶೇಷತೆಗಳ ಕುರಿತು ಮಾತನಾಡುತ್ತಾ, ಇದು 6.6-ಇಂಚಿನ HD+ 90Hz ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹೆಲಿಯೊ ಜಿ85 ಚಿಪ್ ಅನ್ನು ಹೊಂದಿರುತ್ತದೆ. ಇದರ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುತ್ತದೆ. ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 5000mAh ಬ್ಯಾಟರಿಯನ್ನು, 18W ವೇಗದ ಚಾರ್ಜರ್‌ನೊಂದಿಗೆ ಬರಬಹುದು. ಈ ಫೋನ್‌ನಲ್ಲಿ 256 GB ವರೆಗೆ ಸಂಗ್ರಹಣೆಯನ್ನು ಕಾಣಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Sun, 28 January 24

ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್