AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix Smart 7 HD: ಭಾರತದಲ್ಲಿ ಕೇವಲ 5,999 ರೂ. ಗೆ ಹೊಸ ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ

ಇನ್ಫಿನಿಕ್ಸ್‌ ಸಂಸ್ಥೆ ಇದೀಗ ಭಾರತದಲ್ಲಿ ಹೊಸದಾಗಿ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಹೆಚ್​ಡಿ (Infinix Smart 7 HD) ಸ್ಮಾರ್ಟ್‌ಫೋನ್‌ ಅನ್ನು ರಿಲೀಸ್ ಮಾಡಿದೆ. ಈ ಫೋನಿನ ವಿಶೇಷತೆ ಏನು? ಬೆಲೆ ಎಷ್ಟು? ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Infinix Smart 7 HD: ಭಾರತದಲ್ಲಿ ಕೇವಲ 5,999 ರೂ. ಗೆ ಹೊಸ ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
Infinix Smart 7 HD
Vinay Bhat
|

Updated on:Apr 28, 2023 | 3:51 PM

Share

ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಫೋನುಗಳಿಗೆ (Budget Smartphone) ಎಲ್ಲಿಲ್ಲದ ಬೇಡಿಕೆ. ಕಳೆದ ವರ್ಷ 15,000, 10,000 ರೂ. ಗೆ ಆಕರ್ಷಕ ಫೀಚರ್​ಗಳ ಫೋನ್​ಗಳು ಬಿಡುಗಡೆ ಆಗುತ್ತಿದ್ದರೆ ಈ ವರ್ಷ ಇನ್ನಷ್ಟು ಕಡಿಮೆ ದರಕ್ಕೆ ಮೊಬೈಲ್ ಲಾಂಚ್ ಆಗುತ್ತಿದೆ. ಈ ರೀತಿಯ ಫೋನ್​ಗಳನ್ನು ಬಿಡುಗಡೆ ಮಾಡುವುದರಲ್ಲಿ ಇನ್ಫಿನಿಕ್ಸ್ (Infinix) ಎತ್ತಿದ ಕೈ. ಈಗಾಗಲೇ ಬಜೆಟ್ ಬೆಲೆಗೆ ಅನೇಕ ಆಕರ್ಷಕ ಫೋನ್​ಗಳನ್ನು ಅನಾವರಣ ಮಾಡಿ ಯಶಸ್ಸು ಕಂಡಿರುವ ಸಂಸ್ಥೆ ಇದೀಗ ಭಾರತದಲ್ಲಿ ಹೊಸದಾಗಿ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಹೆಚ್​ಡಿ (Infinix Smart 7 HD) ಸ್ಮಾರ್ಟ್‌ಫೋನ್‌ ಅನ್ನು ರಿಲೀಸ್ ಮಾಡಿದೆ. ಈ ಫೋನಿನ ವಿಶೇಷತೆ ಏನು? ಬೆಲೆ ಎಷ್ಟು? ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?

ಇನ್ಫಿನಿಕ್ಸ್‌ ಸ್ಮಾರ್ಟ್‌ 7 HD ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಭಾರತದಲ್ಲಿ ಒಂದು ಸ್ಟೋರೆಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 2GB RAM + 64GB ಇಂಟರ್‌ ಸ್ಟೋರೇಜ್‌ ಮಾದರಿಗೆ ಕೇವಲ 5,999 ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಮುಂದಿನ ತಿಂಗಳು ಮೇ 4 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ. ಇಂಕ್ ಬ್ಲಾಕ್, ಜೇಡ್ ವೈಟ್ ಮತ್ತು ಸಿಲ್ಕ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಪ್​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಕ್ಯಾಶ್​ಬ್ಯಾಕ್ ಆಫರ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ
Image
WhatsApp Tricks: ವಾಟ್ಸ್​ಆ್ಯಪ್​ನಲ್ಲಿರುವ ಈ 3 ಟ್ರಿಕ್​ಗಳ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ: ಇಲ್ಲಿದೆ ನೋಡಿ
Image
Tecno Spark 10 4G: ಮಾರುಕಟ್ಟೆಗೆ ಎಂಟ್ರಿಕೊಟ್ಟ ಟೆಕ್ನೋ ಸ್ಪಾರ್ಕ್‌ 10 ಸ್ಮಾರ್ಟ್​ಫೋನ್: ಇದು ಬಜೆಟ್ ಬೆಲೆಯ ಬಂಪರ್ ಫೋನ್
Image
Mobile Blast: ಮನಕಲಕುವ ಘಟನೆ: ರೆಡ್ಮಿ ಸ್ಮಾರ್ಟ್​ಫೋನ್​ ಸ್ಪೋಟಗೊಂಡು 8 ವರ್ಷದ ಬಾಲಕಿ ದುರ್ಮರಣ: ಎಚ್ಚರ ವಹಿಸಿ
Image
Vivo X90 Pro: 120W ಫಾಸ್ಟ್ ಚಾರ್ಜರ್, ಅದ್ಭುತ ಕ್ಯಾಮೆರಾ: ಸದ್ದಿಲ್ಲದೆ ವಿವೋದಿಂದ ಎರಡು ಹೊಸ ಸ್ಮಾರ್ಟ್​ಫೋನ್ ಬಿಡುಗಡೆ

