Flying Bike: ವಿಶ್ವದ ಮೊದಲ ಹಾರುವ ಬೈಕ್ ಬಿಡುಗಡೆಗೆ ಸಜ್ಜು; ಹೇಗಿದೆ ಗೊತ್ತಾ ಬೈಕ್?
ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಾಗ ವಿಮಾನದಂತೆ ಹಾರುವ ಕಾರು ಅಥವಾ ಹಾರುವ ಬೈಕ್ ಇದ್ದಿದ್ದರೆ ಎಷ್ಟು ಚಂದ ಅಲ್ವಾ? ಹಾಗಿದ್ದರೆ ಇನ್ನು ಚಿಂತೆ ಬೇಡ. ಏಕೆಂದರೆ ವಿಶ್ವದ ಮೊದಲ ಹಾರುವ ಬೈಕ್ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಾಗ ಅಯ್ಯೋ ವಿಮಾನದಂತೆ ಹಾರುವ ಕಾರು ಅಥವಾ ಹಾರುವ ಬೈಕ್ ಇದ್ದಿದ್ದರೆ ಎಷ್ಟು ಚಂದ ಅಂತ ಅಂದುಕೊಳ್ಳುವುದು ಸಹಜ. ಈಗಾಗಲೇ ನೀವು ಹಾರುವ ಕಾರಿನ ಬಗ್ಗೆ ಅನೇಕ ಸದ್ದಿಗಳನ್ನು ಓದಿರುತ್ತೀರಿ. ಇದೀಗ ವಿಶ್ವದ ಮೊದಲ ಹಾರುವ ಬೈಕ್ ಬರುತ್ತಿದೆ. ವಾಸ್ತವವಾಗಿ, ಜಪಾನ್‌ನ AERQINS ಕಂಪನಿಯು ಮುಂದಿನ ವರ್ಷ USA ನಲ್ಲಿ ಹಾರುವ ಬೈಕ್ (Flying Bike) ಅನ್ನು ಬಿಡುಗಡೆ ಮಾಡಲಿದೆ. ಅಮೆರಿಕದಲ್ಲಿ ನಡೆದ ಆಟೋ ಶೋನಲ್ಲಿ ಈ ಬೈಕ್ ಪ್ರದರ್ಶಿಸಲಾಗಿತ್ತು. ಸೂಪರ್ ಬೈಕ್ ನಂತೆ ಕಾಣುವ ಈ ಬೈಕಿನ ದೊಡ್ಡ ವೈಶಿಷ್ಟ್ಯವೆಂದರೆ ಗಾಳಿಯಲ್ಲಿ ಹಾರಾಡುವುದು. ಇದೀಗ ಹಾರುವ ಬೈಕ್ ವಿಡಿಯೋ ನೋಡಿ ಎಲ್ಲರೂ ಬೆರಗಾಗಿದ್ದಾರೆ.
ಸುದ್ದಿ ಸಂಸ್ಥೆ ರಾಯಿಟರ್ಸ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಅದರಲ್ಲಿ ಒಬ್ಬ ವ್ಯಕ್ತಿ ಬೈಕ್ ಮೇಲೆ ಕುಳಿತು ಗಾಳಿಯಲ್ಲಿ ಸುಳಿದಾಡುವುದನ್ನು ನೋಡಬಹುದು. ಬೈಕ್‌ಗೆ Exturismo ಎಂದು ಹೆಸರಿಡಲಾಗಿದೆ. Aerwins Xturismo hoverbike ನೆಲದಿಂದ ಗಾಳಿಗೆ ಹಾರಲು ಬಹು ಪ್ರೊಪೆಲ್ಲರ್‌ಗಳನ್ನು (ಹಾರುವ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾದ ಫ್ಯಾನ್‌ನಂತಹ ಸಾಧನ) ಬಳಸುತ್ತದೆ. ಇದು ನಾಲ್ಕು ಸಣ್ಣ ಪ್ರೊಪೆಲ್ಲರ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ ಎರಡು ಮತ್ತು ಹಿಂಭಾಗದಲ್ಲಿ ಎರಡು ದೊಡ್ಡ ಪ್ರೊಪೆಲ್ಲರ್‌ಗಳನ್ನು ಹೊಂದಿದೆ. ದೊಡ್ಡ ಫ್ಯಾನ್‌ಗಳು ಹೋವರ್‌ಬೈಕ್‌ಗೆ ಲಿಫ್ಟ್ ಅನ್ನು ಒದಗಿಸುತ್ತವೆ. ಚಿಕ್ಕ ಫ್ಯಾನ್‌ಗಳು ಸ್ಥಿರಕಾರಿಗಳಾಗಿ ಕಾರ್ಯನಿರ್ವಹಿಸುತ್ತವೆ.
