eSIM ಎಂದರೇನು? ಏರ್​ಟೆಲ್, ಜಿಯೋದಿಂದ ಹೊಸ ಮತ್ತು ಹಳೆಯ ಐಫೋನ್​ಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸುವುದು ಹೇಗೆ?

ಐಫೋನ್ 14 ಸರಣಿಗಾಗಿ ಆಪಲ್ ಯುಎಸ್​ನಲ್ಲಿ ಇ-ಸಿಮ್ ಮಾದರಿಯನ್ನು ನೀಡುತ್ತಿರುವುದರಿಂದ ನಿಖರವಾಗಿ ಇದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ವಾಸ್ತವವಾಗಿ ಜಿಯೋ, ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾ ಈಗಾಗಲೇ ಐಫೋನ್​ಗಳಿಗೆ ಇ-ಸಿಮ್ ಸೇವೆಯನ್ನು ನೀಡುತ್ತಿವೆ.

eSIM ಎಂದರೇನು? ಏರ್​ಟೆಲ್, ಜಿಯೋದಿಂದ ಹೊಸ ಮತ್ತು ಹಳೆಯ ಐಫೋನ್​ಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸುವುದು ಹೇಗೆ?
ಇ-ಸಿಮ್ ಸಕ್ರಿಯಗೊಳಿಸುವ ವಿಧಾನಗಳು (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on:Sep 19, 2022 | 2:25 PM

ಐಫೋನ್ 14 ಸರಣಿಯ ಯುಎಸ್ ಮಾದರಿಯ ಸಿಮ್ ಕಾರ್ಡ್ ಸ್ಲಾಟ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವ ಮೂಲಕ ಆಪಲ್ ಸ್ಮಾರ್ಟ್ಫೋನ್ ಜಗತ್ತಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಭಾರತ ಮತ್ತು ಇತರ ದೇಶಗಳಲ್ಲಿ ಐಫೋನ್ 14 ಖರೀದಿದಾರರು ಸಿಮ್ ಕಾರ್ಡ್ ಸ್ಲಾಟ್ ಅನ್ನು ಪಡೆಯುತ್ತಾರೆ. ಆದರೆ ಆಪಲ್ 2018 ರಲ್ಲಿ ಆಪಲ್ ವಾಚ್ 3 ಎಲ್​ಟಿಇ ಬಿಡುಗಡೆಯೊಂದಿಗೆ ಇ-ಸಿಮ್ (E-SIM) ಬೆಂಬಲವನ್ನು ಪರಿಚಯಿಸಿತು. ನಂತರ ಇದನ್ನು ಐಫೋನ್​ಗಳಿಗೂ ವಿಸ್ತರಿಸಲಾಯಿತು. ಬಳಕೆದಾರರಿಗೆ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್​ನ ಅನುಕೂಲವನ್ನು ಪಡೆಯಲು ಒಂದು ಭೌತಿಕ ಸಿಮ್ ಕಾರ್ಡ್ ಮತ್ತು ಮತ್ತೊಂದು ಇ-ಸಿಮ್ ಅನ್ನು ಬಳಸುವ ಆಯ್ಕೆಯನ್ನು ನೀಡಲಾಯಿತು.

ವಾಸ್ತವವಾಗಿ ಜಿಯೋ, ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾ ಈಗಾಗಲೇ ಐಫೋನ್​ಗಳಿಗೆ ಇ-ಸಿಮ್ ಸೇವೆಯನ್ನು ನೀಡುತ್ತಿವೆ. ಇ-ಸಿಮ್​ಗಳು ಭಾರತಕ್ಕೆ ಹೊಸದೇನಲ್ಲವಾದರೂ ಹೆಚ್ಚಿನ ಸ್ಮಾರ್ಟ್ಫೋನ್ ಬಳಕೆದಾರರಿಗೆ ಇ-ಸಿಮ್​ಗಳ ಬಳಕೆ ಬಗ್ಗೆ ತಿಳಿದಿಲ್ಲ. ಭಾರತದ ಎಲ್ಲಾ ಐಫೋನ್ ಬಳಕೆದಾರರು ಇ-ಸಿಮ್ ಅನ್ನು ಸಕ್ರಿಯಗೊಳಿಸುವುದಿಲ್ಲ. ಆದರೆ ಈಗ ಐಫೋನ್ 14 ಸರಣಿಗಾಗಿ ಆಪಲ್ ಯುಎಸ್​ನಲ್ಲಿ ಇ-ಸಿಮ್ ಮಾದರಿಯನ್ನು ನೀಡುತ್ತಿರುವುದರಿಂದ ನಿಖರವಾಗಿ ಇದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

E-SIM ಎಂದರೇನು?