Vivo Y78+ 5G: ಮಾರುಕಟ್ಟೆಗೆ ಎಂಟ್ರಿಕೊಟ್ಟ ವಿವೊ Y78+ 5G ಸ್ಮಾರ್ಟ್‌ಫೋನ್‌: ಏನು ವಿಶೇಷತೆ?, ಬೆಲೆ ಎಷ್ಟು?

ಏನಿದೆ ಫೀಚರ್ಸ್?:

ಇನ್ಫಿನಿಕ್ಸ್‌ ಸ್ಮಾರ್ಟ್‌ 7 HD ಫೋನ್ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್ HD + ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್​ರೇಟ್ ಅನ್ನು ಒಳಗೊಂಡಿದೆ. 120Hz ಟಚಿಂಗ್ ಸ್ಯಾಂಪಲ್ ರೇಟ್ ಇದೆ. ಆಕ್ಟಾ-ಕೋರ್ ಯುನಿಸಾಕ್ SC9863A1 ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ XOS 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಡ್ಯುಯಲ್ AI ಡ್ಯುಯೆಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದೆ. ಜೊತೆಗೆ ಡಬಲ್ LED ಫ್ಲ್ಯಾಷ್‌ ಒಳಗೊಂಡಿದೆ. ಇದು ಬ್ಯೂಟಿ ಮತ್ತು ಪೋರ್ಟ್ರೇಟ್‌ ನಂತಹ ವಿಭಿನ್ನ ಮೋಡ್‌ಗಳನ್ನು ಹೊಂದಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಇದುಕೂಡ LED ಫ್ಲ್ಯಾಷ್​ನಿಂದ ಕೂಡಿದೆ.

ಇನ್ಫಿನಿಕ್ಸ್‌ ಸ್ಮಾರ್ಟ್‌ 7 HD ಸ್ಮಾರ್ಟ್‌ಫೋನ್​ನ ಮತ್ತೊಂದು ಪ್ರಮುಖ ಹೈಲೇಟ್ ಬ್ಯಾಟರ್ ಆಗಿದ್ದು, ಇದು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಎಷ್ಟು ವೋಲ್ಟ್​ ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ ಎಂಬುದು ತಿಳಿದುಬಂದಿಲ್ಲ. ಈ ಬ್ಯಾಟರಿಯನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 30 ದಿನಗಳ ಸ್ಟ್ಯಾಂಡ್​ ಬೈ ಟೈಮ್ ನೀಡಲಿದ್ದು, 50 ಗಂಟೆಗಳ ಕಾಲ ಬ್ಯೂಸಿಕ್ ಪ್ಲೇಬ್ಯಾಕ್ ಸಮಯ ಮತ್ತು 39 ಗಂಟೆಗಳ ಕಾಲ ಕರೆಯಲ್ಲಿ ಮಾತನಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಹಾಟ್‌ಸ್ಪಾಟ್‌, ಬ್ಲೂಟೂತ್‌ 4.2, GPS ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Fri, 28 April 23

ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