Kannada News Technology Best Camera Phone Vivo V25 5G Goes on Sale in India Via Flipkart Check Price, Specifications, Offers
Vivo V25 5G: ಕ್ಯಾಮೆರಾದಲ್ಲಿ ಭರ್ಜರಿ ಫೀಚರ್ಗಳಿರುವ ವಿವೋ V25 ಈಗ ಖರೀದಿಗೆ ಲಭ್ಯ: ಆಫರ್ ಏನಿದೆ?
ವಿವೋ ಕಂಪನಿ ಬಳಿಕ ಕಳೆದ ವಾರ ತನ್ನ ಬಹು ನಿರೀಕ್ಷಿತ ವಿವೋ ವಿ25 5ಜಿ (Vivo V25 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿತ್ತು. ಇದೀಗ ಈ ಫೋನ್ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಬಂಪರ್ ಡಿಸ್ಕೌಂಟ್ನೊಂದಿಗೆ ಸೇಲ್ ಕಾಣುತ್ತಿದೆ.
Vivo V25 5G
Follow us on
ಪ್ರಸಿದ್ಧ ವಿವೋ (Vivo) ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ ವಿವೋ ವೈ 75ಎಸ್ (Vivo Y75s) ಫೋನನ್ನು ರಿಲೀಸ್ ಮಾಡಿದ್ದ ಕಂಪನಿ ಬಳಿಕ ಕಳೆದ ವಾರ ತನ್ನ ಬಹು ನಿರೀಕ್ಷಿತ ವಿವೋವಿ25 5ಜಿ (Vivo V25 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿತ್ತು. ಇದೀಗ ಈ ಫೋನ್ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಬಂಪರ್ ಡಿಸ್ಕೌಂಟ್ನೊಂದಿಗೆ ಸೇಲ್ ಕಾಣುತ್ತಿದೆ. ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್, ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾಗಳನ್ನು ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನು ಆಫರ್, ಫೀಚರ್ಗಳಿವೆ ಎಂಬುದನ್ನು ನೋಡೋಣ.
ವಿವೋ V25 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 8GB RAM + 128GB ಮಾದರಿಗೆ 27,999ರೂ. ಮತ್ತು 12GB RAM + 256GB ಆವೃತ್ತಿಗೆ 31,999ರೂ. ನಿಗದಿ ಮಾಡಲಾಗಿದೆ.
ಈ ಫೋನನ್ನು ಪ್ರೀ ಆರ್ಡರ್ ಬುಕ್ಕಿಂಗ್ ಮಾಡಿದ ಗ್ರಾಹಕರು ಹೆಚ್ಡಿಎಫ್ಸಿ, ICICI ಬ್ಯಾಂಕ್ ಅಥವಾ SBI ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ 2,000ರೂ. ರಿಯಾಯತಿ ಪಡೆಯಬಹುದು. ಫ್ಲಿಪ್ಕಾರ್ಟ್ನಲ್ಲಿ ನೋ ಕಾಸ್ಟ್ ಇಎಮ್ಐ ಆಯ್ಕೆಯಿದೆ.
ವಿವೋ V25 ಸ್ಮಾರ್ಟ್‌ಫೋನ್ 1080 x 2404 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ರನ್ ಆಗಲಿದೆ. ಮೆಮೊರಿ ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ.
ಇದನ್ನೂ ಓದಿ
ಈ ಸ್ಮಾರ್ಟ್ಫೋನ್ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 64ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್–ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ.
ಹಿಂಭಾಗದ ಕ್ಯಾಮೆರಾಗಳು ನೈಟ್ ಮೋಡ್, ಪೋರ್ಟ್ರೇಟ್, ಸೂಪರ್–ಮ್ಯಾಕ್ರೋ, ಹೈ ರೆಸಲ್ಯೂಶನ್, ಪನೋರಮಾ, ಲೈವ್ ಫೋಟೋ, ಸ್ಲೋ ಮೋಷನ್ ಸೇರಿದಂತೆ ನೂತನವಾದ ಆಯ್ಕೆಗಳಿವೆ. 50 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ವಿವೋ V25 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. 5G, 4G LTE ಬೆಂಬಲ ಕೂಡ ಪಡೆದುಕೊಂಡಿದೆ.