Vivo V25 5G: ಕ್ಯಾಮೆರಾದಲ್ಲಿ ಭರ್ಜರಿ ಫೀಚರ್ಗಳಿರುವ ವಿವೋ V25 ಈಗ ಖರೀದಿಗೆ ಲಭ್ಯ: ಆಫರ್ ಏನಿದೆ?
ವಿವೋ ಕಂಪನಿ ಬಳಿಕ ಕಳೆದ ವಾರ ತನ್ನ ಬಹು ನಿರೀಕ್ಷಿತ ವಿವೋ ವಿ25 5ಜಿ (Vivo V25 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿತ್ತು. ಇದೀಗ ಈ ಫೋನ್ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಬಂಪರ್ ಡಿಸ್ಕೌಂಟ್ನೊಂದಿಗೆ ಸೇಲ್ ಕಾಣುತ್ತಿದೆ.
ಪ್ರಸಿದ್ಧ ವಿವೋ (Vivo) ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ ವಿವೋ ವೈ 75ಎಸ್ (Vivo Y75s) ಫೋನನ್ನು ರಿಲೀಸ್ ಮಾಡಿದ್ದ ಕಂಪನಿ ಬಳಿಕ ಕಳೆದ ವಾರ ತನ್ನ ಬಹು ನಿರೀಕ್ಷಿತ ವಿವೋ ವಿ25 5ಜಿ (Vivo V25 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿತ್ತು. ಇದೀಗ ಈ ಫೋನ್ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಬಂಪರ್ ಡಿಸ್ಕೌಂಟ್ನೊಂದಿಗೆ ಸೇಲ್ ಕಾಣುತ್ತಿದೆ. ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್, ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾಗಳನ್ನು ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನು ಆಫರ್, ಫೀಚರ್ಗಳಿವೆ ಎಂಬುದನ್ನು ನೋಡೋಣ.
- ವಿವೋ V25 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 8GB RAM + 128GB ಮಾದರಿಗೆ 27,999ರೂ. ಮತ್ತು 12GB RAM + 256GB ಆವೃತ್ತಿಗೆ 31,999ರೂ. ನಿಗದಿ ಮಾಡಲಾಗಿದೆ.
- ಈ ಫೋನನ್ನು ಪ್ರೀ ಆರ್ಡರ್ ಬುಕ್ಕಿಂಗ್ ಮಾಡಿದ ಗ್ರಾಹಕರು ಹೆಚ್ಡಿಎಫ್ಸಿ, ICICI ಬ್ಯಾಂಕ್ ಅಥವಾ SBI ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ 2,000ರೂ. ರಿಯಾಯತಿ ಪಡೆಯಬಹುದು. ಫ್ಲಿಪ್ಕಾರ್ಟ್ನಲ್ಲಿ ನೋ ಕಾಸ್ಟ್ ಇಎಮ್ಐ ಆಯ್ಕೆಯಿದೆ.
- ವಿವೋ V25 ಸ್ಮಾರ್ಟ್‌ಫೋನ್ 1080 x 2404 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
- ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ರನ್ ಆಗಲಿದೆ. ಮೆಮೊರಿ ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ.
- ಈ ಸ್ಮಾರ್ಟ್ಫೋನ್ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 64ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್–ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ.
- ಹಿಂಭಾಗದ ಕ್ಯಾಮೆರಾಗಳು ನೈಟ್ ಮೋಡ್, ಪೋರ್ಟ್ರೇಟ್, ಸೂಪರ್–ಮ್ಯಾಕ್ರೋ, ಹೈ ರೆಸಲ್ಯೂಶನ್, ಪನೋರಮಾ, ಲೈವ್ ಫೋಟೋ, ಸ್ಲೋ ಮೋಷನ್ ಸೇರಿದಂತೆ ನೂತನವಾದ ಆಯ್ಕೆಗಳಿವೆ. 50 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
- ವಿವೋ V25 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. 5G, 4G LTE ಬೆಂಬಲ ಕೂಡ ಪಡೆದುಕೊಂಡಿದೆ.
ಇದನ್ನೂ ಓದಿ