Vivo X100 Series: ಬೆಲೆ ಬರೋಬ್ಬರಿ 89,999 ರೂ.: ಭಾರತದಲ್ಲಿ ವಿವೋ X100, ವಿವೋ X100 ಪ್ರೊ ಬಿಡುಗಡೆ

Vivo X100, Vivo X100 Pro: ವಿವೋ X100 ಪ್ರೊ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ಹೊಂದಿದೆ. 50-ಮೆಗಾಪಿಕ್ಸೆಲ್ Sony IMX989 OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಮುಖ್ಯ ಕ್ಯಾಮೆರಾ ಹೊಂದಿದೆ.

Vivo X100 Series: ಬೆಲೆ ಬರೋಬ್ಬರಿ 89,999 ರೂ.: ಭಾರತದಲ್ಲಿ ವಿವೋ X100, ವಿವೋ X100 ಪ್ರೊ ಬಿಡುಗಡೆ
Vivo X100 and Vivo X100 Pro
Follow us
Vinay Bhat
|

Updated on: Jan 05, 2024 | 3:17 PM

ಪ್ರಸಿದ್ಧ ವಿವೋ ಕಂಪನಿ ಭಾರತದಲ್ಲಿ ತನ್ನ ವಿವೋ ಎಕ್ಸ್100 ಸರಣಿ (Vivo X100 Series) ಅಡಿಯಲ್ಲಿ ಹೊಸ ವಿವೋ X100 ಮತ್ತು ವಿವೋ X100 ಪ್ರೊ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್‌ಗಳು ಮೀಡಿಯಾಟೆಕ್​ನ ಡೈಮೆನ್ಸಿಟಿ 9300 SoC ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68-ರೇಟೆಡ್ ಬಿಲ್ಡ್ ಅನ್ನು ಹೊಂದಿವೆ. ಸೋನಿ ಲೆನ್ಸ್​ನಿಂದ ಕೂಡಿರುವ ಕ್ಯಾಮೆರಾಗಳು ಅದ್ಭುತವಾಗಿದ್ದು, ಅತ್ಯುತ್ತಮ ಫೋಟೋವನ್ನು ಸೆರೆಯಿಡಿಯುತ್ತದೆ. ವಿವೋ X100 ಮತ್ತು ವಿವೋ X100 ಪ್ರೊ ಫೋನಿನ ಬೆಲೆ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವಿವೋ X100 ಮತ್ತು ವಿವೋ X100 ಪ್ರೊ ಬೆಲೆ, ಲಭ್ಯತೆ:

ವಿವೋ X100 ಪ್ರೊ ಬೆಲೆ ಏಕೈಕ 16GB RAM + 512GB ಸ್ಟೋರೇಜ್ ಮಾದರಿಗೆ 89,999 ರೂ. ನಿಗದಿ ಮಾಡಲಾಗಿದೆ. ವಿವೋ X100 ಬೆಲೆ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 63,999 ರೂ. ಮತ್ತು 16GB RAM +512GB ಸ್ಟೋರೇಜ್ ರೂಪಾಂತರದ ಬೆಲೆ ರೂ. 69,999. ಈ ಎರಡೂ ಫೋನ್‌ಗಳು ಪ್ರಸ್ತುತ ಪ್ರೀ-ಬುಕಿಂಗ್‌ಗೆ ಲಭ್ಯವಿದೆ. ಜನವರಿ 11 ರಿಂದ ಖರೀದಿಗೆ ಸಿಗಲಿದೆ. ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಲಭ್ಯವಿರುತ್ತವೆ.

WhatsApp Data Backup: ಹೊಸ ವರ್ಷಕ್ಕೆ ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನ್ಯೂಸ್: ಹಣ ಪಾವತಿಸಬೇಕು

