Fake App: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಹಣ ಕದಿಯುವ ಫೇಕ್ ಆ್ಯಪ್ ಇರಬಹುದು: ಸರ್ಕಾರದಿಂದ ವಾರ್ನಿಂಗ್

ಭಾರತ ಸರ್ಕಾರದ ನೋಡಲ್ ಸೈಬರ್‌ ಸೆಕ್ಯುರಿಟಿ ಏಜೆನ್ಸಿ Cert-In ಇತ್ತೀಚೆಗೆ ಭಾರತದಲ್ಲಿ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡು SOVA ಆಂಡ್ರಾಯ್ಡ್ ಟ್ರೋಜನ್ ವಿರುದ್ಧ ಎಚ್ಚರಿಕೆ ನೀಡಿದೆ. ಜೊತೆಗೆ ನಕಲಿ ಆ್ಯಪ್ ಗುರುತಿಸುವ ಬಗ್ಗೆ ಮಾಹಿತಿ ನೀಡಿದೆ.

Fake App: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಹಣ ಕದಿಯುವ ಫೇಕ್ ಆ್ಯಪ್ ಇರಬಹುದು: ಸರ್ಕಾರದಿಂದ ವಾರ್ನಿಂಗ್
Fake App
Follow us
TV9 Web
| Updated By: Vinay Bhat

Updated on: Sep 20, 2022 | 12:04 PM

ಆಂಡ್ರಾಯ್ಡ್ ಸ್ಮಾರ್ಟ್​ಫೋನುಗಳ ಪ್ಲೇ ಸ್ಟೋರ್ (Play Store) ತೆರೆದರೆ ಸಾಕು ಸಾವಿರಾರು ಆ್ಯಪ್​ಗಳು ಇದರಲ್ಲಿ ಕಾಣಸಿಗುತ್ತದೆ. ಆಂಡ್ರಾಯ್ಡ್ (Android) ಗೂಗಲ್‌ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆ್ಯಪ್​ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ, ಈ ಆ್ಯಪ್​​ಗಳ ರಾಶಿಯಲ್ಲಿ ಫೇಕ್ ಆ್ಯಪ್​​ (Fake App) ಸಹ ಸೇರಿಕೊಳ್ಳುತ್ತವೆ. ತಿಳಿಯದೆ ಈ ನಕಲಿ ಆ್ಯಪ್​ಗಳನ್ನು ನೀವು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಂಡರೆ ಅಪಾಯಕಟ್ಟಿಟ್ಟ ಬುತ್ತಿ. ಬಳಕೆದಾರರ ಖಾಸಗಿ ಫೋಟೋ, ವಿಡಿಯೋ, ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವುದು ಈ ಆ್ಯಪ್​ನ ಮುಖ್ಯ ಉದ್ದೇಶ.

ನಿಮ್ಮ ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಕೆಲವೊಂದನ್ನು ಪರಿಶೀಲಿಸಿ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗಬಹುದು. ಭಾರತ ಸರ್ಕಾರದ ನೋಡಲ್ ಸೈಬರ್‌ ಸೆಕ್ಯುರಿಟಿ ಏಜೆನ್ಸಿ Cert-In ಇತ್ತೀಚೆಗೆ ಭಾರತದಲ್ಲಿ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡು SOVA ಆಂಡ್ರಾಯ್ಡ್ ಟ್ರೋಜನ್ ವಿರುದ್ಧ ಎಚ್ಚರಿಕೆ ನೀಡಿದೆ. ಜೊತೆಗೆ ನಕಲಿ ಆ್ಯಪ್ ಗುರುತಿಸುವ ಬಗ್ಗೆ ಮಾಹಿತಿ ನೀಡಿದೆ.

ನಮ್ಮ ಮೊಬೈಲ್​​ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್​​ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಫೇಕ್ ಆ್ಯಪ್ ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆ್ಯಪ್ ಗೇಮ್ಸ್ ಮತ್ತು ಶೈಕ್ಷಣಿಕ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ.

