ಒಪ್ಪೋ (Oppo) ಕಂಪನಿ ಬಿಡುಗಡೆ ಮಾಡುವ ಬಹುತೇಕ ಸ್ಮಾರ್ಟ್ಫೋನ್ಗಳಲ್ಲಿ ಕ್ಯಾಮೆರಾ ವಿಶೇಷವಾಗಿ ಇರುತ್ತದೆ. ಅದರಲ್ಲೂ ತನ್ನ ರೆನೋ ಸರಣಿಯ ಫೋನ್ಗಳನ್ನು ಕ್ಯಾಮೆರಾ ಪ್ರಿಯರಿಗಾಗಿಯೇ ತಯಾರಿಸುತ್ತದೆ. ಇದರಲ್ಲಿ ಒಪ್ಪೋ ಸಂಸ್ಥೆ ಕಳೆದ ವರ್ಷ ಒಪ್ಪೋ ರೆನೋ 7 ಸರಣಿ ಅಡಿಯಲ್ಲಿ ರೆನೋ 7 ಮತ್ತು ರೆನೋ 7 ಪ್ರೊ (Oppo Reno 7 Pro 5G) ಎಂಬ ಎರಡು ಮೊಬೈಲ್ ಅನ್ನು ಬಿಡುಗಡೆ ಮಾಡಿತ್ತು. ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ್ದ ಈ ಫೋನ್ ಭರ್ಜರಿ ಸೇಲ್ ಆಗಿತ್ತು. ಈಗಲೂ ಈ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿದೆ. ಇದರ ನಡುವೆ ಒಪ್ಪೋ ಕಂಪನಿ ತನ್ನ ರೆನೋ 7 ಪ್ರೊ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಅತಿ ಕಡಿಮೆ ಬೆಲೆಗೆ ಈ ಸ್ಮಾರ್ಟ್ಫೋನನ್ನು (Smartphone) ನೀವು ಖರೀದಿಸಬಹುದು.
ಆಫರ್ ಏನು?:
ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್ 12 GB RAM + 256 GB ಸ್ಟೋರೇಜ್ ವೇರಿಯಂಟ್ 40,990 ರೂ. ಗೆ ಅನಾವರಣಗೊಂಡಿತ್ತು. ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೇಜ್ನಲ್ಲಿ ಈ ಫೋನ್ 34,899 ರೂ. ಗಳ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಶೇ. 15 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರೊಂದಿಗೆ ಬ್ಯಾಂಕ್‌ಗಳಿಂದ ಕೆಲವು ಆಫರ್ ಸಹ ಲಭ್ಯವಾಗಲಿದ್ದು 1,500 ರೂ. ಡಿಸ್ಕೌಂಟ್ ಪಡೆಯಬಹುದು. ಅಂತೆಯೆ 20,000 ರೂ. ವರೆಗಿನ ಎಕ್ಸ್‌ಚೇಂಜ್ ಕೊಡುಗೆ ಸಹ ನೀಡಲಾಗಿದೆ.
FASTag Balance Check: ನಿಮ್ಮ ಫಾಸ್ಟ್ಟ್ಯಾಗ್ನಲ್ಲಿ ಎಷ್ಟು ಹಣವಿದೆ ಎಂದು ನೋಡುವುದು ಹೇಗೆ?: ಇಲ್ಲಿದೆ ನೋಡಿ
ಏನಿದೆ ಫೀಚರ್ಸ್?:
ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್ ಮತ್ತು 180Hz ಟಚ್ ರೆಸ್ಪಾನ್ಸ್ ರೇಟ್ ಅನ್ನು ಪಡೆದುಕೊಂಡಿದ್ದು ಗೋರಿಲ್ಲಾ ಗ್ಲಾಸ್ 5ಪ್ರೊಟೆಕ್ಷನ್ ನೀಡಲಾಗಿದೆ. ಬಲಿಷ್ಠವಾದ ಮೀಡಿಯಾಟೆಕ್ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಕಲರ್ ಒಎಸ್ 12 ನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ imx766 ಸೆನ್ಸಾರ್ ಅಳವಡಿಸಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ imx709 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಒಪ್ಪೋ ರೆನೋ 7 ಪ್ರೊ ಫೋನಿನ ಬ್ಯಾಟರಿ ಕೂಡ ಬಲಿಷ್ಠವಾಗಿದ್ದು 4500 mAh ಸಾಮರ್ಥ್ಯದ ಹೊಂದಿದೆ. ಇದು 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನನ್ನು ಸ್ಟಾರ್ಟ್ರೈಲ್ಸ್ ಬ್ಲೂ ಮತ್ತು ಸ್ಟಾರ್ಲೈಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Sat, 11 March 23