ಇದನ್ನೂ ಓದಿ
Image
ಮ್ಯಾಕ್‌ಬುಕ್‌ ಮೇಲೆ ಕಾಫಿ ಚೆಲ್ಲಿದ್ದಕ್ಕೆ ಆ್ಯಪಲ್ ವಿರುದ್ಧ ಮೊಕದ್ದಮೆ
Image
ಕಳೆದ 6 ತಿಂಗಳಲ್ಲಿ ನೀವು ಕಾಲ್​ನಲ್ಲಿ ಯಾರೊಂದಿಗೆ ಎಷ್ಟು ಮಾತನಾಡಿದ್ದೀರಿ?
Image
ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ ಆಕರ್ಷಕ ಕ್ಯಾಮೆರಾ ಫೋನ್
Image
ಕ್ರೇಜಿ ಫೀಚರ್ಸ್ ಒಪ್ಪೋ ಫೋನ್ ಆಕರ್ಷಕ ಬೆಲೆಯಲ್ಲಿ ಲಭ್ಯ

SBI ಮತ್ತು HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮುಂಗಡ ಬುಕ್ ಮಾಡುವ ಗ್ರಾಹಕರು 10 ಪ್ರತಿಶತದವರೆಗೆ ಕ್ಯಾಶ್‌ಬ್ಯಾಕ್ ಮತ್ತು ರೂ. 8,000 ಅಪ್‌ಗ್ರೇಡ್ ಬೋನಸ್ ಪಡೆಯಬಹುದು.

ವಿವೋ X100 ಪ್ರೊ ಫೀಚರ್ಸ್:

ಡ್ಯುಯಲ್ ಸಿಮ್ (ನ್ಯಾನೋ) ವಿವೋ X100 ಪ್ರೊ ಆಂಡ್ರಾಯ್ಡ್ 14-ಆಧಾರಿತ FunTouch OS 14 ಮೂಲಕ ರನ್ ಆಗುತ್ತದೆ. ಇದು 6.78-ಇಂಚಿನ (1,260 x 2,800 ಪಿಕ್ಸೆಲ್‌ಗಳು) AMOLED 8T LTPO ಡಿಸ್‌ಪ್ಲೇ, 120Hz ರಿಫ್ರೆಶ್ ದರ ಹೊಂದಿದೆ. ಇದು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ನಲ್ಲಿ ಕಾರ್ಯನಿರ್ವಹಿಸುತ್ತದೆ.

50-ಮೆಗಾಪಿಕ್ಸೆಲ್ Sony IMX989 OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್​ನ Zeiss ಬ್ರಾಂಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. OIS ಜೊತೆಗೆ ಮೆಗಾಪಿಕ್ಸೆಲ್ ಝೈಸ್ APO ಸೂಪರ್-ಟೆಲಿಫೋಟೋ ಕ್ಯಾಮೆರಾ ಇದೆ. ಟೆಲಿಫೋಟೋ ಕ್ಯಾಮೆರಾ 4.3x ಆಪ್ಟಿಕಲ್ ಜೂಮ್ ಅನ್ನು ಬೆಂಬಲಿಸುತ್ತದೆ. ಪ್ರಾಥಮಿಕ ಶೂಟರ್ ಮತ್ತು ಟೆಲಿಫೋಟೋ ಕ್ಯಾಮೆರಾ ಎರಡೂ 100x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತವೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ವಿವೋ X100 ಪ್ರೊ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 7, ಬ್ಲೂಟೂತ್ 5.4, NFC, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ದೃಢೀಕರಣಕ್ಕಾಗಿ ಹ್ಯಾಂಡ್ಸೆಟ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ.

ವಿವೋ X100 ಫೀಚರ್ಸ್:

ವಿವೋ X100 ಪ್ರೊ ಮಾದರಿಯಂತೆಯೇ ಇದು ಕೂಡ ಅದೇ ಸಾಫ್ಟ್‌ವೇರ್ ಮತ್ತು ಡಿಸ್​ಪ್ಲೇ ಫೀಚರ್ಸ್ ಹೊಂದಿದೆ. ಇದು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿವೋ X100 ಸಹ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX920 VCS ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 64-ಮೆಗಾಪಿಕ್ಸೆಲ್ Zeiss ಕ್ಯಾಮೆರಾ ಜೊತೆಗೆ ಸೂಪರ್-ಟೆಲಿಫೋಟೋಕ್ಸ್ ಅನ್ನು ಪ್ಯಾಕ್ ಮಾಡುತ್ತದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ. ಇದು 120W ವೇಗದ ಚಾರ್ಜಿಂಗ್ ಬೆಂಬಲಕ್ಕಾಗಿ 5,000mAh ಬ್ಯಾಟರಿಯನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