ಇದನ್ನೂ ಓದಿ
Image
Flying Bike: ವಿಶ್ವದ ಮೊದಲ ಹಾರುವ ಬೈಕ್ ಬಿಡುಗಡೆಗೆ ಸಜ್ಜು; ಹೇಗಿದೆ ಗೊತ್ತಾ ಬೈಕ್?
Image
Flipkart Big Billion Days Sale: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್​ಗೆ ದಿನಗಣನೆ: ಯಾವುದಕ್ಕೆ ಎಷ್ಟು ರಿಯಾಯಿತಿ?
Image
eSIM ಎಂದರೇನು? ಏರ್​ಟೆಲ್, ಜಿಯೋದಿಂದ ಹೊಸ ಮತ್ತು ಹಳೆಯ ಐಫೋನ್​ಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸುವುದು ಹೇಗೆ?
Image
ಸೆ.21ರಿಂದ ಬ್ಲೂ ಟಿಕ್ ಚಂದಾದಾರರಿಗಾಗಿ ಎಡಿಟ್ ಟ್ವೀಟ್ ವೈಶಿಷ್ಟ್ಯ ಹೊರತರಲಿರುವ ಟ್ವಿಟರ್

ಹೆಚ್ಚಿನ ನಕಲಿ ಆ್ಯಪ್ ತಯಾರಕರು ತಮ್ಮ ಆ್ಯಪ್ ಅನ್ನು ಹೆಚ್ಚು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಕಿರು ತಂತ್ರಾಂಶಗಳೇ ಆಗಿರುತ್ತವೆ.

ಸೆಕ್ಯುರಿಟಿ ತಂತ್ರಜ್ಞರು ಎಚ್ಚರಿಸಿದ ಪ್ರಕಾರ, ವೈರಸ್ ಕ್ಲೀನರ್, ವೈರಸ್ ಬೂಸ್ಟರ್, ಆಯಂಟಿ ವೈರಸ್, ಆಪ್ ಲಾಕ್, ಕ್ಲೀನರ್, ಆಯಂಟಿ ವೈರಸ್ ಫ್ರೀ, ವೈರಸ್ ರಿಮೂವರ್, ಗೇಮ್ ಬಿಲಿಯರ್ಡ್ಸ್, ಚಿಲ್ಡ್ರನ್ ಪೊಲೀಸ್, ಗೇಮ್ ಆಫ್ ಕಾರ್ಸ್ ಹೀಗೆಲ್ಲ ವಿಭಿನ್ನ ಹೆಸರುಗಳಲ್ಲಿರುವ ಆ್ಯಪ್ ಗಳು ನಕಲಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮೊದಲು ಆ್ಯಪ್ ನ ನಿಖರ ಹೆಸರು ಪರೀಕ್ಷಿಸಿ ಡೆವಲಪರ್ ಯಾರೆಂದು ನೋಡಿರಿ. ನಂತರ ಆ ಆ್ಯಪ್ಅನ್ನು ಎಷ್ಟು ಜನ ಡೌನ್ಲೋಡ್ ಮಾಡಿದ್ದಾರೆಂದು ನೋಡಿ, ಬಳಕೆದಾರ ರಿವ್ಯೂ ಓದಿ. ಹೆಚ್ಚು ಮಂದಿ ರೇಟಿಂಗ್ಸ್ ನೀಡಿದ್ದರೆ ಮತ್ತು ಅದರ ರೇಟಿಂಗ್ 4 ಕ್ಕಿಂತ ಮೇಲ್ಪಟ್ಟು ಇದ್ದರೆ ಆ ಆ್ಯಪ್ ಅನ್ನು ನೀವು ಇನ್​ಸ್ಟಾಲ್ ಮಾಡಿಕೊಳ್ಳಬಹುದು.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