ಭಾರತದ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಮೊಬೈಲ್ಗಳ ಬಿಡುಗಡೆ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ 5G ನೆಟ್‌ವರ್ಕ್ ಲಭ್ಯವಾಗಲಿದೆ ಎಂಬ ಕಾರಣಕ್ಕೆ 5G ಸ್ಮಾರ್ಟ್‌ಫೋನ್‌ಗಳು (5G Smartphone) ಕೂಡ ಲಗ್ಗೆಯಿಡುತ್ತಿವೆ. ಕಡಿಮೆ ಎಂದರೂ ವಾರಕ್ಕೆ 2-3 ಫೋನ್ಗಳು ಮಾರುಕಟ್ಟೆಗೆ ಪ್ರವೇಶ ಪಡೆಯುತ್ತವೆ. ಇದರಿಂದ ಖರೀದಿದಾರರಿಗೂ ಯಾವ ಫೋನ್ ಕೊಂಡುಕೊಳ್ಳಬೇಕು ಎಂಬ ಗೊಂದಲ ಮೂಡುವುದು ಸಹಜ. ಅದರಲ್ಲೂ ಹೆಚ್ಚಿನವರು ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಗಳುಳ್ಳ ಫೋನಿನ ಮೇಲೆ ಕಣ್ಣಿಟ್ಟಿರುತ್ತಾರೆ. ನೀವು ಕೂಡ ಸ್ಮಾರ್ಟ್‌ಪೋನ್ ಖರೀದಿಸುವ ಯೋಜನೆಯನ್ನು ಹೊಂದಿದ್ದು, ನಿಮ್ಮ ಬಜೆಟ್ ರೂ. 25,000 (Smartphones under 25,000) ಒಳಗಿನದ್ದಾಗಿದ್ದಲ್ಲಿ ಇಂದಿನ ಲೇಖನದಲ್ಲಿ ಪರಿಶೀಲಿಸಬಹುದು. ಪಟ್ಟಿಯು ಕೆಳಗಿನಂತಿದೆ.
ಐಕ್ಯೂ Z5 ಸ್ಮಾರ್ಟ್‌ಫೋನ್ 6.67-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಒರಿಜಿನ್ ಓಎಸ್ 1.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಐಕ್ಯೂ Z5 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ಆಯ್ಕೆಗಾಗಿ 23,990 ರೂ.ಬೆಲೆಯನ್ನು ಹೊಂದಿದೆ.
ಮೋಟೋರೊಲಾ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್ 6.7-ಇಂಚಿನ ಫುಲ್ ಹೆಚ್‌ಡಿ+ ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 800U 5G SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಟರ್ಬೊಪವರ್ 30 ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಮೊಟೊರೊಲಾ ಎಡ್ಜ್ 20 ಫ್ಯೂಷನ್ ಬೆಲೆ 6GB + 128GB ಸ್ಟೋರೇಜ್ ರೂಪಾಂತರಕ್ಕೆ 21,499ರೂ, ಮತ್ತು 8GB + 128GB ಸ್ಟೋರೇಜ್ ಆಯ್ಕೆಗೆ 22,999 ರೂ. ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M52 ಜನಪ್ರಿಯ ಮಧ್ಯ ಶ್ರೇಣಿಯ ಚಿಪ್‌ಸೆಟ್ ಸ್ನಾಪ್‌ಡ್ರಾಗನ್ 778 SoC ನೊಂದಿಗೆ ಹೊಂದಿದೆ. ಇದು ದೊಡ್ಡ 6.67-ಇಂಚಿನ ಪೂರ್ಣ-HD+ AMOLED ಪರದೆಯನ್ನು ಮತ್ತು ನಯವಾದ ರೂಪ ಹೊಂದಿದೆ. ಹಿಂಭಾಗದಲ್ಲಿ, ಟ್ರಿಪಲ್ ಕ್ಯಾಮೆರಾಗಳಿವೆ ಮತ್ತು ಫೋನ್ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ದೊಡ್ಡ 5,000mAh ಬ್ಯಾಟರಿಯನ್ನು ಹೊಂದಿದೆ. 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಬೆಲೆ 25,999 ರೂ.ಗಳಿಂದ ಪ್ರಾರಂಭವಾಗಲಿದೆ.
ಶವೋಮಿ ಎಂಐ 10i ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. ಜೊತೆಗೆ 5820mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಶಿಯೋಮಿ ಮಿ10i ಸ್ಮಾರ್ಟ್‌ಫೋನ್ 6GB RAM+64GB 20,999ರೂ.ಗಳು ಆಗಿದೆ. 6GB RAM+128GB ಬೆಲೆಯು 21,999ರೂ. ಮತ್ತು 8GB RAM+128GB ವೇರಿಯಂಟ್ ದರವು 23,999 ರೂ. ಆಗಿದೆ.
ರಿಯಲ್‌ಮಿ GT ಮಾಸ್ಟರ್ ಎಡಿಷನ್ 6.43-ಇಂಚಿನ ಪೂರ್ಣ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778 SoC ನಿಂದ ನಿಯಂತ್ರಿಸಲ್ಪಡುತ್ತದೆ. ಆಂಡ್ರಾಯ್ಡ್ 11 ಅನ್ನು ರಿಯಲ್‌ಮಿ ಯುಐ 2.0 ನೊಂದಿಗೆ ಚಾಲನೆ ಮಾಡುತ್ತದೆ. ಹಾಗೆಯೇ 8GB ವರೆಗೆ RAM ಮತ್ತು 256GB ವರೆಗೆ ಸಂಗ್ರಹವನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿದೆ. ಇದು 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 25,999ರೂ.ಆಗಿದೆ.
Vivo Y76 5G: ಬಹುನಿರೀಕ್ಷಿತ ವಿವೋ Y76 5G ಸ್ಮಾರ್ಟ್‌ಫೋನ್ ನ. 23ಕ್ಕೆ ಬಿಡುಗಡೆ: ಇದರಲ್ಲಿದೆ ಸಾಕಷ್ಟು ವಿಶೇಷತೆ
Flipkart: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಹೊಸ ಮೇಳ: ಸ್ಮಾರ್ಟ್‌ಫೋನ್ ಮೇಲಂತು ಬಂಪರ್ ಡಿಸ್ಕೌಂಟ್
(best phones within a budget of Rs 25000 this month caters to different types of users)