FASTag Balance Check: ನಿಮ್ಮ ಫಾಸ್ಟ್ಟ್ಯಾಗ್ನಲ್ಲಿ ಎಷ್ಟು ಹಣವಿದೆ ಎಂದು ನೋಡುವುದು ಹೇಗೆ?: ಇಲ್ಲಿದೆ ನೋಡಿ
Tech Tips: ಬಳಕೆದಾರರು ಬ್ಯಾಂಕ್ ಪೋರ್ಟಲ್‌ಗಳು, ಸ್ಮಾರ್ಟ್‌ಫೋನ್‌ಗಳಲ್ಲಿನ ಡಿಜಿಟಲ್ UPI ಅಪ್ಲಿಕೇಶನ್‌ಗಳು ಮತ್ತು NHAI ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
ನೀವು ವಾಹನ ಚಲಾಯಿಸುವವರಾಗಿದ್ದರೆ ನಿಮಗೆ ಫಾಸ್ಟ್‌ಟ್ಯಾಗ್ ಕುರಿತು ತಿಳಿದೇ ಇರುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭಿಸಿದ ಪ್ರಕ್ರಿಯೆ ಇದಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ (Highway Toll Plaza) ಎಲೆಕ್ಟ್ರಾನಿಕ್ ಸಂಗ್ರಹಣೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಹೆದ್ದಾರಿಗಳಲ್ಲಿ ಸಾರ್ವಜನಿಕ ಮತ್ತು ವಾಣಿಜ್ಯ ವಾಹನಗಳ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್‌ಗಳನ್ನು ಕಡ್ಡಾಯ ಕೂಡ ಮಾಡಲಾಗಿದೆ. ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರ್ ಎಫ್‍ಐಡಿ) ಆಧಾರಿತ ಫಾಸ್ಟ್‌ಟ್ಯಾಗನ್ನು (FASTag) ವಾಹನದ ಮುಂಭಾಗದ ಗಾಜಿಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗುತ್ತದೆ.
ಫಾಸ್ಟ್‌ಟ್ಯಾಗ್ ಬಳಸಲು ನೀವು ಅದನ್ನು ರೀಚಾರ್ಜ್ ಮಾಡಬೇಕು. ಅಂತಹ ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಅದರಲ್ಲಿ ಎಷ್ಟು ಹಣ ಉಳಿದಿದೆ ಎಂದು ಸಹ ನಾವು ತಿಳಿದುಕೊಳ್ಳಬೇಕು. ಹಾಗಾದರೆ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಯಾವ ರೀತಿಯಲ್ಲಿ ಪರಿಶೀಲಿಸಬಹುದು ಎಂಬುದನ್ನು ನೋಡೋಣ. ಬಳಕೆದಾರರು ಬ್ಯಾಂಕ್ ಪೋರ್ಟಲ್‌ಗಳು, ಸ್ಮಾರ್ಟ್‌ಫೋನ್‌ಗಳಲ್ಲಿನ ಡಿಜಿಟಲ್ UPI ಅಪ್ಲಿಕೇಶನ್‌ಗಳು ಮತ್ತು NHAI ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
Tech Tips: ಬ್ಯಾಂಕ್ ಅಕೌಂಟ್ನಲ್ಲಿ ಎಷ್ಟು ಹಣವಿದೆ ಎಂದು ವಾಟ್ಸ್ಆ್ಯಪ್ನಲ್ಲಿ ನೋಡುವುದು ಹೇಗೆ?: ಇಲ್ಲಿದೆ ಟ್ರಿಕ್
- ಬ್ಯಾಂಕ್ ನೀಡುವ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಲು ನೀವು ಆನ್‌ಲೈನ್‌ನಲ್ಲಿ ಮೀಸಲಾದ ಪೋರ್ಟಲ್‌ಗೆ ಭೇಟಿ ನೀಡಬಹುದು.
- ನೀವು ಬ್ಯಾಂಕ್ ಖಾತೆಗೆ ಲಾಗಿನ್ ಆಗಬೇಕು
- ಇಲ್ಲಿ ಬಾಕಿ ಪರಿಶೀಲಿಸಲು ಮುಖಪುಟದಿಂದ ಫಾಸ್ಟ್‌ಟ್ಯಾಗ್ ಆಯ್ಕೆಗೆ ಹೋದರೆ ಆಯ್ಕೆ ಸಿಗುತ್ತದೆ.
- ಅಂತೆಯೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ‘My FASTag’ ಅಪ್ಲಿಕೇಶನ್ ಡೌಲ್ಲೋಡ್ ಮಾಡಿ ನೋಡಬಹುದು.
- ಮೊದಲಿಗೆ My FASTag ಖಾತೆಯನ್ನು ಲಾಗ್ ಇನ್ ಮಾಡಿ.
- ನೀವು ಮೊದಲ ಬಾರಿಗೆ ಅಪ್ಲಿಕೇಶನ್ ಬಳಸುತ್ತಿದ್ದರೆ ನೀವು ನೋಂದಾಯಿಸಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
- ಲಾಗಿನ್ ಯಶಸ್ವಿಯಾದ ನಂತರ, ಲಭ್ಯವಿರುವ ಬ್ಯಾಲೆನ್ಸ್ ಅನ್ನು ನೀವು ಕಾಣಬಹುದು.
ಇನ್ನು ಮಿಸ್ಡ್ ಕಾಲ್ ಮೂಲಕ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಎನ್‌ಎಚ್‌ಎಐ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಲು ಸಂಖ್ಯೆಯನ್ನು ಒದಗಿಸುತ್ತದೆ, ಇದನ್ನು ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಲು ಬಳಸಬಹುದು. ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ NHAI ಪ್ರಿಪೇಯ್ಡ್ ವಾಲೆಟ್ ಅನ್ನು ನೀವು ಲಿಂಕ್ ಮಾಡಿದ್ದರೆ ನಂತರ ನೀವು NHAI ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು. ಇದಕ್ಕಾಗಿ, ಮೊದಲು ನೀವು +91 8884333331 ಗೆ ಮಿಸ್ಡ್ ಕಾಲ್ ನೀಡಬೇಕು. ಈ ಎಸ್ಎಮ್ಎಸ್ನಲ್ಲಿ ನಿಮ್ಮ ಸಂಖ್ಯೆಗೆ ಬರುತ್ತದೆ ಮತ್ತು ನಿಮ್ಮ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಆ ಎಸ್ಎಮ್ಎಸ್ನಲ್ಲಿ ತೋರಿಸಲಾಗುತ್ತದೆ.
ಅಂತೆಯೆ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವ ಇನ್ನೊಂದು ಆಯ್ಕೆ ಅಂದರೇ ಅದು ಪೇಟಿಎಮ್ ಯುಪಿಐ ಅಪ್ಲಿಕೇಶನ್ ಮೂಲಕ. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೇಟಿಎಮ್ ಅಪ್ಲಿಕೇಶನ್ ತೆರೆಯಿರಿ. ಬ್ಯಾಲೆನ್ಸ್ ಮತ್ತು ಹಿಸ್ಟರಿ ಆಯ್ಕೆಗೆ ಹೋಗಿ. ಪೇಟಿಎಮ್ ಬ್ಯಾಲೆನ್ಸ್ ಪಕ್ಕದಲ್ಲಿರುವ ಕೆಳಗಿರುವ ಎರೋ ಗುರುತಿನ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಎಷ್ಟಿದೆ ಎಂದು ಪರಿಶೀಲಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