Airtel 5G: ಹಳ್ಳಿ ಹಳ್ಳಿಗಳಲ್ಲೂ 5G: ಈಗ ಭಾರತದ 3000 ನಗರಗಳಲ್ಲಿ ಏರ್ಟೆಲ್ 5G ಸೇವೆ ಲಭ್ಯ

|

Updated on: Apr 29, 2023 | 5:01 PM

ಇದೀಗ ಏರ್ಟೆಲ್ ಒಟ್ಟು 3000 ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 5ಜಿ ಲಭ್ಯವಾಗುವಂತೆ ಮಾಡಿದೆ. ಜನರು ತಮ್ಮ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

Airtel 5G: ಹಳ್ಳಿ ಹಳ್ಳಿಗಳಲ್ಲೂ 5G: ಈಗ ಭಾರತದ 3000 ನಗರಗಳಲ್ಲಿ ಏರ್ಟೆಲ್ 5G ಸೇವೆ ಲಭ್ಯ
Airtel 5G
Follow us on

ಭಾರತದಲ್ಲಿ 5ಜಿ (5G) ಯುಗ ಆರಂಭವಾಗಿ ಆರು ತಿಂಗಳುಗಳು ಕಳೆದಿದ್ದು ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ರಿಲಯನ್ಸ್ ಜಿಯೋ (JIO) ಹಾಗೂ ಭಾರ್ತಿ ಏರ್ಟೆಲ್ ಪೈಪೋಟಿಗೆ ಬಿದ್ದಂತೆ ವೇಗವಾಗಿ ಅನೇಕ ನಗರಗಳಲ್ಲಿ 5ಜಿ ಸೇವೆಯನ್ನು ನೀಡುತ್ತಿದೆ. ಇದೀಗ ಏರ್ಟೆಲ್ ಒಟ್ಟು 3000 ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 5ಜಿ ಲಭ್ಯವಾಗುವಂತೆ ಮಾಡಿದೆ. ಕೊಹಿಮಾ, ಇಟಾನಗರ್, ಐಜ್ವಾಲ್, ಗ್ಯಾಂಗ್ಟಾಕ್, ಸಿಲ್ಚಾರ್, ದಿಬ್ರುಗಢ್ ಮತ್ತು ಟಿನ್ಸುಕಿಯಾದಲ್ಲಿ ವಾಸಿಸುವ ಏರ್ಟೆಲ್ (Airtel) ಬಳಕೆದಾರರು ಈಗ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಉಚಿತವಾಗಿ ಬಳಸಬಹುದು ಎಂದು ಕಂಪನಿ ಹೇಳಿದೆ.

ಜನರು ತಮ್ಮ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಈಗಾಗಲೇ ಭಾರ್ತಿ ಏರ್ಟೆಲ್ 5G ಡೇಟಾ ಬಳಕೆ ಮಾಡುವ ಆಫರ್‌ ಲಭ್ಯ ಮಾಡಿದ್ದು, ಗ್ರಾಹಕರು ಈ ಕೊಡುಗೆಯ ಪ್ರಯೋಜನವನ್ನು ಪಡೆಯಬಹುದು. ಈ ಆಫರ್ ನಿಮ್ಮದಾಗಿಸಲು ಚಂದಾದಾರರು 5G ಬೆಂಬಲಿತ ಫೋನ್‌ ಹಾಗೂ 5G ಲಭ್ಯ ಇರುವ ಪ್ರದೇಶದಲ್ಲಿ ಇರಬೇಕು. ಇದು ಎಲ್ಲ ಪ್ರಿಪೇಯ್ಡ್ ಮತ್ತು ಪೋಸ್ಟ್​ಪೇಯ್ಡ್ ಏರ್ಟೆಲ್ ಗ್ರಾಹಕರಿಗೆ ಲಭ್ಯವಿರುತ್ತದೆ. ಏರ್ಟೆಲ್​ನ 239 ರೂ. ಹಾಗೂ ಇದಕ್ಕಿಂತ ಅಧಿಕ ಮೊತ್ತದ ರಿಚಾರ್ಜ್‌ ಮಾಡುವ ಎಲ್ಲ ಬಳಕೆದಾರರು ಈ ಕೊಡುಗೆಯನ್ನು ಪ್ರಯೋಜನವನ್ನು ಪಡೆಯಬಹುದು.