ಇ-ಸಿಮ್ ಎಂದರೆ ಎಂಬೆಡೆಡ್ ಸಬ್ಸ್​ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ ಎಂದರ್ಥ. ಇದೊಂದು ವರ್ಚುವಲ್ ಸಿಮ್ ಕಾರ್ಡ್ ಆಗಿದ್ದು, ಇದನ್ನು ಬೆಂಬಲಿತ ಸಾಧನದಲ್ಲಿ ಸರಳವಾಗಿ ಸಕ್ರಿಯಗೊಳಿಸಲಾಗುತ್ತದೆ. ನೀವು ಇಂಟರ್ನೆಟ್ ಮೆಮೊರಿಯನ್ನು ಹೊರತೆಗೆಯಲು ಅಥವಾ ವಿಸ್ತರಿಸಲು ಸಾಧ್ಯವಿಲ್ಲ. ಆದರೆ ನೀವು ಖಂಡಿತವಾಗಿಯೂ ಡೇಟಾವನ್ನು ಉಳಿಸಬಹುದು. ಇ-ಸಿಮ್​ಗಾಗಿ ಸಿಮ್ ಕಾರ್ಡ್ ಡೇಟಾವನ್ನು ಜಿಯೋ, ಏರ್​ಟೆಲ್ ಅಥವಾ ವಿಐ ನಂತಹ ಆಪರೇಟರ್​ಗಳು ಡಿಜಿಟಲ್ ಆಗಿ ವರ್ಗಾಯಿಸುತ್ತಾರೆ.

ಉತ್ತಮ ಇಂಟರ್ನೆಟ್ ವೇಗಗಳು ಅಥವಾ ಉತ್ತಮ ಸೆಲ್ಯುಲಾರ್ ರಿಸೆಪ್ಷನ್ ಅನ್ನು ಒದಗಿಸುವಲ್ಲಿ ಇ-ಸಿಮ್​ಗೆ ಯಾವುದೇ ಸಂಬಂಧವಿರುವುದಿಲ್ಲ. ಇದು ಕೇವಲ ನಿಮ್ಮ ಸಿಮ್ ಕಾರ್ಡ್​ನ ಡಿಜಿಟಲ್ ಪ್ರತಿಯಾಗಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಒಂದೇ ಮೊಬೈಲ್ ಸಂಖ್ಯೆಗಾಗಿ ನೀವು ಇ-ಸಿಮ್ ಮತ್ತು ಭೌತಿಕ ಸಿಮ್ ಎರಡನ್ನೂ ಹೊಂದಲು ಸಾಧ್ಯವಿಲ್ಲ. eSIM ಸಕ್ರಿಯಗೊಂಡ ನಂತರ ನಿಮ್ಮ ಭೌತಿಕ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ.

ನಿಮ್ಮ ಸಿಮ್ ಕಾರ್ಡ್​ ಅನ್ನು ಇ-ಸಿಮ್ ಆಗಿ ಪರಿವರ್ತಿಸಿದ ನಂತರ ಮತ್ತೆ ಮೊದಲಿನದ್ದಕ್ಕೆ ಬದಲಾಯಿಸುವುದು ಕಷ್ಟಸಾಧ್ಯ. ನೀವು ಇ-ಸಿಮ್ ಅನ್ನು ಬದಲಾಯಿಸಲು ಬಯಸಿದರೆ ನೀವು ನಿಮ್ಮ ಟೆಲಿಕಾಂ ಆಪರೇಟರ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಮಾತ್ರವಲ್ಲದೆ ನೀವು ಮತ್ತೊಂದು ಫೋನ್​ಗೆ eSIM ಅನ್ನು ಟ್ವೀಕ್ ಮಾಡಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಇ-ಸಿಮ್ ಅನ್ನು ಸ್ಮಾರ್ಟ್​ ಫೋನ್ ಮತ್ತು ಜೋಡಿ ಸ್ಮಾರ್ಟ್ ವಾಚ್​ನೊಂದಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ, ನಿಮ್ಮ ಐಫೋನ್ ಮತ್ತು ಆಪಲ್ ವಾಚ್ ಎಲ್​ಟಿಇ ಮಾದರಿಗಳಲ್ಲಿ ಅದೇ ಫೋನ್ ಸಂಖ್ಯೆಯೊಂದಿಗೆ ನೀವು ಇ-ಸಿಮ್ ಅನ್ನು ಸಕ್ರಿಯಗೊಳಿಸಬಹುದು.

ಯಾವೆಲ್ಲ ಐಫೋನ್​ಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸಬಹುದು ಮತ್ತು ಹೇಗೆ?

