Best Smartphones: 10,000 ರೂ. ಒಳಗೆ ಬೆಸ್ಟ್​ ಫೀಚರ್ಸ್​ನ ಬೊಂಬಾಟ್ ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿ ಗಮನಿಸಿ

Smartphones under 10,000: ಇಂದಿನ ಲೇಖನಲದಲ್ಲಿ ಸಾವಿರಾರು ಬಜೆಟ್ ಸ್ಮಾರ್ಟ್‌ಪೋನ್‌ಗಳಿಂದ ತುಂಬಿರುವ ಈ ಮಾರುಕಟ್ಟೆಯಲ್ಲಿ ನೀವು ಭಾರತದಲ್ಲಿ 10,000 ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಕೆಲವು ಬೆಸ್ಟ್ ಸ್ಮಾರ್ಟ್‌ಫೋನ್‌ಗಳನ್ನು ನಾವು ಪಟ್ಟಿ ಮಾಡಿದ್ದೇವೆ.

Best Smartphones: 10,000 ರೂ. ಒಳಗೆ ಬೆಸ್ಟ್​ ಫೀಚರ್ಸ್​ನ ಬೊಂಬಾಟ್ ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿ ಗಮನಿಸಿ
Smartphones
Follow us
TV9 Web
| Updated By: Vinay Bhat

Updated on: Dec 07, 2021 | 3:20 PM

ಬಹುಪಾಲು ಭಾರತೀಯರು ಒಂದು ಅತ್ಯುತ್ತಮ ಸ್ಮಾರ್ಟ್‌ಫೋನನ್ನು (Smartphone) ಬಜೆಟ್ ಬೆಲೆಯಲ್ಲಿ ಖರೀದಿಸಬೇಕು ಎಂದುಕೊಳ್ಳುತ್ತಾರೆ. ಹಾಗಾಗಿಯೇ, ಭಾರತದಲ್ಲಿ ಬಹುತೇಕ ಎಲ್ಲಾ ಮೊಬೈಲ್ (Mobile) ಕಂಪೆನಿಗಳು ಬಜೆಟ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಮಾರುಕಟ್ಟೆಯು ಅತ್ಯಂತ ಸೂಕ್ಷ್ಮವಾಗಿರುವಂತಹ ಭಾರತದಂತಹ ದೇಶಗಳಲ್ಲಿ ಬೆಲೆಯ ವಿಚಾರವು ಬಹಳಷ್ಟು ಮುಖ್ಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇದರ ಜೊತೆಗೆ ಗ್ರಾಹಕರು ಕ್ಯಾಮೆರಾ (Camera), RAM​, ಬ್ಯಾಟರಿ ಆಧರಿಸಿ ಸ್ಮಾರ್ಟ್​ಫೋನ್​ ಖರೀದಿಸುತ್ತಾರೆ. ಅದರಂತೆ ಸದ್ಯ 10 ಸಾವಿರಕ್ಕಿಂತ (Under 10,000 Smartphone) ಕಡಿಮೆ ಬೆಲೆಗೆ ದೊರಕುವ ಮತ್ತು ಆಕರ್ಷಕ ಫೀಚರ್​​ವುಳ್ಳ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Techno Spark 7: ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದೆ. 2GB RAM ರೂಪಾಂತರವು ಕ್ವಾಡ್-ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಹೊಂದಿದ್ದರೆ, 3GB RAM ರೂಪಾಂತರವು ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ A25 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 7,699 ರೂ. ಆಗಿದೆ.

Realme Narzo 30A: ಈ ಸ್ಮಾರ್ಟ್​ಫೋನ್​ 6.5-ಇಂಚಿನ HD+ ಡಿಸ್​ಪ್ಲೇ ಹೊಂದಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಚಿಪ್‌ಸೆಟ್ ಒಳಗೊಂಡಿದೆ. 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯಲ್ಲಿ ಸಿಗಲಿದೆ. ಡ್ಯುಯಲ್-ಸಿಮ್ ಕಾರ್ಡ್‌ ಬೆಂಬಲಿಸುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 13 ಮೆಗಾಪಿಕ್ಸೆಲ್  ಪ್ರೈಮರಿ  ಕ್ಯಾಮೆರಾವನ್ನು ಇದರಲ್ಲಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 8,999 ರೂ.

