ಸ್ನಾಪ್‌ಡ್ರಾಗನ್ ಪ್ರೊಸೆಸರ್, 50MP ಕ್ಯಾಮೆರಾ: ರಿಲೀಸ್ ಆಯಿತು ವಿವೋ Y100 5G ಫೋನ್

Vivo Y100 5G Launched: ಇಂಡೋನೇಷ್ಯಾದಲ್ಲಿ ವಿವೋ Y100 5G ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹ್ಯಾಂಡ್ಸೆಟ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್‌ ನೀಡಲಾಗಿದೆ. ಉಳಿದಂತೆ ಇದರ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ನಾಪ್‌ಡ್ರಾಗನ್ ಪ್ರೊಸೆಸರ್, 50MP ಕ್ಯಾಮೆರಾ: ರಿಲೀಸ್ ಆಯಿತು ವಿವೋ Y100 5G ಫೋನ್
Vivo Y100 5G
Follow us
|

Updated on: Jan 27, 2024 | 12:24 PM

ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ಇದೀಗ ಇಂಡೋನೇಷ್ಯಾದಲ್ಲಿ ತನ್ನ ಹೊಸ ವಿವೋ Y100 5G (Vivo Y100 5G) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಚೀನೀ ಮಾರುಕಟ್ಟೆಯಲ್ಲಿ ವಿವೋ Y100, Y100i ಮತ್ತು Y100i ಪವರ್‌ ಇತ್ತೀಚೆಗಷ್ಟೆ ರಿಲೀಸ್ ಆಗಿತ್ತು. ಇಂಡೋನೇಷಿಯನ್ ರೂಪಾಂತರವು ಚೀನೀ ಕೌಂಟರ್‌ಪಾರ್ಟ್‌ಗಿಂತ ಹೆಚ್ಚಿನ ಫೀಚರ್ಸ್ ಹೊಂದಿದೆ. ಇದರಲ್ಲಿ ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್‌ ನೀಡಲಾಗಿದೆ. ಉಳಿದಂತೆ ಇದರ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿವೋ Y100 5G ಬೆಲೆ:

ವಿವೋ Y100 5G ಸ್ಮಾರ್ಟ್​ಫೋನ್​ನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ IDR 3,899,000 (ಸುಮಾರು ರೂ. 20,500) ನಿಗದಿಪಡಿಸಲಾಗಿದೆ. ಹಾಗೆತೆ 8GB RAM ಜೊತೆಗೆ 256GB ಸ್ಟೋರೇಜ್ ಮಾದರಿಗೆ IDR 4,199,000 (ಸುಮಾರು 20,000 ರೂ.). ಇದು ಪ್ರಸ್ತುತ ಇಂಡೋನೇಷ್ಯಾದಲ್ಲಿ ವಿವೋ ಆನ್‌ಲೈನ್ ಸ್ಟೋರ್ ಮತ್ತು ಅಧಿಕೃತ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿದೆ.

Smartphone Camera: ಸ್ಮಾರ್ಟ್​ಫೋನ್​ ಕ್ಯಾಮೆರಾದಲ್ಲಿ ಫೋಟೊ ಚೆನ್ನಾಗಿ ಬರುತ್ತಿಲ್ಲವೇ?

ಇದನ್ನೂ ಓದಿ
Image
ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿರುವ ಒಪ್ಪೋ ರೆನೋ 11 5G ಖರೀದಿಗೆ ಲಭ್ಯ
Image
ಇದೀಗ ಸೇಲ್ ಕಾಣುತ್ತಿದೆ ಆಸಸ್ ರಾಗ್ ಫೋನ್ 8 ಸರಣಿ, ಬೆಲೆ ಎಷ್ಟು?
Image
ವೊಡಾಫೋನ್ ಐಡಿಯಾದಿಂದ ರಿಪಬ್ಲಿಕ್ ಡೇ ಆಫರ್: ಬರೋಬ್ಬರಿ 50GB ಉಚಿತ ಡೇಟಾ
Image
ಜಿಯೋ 91 ರೂ. ಪ್ಲಾನ್: 28 ದಿನ ವ್ಯಾಲಿಡಿಟಿ, ಅನಿಯಮಿತ ಕರೆ, ಪ್ರತಿದಿನ ಡೇಟಾ

ವಿವೋ Y100 5G ಫೀಚರ್ಸ್:

ವಿವೋ Y100 5G ಫೋನ್ 6.6-ಇಂಚಿನ ಪೂರ್ಣ-HD+ (1080 x 2400) AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 1,200 nits ನ ಗರಿಷ್ಠ ಬ್ರೈಟ್​ನೆಸ್ ಅನ್ನು ಹೊಂದಿದೆ. ಇದು 8GB RAM ಮತ್ತು 256GB ವರೆಗಿನ ಅಂತರ್ಗತ ಸಂಗ್ರಹಣೆಯೊಂದಿಗೆ ಜೋಡಿಸಲಾದ ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14-ಆಧಾರಿತ Funtouch OS 14 ನಲ್ಲಿ ರನ್ ಆಗುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, 50-ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಫ್ಲಿಕರ್ ಸಂವೇದಕದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಮುಂಭಾಗದಲ್ಲಿ, ಇದು 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಹ್ಯಾಂಡ್ಸೆಟ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಸಂಪರ್ಕಕ್ಕೆ ಸಂಬಂಧಿಸಿದಂತೆ, ಇದು ಡ್ಯುಯಲ್ ಸಿಮ್ (ನ್ಯಾನೊ), ಎನ್‌ಎಫ್‌ಸಿ, ಬ್ಲೂಟೂತ್ 5.0, ಯುಎಸ್‌ಬಿ ಟೈಪ್-ಸಿ ಪೋರ್ಟ್, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಕ್ಯೂಝಡ್‌ಎಸ್‌ಎಸ್, ಬಿಡಿಎಸ್ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ಅನ್ನು ಬೆಂಬಲಿಸುತ್ತದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