ಐಫೋನ್ 14 ಸರಣಿಯಲ್ಲಿ ಜಿಯೋ ಇ-ಸಿಮ್ ಅನ್ನು ಬೆಂಬಲಿಸಲಾಗುತ್ತದೆ. iPhone 12 mini, iPhone XR, iPhone 11, iPhone 11 Pro, iPhone XS Max, iPhone SE (2020), iPhone 12 Pro Max, iPhone 12 Pro, iPhone 11 Pro Max, iPhone 12 and iPhone XS ಸರಣಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇ-ಸಿಮ್​ಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಫೋನ್ ಐಒಎಸ್ 12.1 ಅಥವಾ ಅದಕ್ಕಿಂತ ಹೆಚ್ಚಿನದಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಐಫೋನ್​ಗಳಲ್ಲಿ ಇ-ಸಿಮ್ ಸಕ್ರಿಯಗೊಳಿಸುವ ವಿಧಾನಗಳು ಈ ಕೆಳಗಿನಂತಿವೆ.

  • ಸೆಟ್ಟಿಂಗ್ಸ್​ಗೆ ಹೋಗಿ ಮತ್ತು ಜನರಲ್ ಮೇಲೆ ಕ್ಲಿಕ್ ಮಾಡಿ, ಈ ವೇಳೆ ಇಐಡಿ ಮತ್ತು ಐಎಂಇಐ ಸಂಖ್ಯೆಯನ್ನು ತೋರಿಸುತ್ತದೆ. ನೀವು ಅದನ್ನು ಬರೆದಿಟ್ಟುಕೊಳ್ಳಿ.
  • eSIM ಸಕ್ರಿಯಗೊಳಿಸಲು GETESIM ಅಂತ ದೊಡ್ಡ ಅಕ್ಷರಗಳಲ್ಲಿ ಬರೆದು ನಂತರ EID ಮತ್ತು IMEI ನಂಬರ್ ಅನ್ನು ಬರೆದು 199ಕ್ಕೆ ಸೆಂಡ್ ಮಾಡಬೇಕು.
  • ನಂತರ 19 ಅಂಕಿಗಳ eSIM ಸಂಖ್ಯೆ ಮತ್ತು eSIM ಪ್ರೊಫೈಲ್ ಕಾನ್ಫಿಗರೇಶನ್ ವಿವರಗಳನ್ನು ಪಡೆಯುತ್ತೀರಿ.
  • 19 ಡಿಜಿಟ್ ಇ-ಸಿಮ್ ಸಂಖ್ಯೆಗಳೊಂದಿಗೆ SIMCHG ಎಂದು ಟೈಪ್ ಮಾಡಿ 199ಕ್ಕೆ ಎಸ್​ಎಂಎಸ್​ ಕಳುಹಿಸಿ.
  • ಸುಮಾರು ಎರಡು ಗಂಟೆಗಳ ಸಮಯದಲ್ಲಿ, ನೀವು 183 ಗೆ ‘1’ ಎಂದು SMS ಮಾಡುವ ಮೂಲಕ ದೃಢೀಕರಿಸಬೇಕಾದ ನವೀಕರಣವನ್ನು ನೀವು ಸ್ವೀಕರಿಸುತ್ತೀರಿ.
  • ನಂತರ ನಿಮಗೆ ಬರುವ ಸ್ವಯಂಚಾಲಿತ ಕರೆಯಲ್ಲಿ 19 ಅಂಕಿಯ ಇ-ಸಿಮ್ ಸಂಖ್ಯೆಯನ್ನು ಕೇಳುತ್ತದೆ. ದೃಢೀಕರಣವು ಯಶಸ್ವಿಯಾದ ನಂತರ SMS ಅನ್ನು ಸ್ವೀಕರಿಸುವಿರಿ.

ಪ್ರೊಫೈಲ್ ಅನ್ನು ಕಾನ್ಫಿಗರ್ ಮಾಡಲು ನೀವು ಅಧಿಸೂಚನೆಯನ್ನು ಸ್ವೀಕರಿಸಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಡೇಟಾ ಯೋಜನೆಯನ್ನು ಸ್ಥಾಪಿಸಿ ಆಯ್ಕೆಮಾಡಿ. ನಂತರ ಮುಂದುವರಿಯಿರಿ. ನೀವು ಅಧಿಸೂಚನೆಯನ್ನು ಸ್ವೀಕರಿಸದಿದ್ದರೆ ಸೆಟ್ಟಿಂಗ್ಸ್​​ಗೆ ಹೋಗಿ ಮತ್ತು ಜಿಯೋ ಡೇಟಾ ಪ್ಲ್ಯಾನ್ ಅನ್ನು ಟ್ಯಾಪ್ ಮಾಡಿ ಇನ್ಸ್ಟಾಲ್ ಮಾಡಲು ಸಿದ್ಧವಾಗಿರುತ್ತದೆ ಮತ್ತು ನಂತರ ಮುಂದುವರಿಯಿರಿ. ಬಳಿಕ ನಿಮ್ಮ ಜಿಯೋ ಇ-ಸಿಮ್ ಅನ್ನು ಈಗ ಸಕ್ರಿಯಗೊಳಿಸಬೇಕು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Mon, 19 September 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