ಪ್ರತಿದಿನ ಅನಿಯಮಿತ 5G ಡೇಟಾವನ್ನು ಪಡೆಯಬಹುದಾದ ಪ್ಯಾಕ್​ಗಳನ್ನು ನೋಡುವುದಾದರೆ ರೂ. 239, ರೂ. 265, ರೂ. 296, ರೂ. 299, ರೂ. 319, ರೂ. 359, ರೂ. 399, ರೂ.455, ರೂ. 479, ರೂ. 489, ರೂ. 499, ರೂ. 509, ರೂ. 519, ರೂ. 549, ರೂ. 666, ರೂ. 699, ರೂ. 719, ರೂ. 779, ರೂ. 839, ರೂ. 999, ರೂ. 1799, ರೂ. 2959 ಯೋಜನೆಗಳು ಲಭ್ಯವಿದೆ.

ಇದನ್ನೂ ಓದಿ
ANI Twitter Block: ಎಎನ್​​​ಐ ಟ್ವಿಟರ್ ಖಾತೆ ಬ್ಲಾಕ್: ಟ್ವಿಟರ್​ ಕೊಟ್ಟ ಕಾರಣ ಹೀಗಿದೆ
Galaxy S21 FE: ಧಮಾಕ ಆಫರ್: 74,999 ರೂ. ಇರುವ ಗ್ಯಾಲಕ್ಸಿ S21 FE 5G ಸ್ಮಾರ್ಟ್​ಫೋನನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ
Tech Tips: ಬಿಸಿಲ ಬೇಗೆಗೆ ಬಾಂಬ್​ನಂತೆ ಸಿಡಿಯುತ್ತಿದೆ ಮೊಬೈಲ್​ಗಳು: ನಿರ್ಲಕ್ಷಿಸದೆ ಸ್ಮಾರ್ಟ್​ಫೋನನ್ನು ಹೀಗೆ ಮಾಡಿ
Infinix Smart 7 HD: ಭಾರತದಲ್ಲಿ ಕೇವಲ 5,999 ರೂ. ಗೆ ಹೊಸ ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ

WhatsApp Tricks: ವಾಟ್ಸ್​ಆ್ಯಪ್​ನಲ್ಲಿರುವ ಈ 3 ಟ್ರಿಕ್​ಗಳ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ: ಇಲ್ಲಿದೆ ನೋಡಿ

ಏರ್ಟೆಲ್ 4G ಗೆ ಹೋಲಿಸಿದರೆ 30 ಪಟ್ಟು ಹೆಚ್ಚಿನ ವೇಗವನ್ನು 5G ನೀಡುತ್ತದೆ ಎಂದು ಕಂಪನಿ ಹೇಳಿದೆ. 5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, ಶತಕೋಟಿ ಡಿವೈಸ್​ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ. ಜಿಯೋ 5G ಗಿಂತ ಭಿನ್ನವಾಗಿ ಏರ್ಟೆಲ್ ತನ್ನ 5G ಸೇವೆಗಳನ್ನು ಎಲ್ಲರಿಗೂ ನೀಡುತ್ತದೆ. ಆದ್ದರಿಂದ, ಬಳಕೆದಾರರು ಕನಿಷ್ಟ ರೀಚಾರ್ಜ್ ಯೋಜನೆಯನ್ನು ಪಡೆಯಬೇಕಾಗಿಲ್ಲ. ಬದಲಾಗಿ, ಏರ್‌ಟೆಲ್ 5G ಈಗಿರುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ನಿಮ್ಮಲ್ಲಿ ಹಳೆಯ ಸ್ಮಾರ್ಟ್​ಫೋನ್​ಗಳಿದ್ದರೆ ಹೊಸ 5ಜಿ ಫೋನನ್ನು ಖರೀದಿಸುವಂತೆ ಏರ್ಟೆಲ್ ಬಳಕೆದಾರರ ಬಳಿ ಮನವಿ ಮಾಡಿದೆ. ಮುಖ್ಯವಾದ ಅಂಶ ಎಂದರೆ ನಿಮ್ಮ ಮೊಬೈಲ್​ನಲ್ಲಿ ಈಗಿರುವ ಏರ್ಟೆಲ್ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್​ನ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್​ಫೋನ್​ನಲ್ಲಿ ನೆಟ್​ವರ್ಕ್​ ಸೆಟ್ಟಿಂಗ್​ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Sat, 29 April 23