This is the world's first flying bike. The XTURISMO hoverbike is capable of flying for 40 minutes and can reach speeds of up to 62 mph pic.twitter.com/ZPZSHJsmZm
— Reuters (@Reuters) September 16, 2022
ಎಲೆಕ್ಟ್ರಿಕ್ ವಿಮಾನಗಳ ತಯಾರಿಕೆ ಆರಂಭ
ಜಗತ್ತಿನಲ್ಲಿ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡ್ ಆಗುತ್ತವೆ. ಈ ವಿಮಾನಗಳನ್ನು ಹಾರಿಸಲು ವಿಶೇಷ ರೀತಿಯ ಇಂಧನವನ್ನು ಬಳಸಲಾಗುತ್ತದೆ. ಇದನ್ನು ಎಟಿಎಫ್ ಅಂದರೆ ಏರ್ ಟರ್ಬೈನ್ ಇಂಧನ ಎಂದು ಕರೆಯಲಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಎಟಿಎಫ್ ಇಂಧನ ಬಳಕೆ ಕಡಿಮೆಯಾಗಲಿದೆ. ಈಗ ದೊಡ್ಡ ಗಾತ್ರದ ಎಲೆಕ್ಟ್ರಿಕ್ ವಿಮಾನ ತಯಾರಿಕೆಗೆ ಸಿದ್ಧತೆ ಆರಂಭವಾಗಿದೆ. 30 ಆಸನಗಳ ಈ ಎಲೆಕ್ಟ್ರಿಕ್ ವಿಮಾನ ತಯಾರಿಸಲು ಸಿದ್ಧತೆಗಳು ಆರಂಭವಾಗಿದೆ. ಇದನ್ನು ಸ್ವೀಡಿಷ್ ಸ್ಟಾರ್ಟ್-ಅಪ್ ಕಂಪನಿ ಹಾರ್ಟ್ ಏರೋಸ್ಪೇಸ್ ತಯಾರಿಸುತ್ತಿದೆ.
ಕಂಪನಿಯು ಈ ಎಲೆಕ್ಟ್ರಿಕ್ ಪ್ಲೇನ್ ಕುರಿತು ಹಲವಾರು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದೆ. ಇಎಸ್-30 ಹೆಸರಿನ ಈ ಎಲೆಕ್ಟ್ರಿಕ್ ವಿಮಾನದ ವಾಣಿಜ್ಯ ಬಳಕೆ 2028ರ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ. ಬ್ಯಾಟರಿ ಎಲೆಕ್ಟ್ರಿಕ್ ಪ್ಲೇನ್ ಹಾರಲು ನಿರಂತರ ಸಂಶೋಧನೆ ಮಾಡಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ವಿಮಾನವು 2026 ರಿಂದ ಪರೀಕ್ಷಾರ್ಥವಾಗಿ ಹಾರಾಟ ನಡೆಸಲಿದೆ ಎಂದು ಕಂಪನಿ ತಿಳಿಸಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Mon, 19 September 22