Micromax IN 2b: ಭಾರತೀಯ ಮೂಲದ ಮೈಕ್ರೋಮ್ಯಾಕ್ಸ್ IN 2b  ಸ್ಮಾರ್ಟ್​ಫೋನ್​ 10 ಸಾವಿರ ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಫೋನ್ ಆಗಿದೆ. ಇದು 6.25 ಇಂಚಿನ ಡಿಸ್​ಪ್ಲೇ ಹೊಂದಿದ್ದು, 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕರ್ ಪಡೆದುಕೊಂಡಿದೆ. ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್​ನ ಕ್ಯಾಮೆರಾ ಹೊಂದಿದ್ದು, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ನೀಡಲಾಗುದೆ. ಇದರ ಬೆಲೆ ರೂ. 8,499 ರೂ. ಆಗಿದೆ.

ಮೋಟೋರೊಲಾ Moto E7 Plus: ಮೋಟೋರೊಲಾ ಕಂಪನಿಯ ಮೋಟೋ E7 ಪ್ಲಸ್ ಫೋನ್ ಬೆಲೆ ಕೇವಲ 8,999 ರೂ. ಆಗಿದೆ. ಇದು 6.5 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್ಕಂ ಸ್ನಾಪ್ಡ್ರಾಗನ್ 460 SoC ಪ್ರೊಸೆಸರ್​ನಿಂದ ಕೂಡಿದೆ. 8 ಮೆಗಾಫಿಕ್ಸೆಲ್​ ಸೆಲ್ಫೀ ಕ್ಯಾಮೆರಾ, 48 ಮೆಗಾಫಿಕ್ಸೆಲ್​ ಬ್ಯಾಕ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಪವರ್ ಕೂಡ ಇದೆ.

Samsung Galaxy F02s: ಸ್ಯಾಮ್‌ಸಂಗ್‌ನ ಈ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ 6.5 ಇಂಚಿನ HD+ Infinity-V ಡಿಸ್​​ಪ್ಲೇ ಹೊಂದಿದೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 450 SoC ಜೊತೆಗೆ 4GB RAM ಒಳಗೊಂಡಿದೆ, ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ  ನೀಡಲಾಗಿದೆ. ಧೀರ್ಘ ಕಾಲ ಬ್ಯಾಟರಿಯಾಗಿ 6,000mAh ಬ್ಯಾಟರಿಯನ್ನು ನೀಡಲಾಗಿದೆ. ಇದರ ಬೆಲೆ 9,499 ರೂ ಆಗಿದೆ.

Nokia C20 Plus: ನೋಕಿಯಾ ಸಿ 20 ಪ್ಲಸ್ 4,950mAh ಬ್ಯಾಟರಿಯೊಂದಿಗೆ 6.5-ಇಂಚಿನ HD+ ಸ್ಕ್ರೀನ್ ಮತ್ತು ಆಕ್ಟಾ-ಕೋರ್ ಯುನಿಸೋಕ್ SC9863a SoC ಯನ್ನು ಹೊಂದಿದೆ. ಜೊತೆಗೆ 3GB RAM ಆಯ್ಕೆಯಲ್ಲಿ ಸಿಗುತ್ತಿದೆ. 8 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಬೆಲೆ 9,999 ರೂ.

Redmi Note 11T 5G: ಅತ್ಯಂತ ಕಡಿಮೆ ಬೆಲೆಯ 5G ಸ್ಮಾರ್ಟ್​ಫೋನ್ ರೆಡ್ಮಿ ನೋಟ್ 11T ಇಂದು ಫಸ್ಟ್ ಸೇಲ್: ಖರೀದಿಸಬಹುದೇ?

WhatsApp Feature: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಬದಲಾವಣೆ: ನೀವು ಗಮನಿಸಿದ್ರಾ?

(Best mobile phones Looking for a smartphone under 10000 in India Check out this)