Galaxy S21 FE: ಧಮಾಕ ಆಫರ್: 74,999 ರೂ. ಇರುವ ಗ್ಯಾಲಕ್ಸಿ S21 FE 5G ಸ್ಮಾರ್ಟ್​ಫೋನನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ

ಗ್ಯಾಲಕ್ಸಿ S21 FE 5G ಫೋನ್​ನ ಮೂಲಬೆಲೆ 74,999 ರೂ. ಆಗಿದೆ. ಆದರೆ, ಪ್ರಸ್ತುತ ಫ್ಲಿಪ್​ಕಾರ್ಟ್​ನಲ್ಲಿ ಇದನ್ನು ಕೇವಲ 28,749ರೂ. ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್​ಫೋನ್​​ ಮೇಲೆ ಹೆಚ್ಚುವರಿ ಶೇ. 26 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ.

Galaxy S21 FE: ಧಮಾಕ ಆಫರ್: 74,999 ರೂ. ಇರುವ ಗ್ಯಾಲಕ್ಸಿ S21 FE 5G ಸ್ಮಾರ್ಟ್​ಫೋನನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ
Samsung Galaxy S21 FE
Follow us
|

Updated on: Apr 29, 2023 | 3:46 PM

ದಕ್ಷಿಣ ಕೊರಿಯಾದ ಪ್ರಸಿದ್ಧ ಸ್ಯಾಮ್​ಸಂಗ್ (Samsung) ಕಂಪನಿ ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದರೆ ತನ್ನ ಹಳೆಯ ಮೊಬೈಲ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡುತ್ತದೆ. ವಾರಗಳ ಹಿಂದೆಯಷ್ಟೆ ಸ್ಯಾಮ್​ಸಂಗ್ ಅತ್ಯಂತ ಕಡಿಮೆ ಬೆಲೆಗೆ 5G ಫೋನ್ ಗ್ಯಾಲಕ್ಸಿ M13 ಅನ್ನು ಅನಾವರಣ ಮಾಡಿತ್ತು. ಇದರ ಬೆಲೆ ಕೇವಲ 13,490 ರೂ. ಆಗಿದೆ. ಇದರ ಬೆನ್ನಲ್ಲೆ ಕಂಪನಿ ಇದೀಗ ಕಳೆದ ವರ್ಷ ರಿಲೀಸ್ ಮಾಡಿದ ಸ್ಯಾಮ್​ಸಂಗ್ ಗ್ಯಾಲಕ್ಸಿ S21 FE 5G (Samsung Galaxy S21 FE) ಸ್ಮಾರ್ಟ್​ಫೋನ್​​ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿರುವ ಈ ಫೋನನ್ನು ನೀವು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

ಗ್ಯಾಲಕ್ಸಿ S21 FE 5G ಫೋನ್​ನ ಮೂಲಬೆಲೆ 74,999 ರೂ. ಆಗಿದೆ. ಆದರೆ, ಪ್ರಸ್ತುತ ಫ್ಲಿಪ್​ಕಾರ್ಟ್​ನಲ್ಲಿ ಇದನ್ನು ಕೇವಲ 28,749ರೂ. ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್​ಫೋನ್​​ ಮೇಲೆ ಹೆಚ್ಚುವರಿ ಶೇ. 26 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. 20,000 ರೂ. ಗಳ ರಿಯಾಯಿತಿ ಪಡೆದ ಬಳಿಕ 54,999 ರೂ. ಪಾವತಿಸಿದರೆ ಆಯಿತು.

ಇದರ ಜೊತೆಗೆ ಆಕರ್ಷಕ ಎಕ್ಸ್​ಚೇಂಜ್ ಆಫರ್ ನೀಡಲಾಗಿದೆ. 26250 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಇದೆ. ನಿಮ್ಮಲ್ಲಿರುವ ಫೋನ್ ಯಾವುದೇ ತೊಂದರೆಯಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅಷ್ಟೂ ಮೊತ್ತಕ್ಕೆ ಎಕ್ಸ್​ಚೇಂಜ್ ಆಗಬಹುದು. ಹೀಗಾದಾಗ ಗ್ಯಾಲಕ್ಸಿ S21 FE 5G ಫೋನನ್ನು ನೀವು ಕೇವಲ 28,749 ರೂ. ಗೆ ಖರೀದಿಸಬಹುದು.

ಇದನ್ನೂ ಓದಿ
Image
Tech Tips: ಬಿಸಿಲ ಬೇಗೆಗೆ ಬಾಂಬ್​ನಂತೆ ಸಿಡಿಯುತ್ತಿದೆ ಮೊಬೈಲ್​ಗಳು: ನಿರ್ಲಕ್ಷಿಸದೆ ಸ್ಮಾರ್ಟ್​ಫೋನನ್ನು ಹೀಗೆ ಮಾಡಿ
Image
Infinix Smart 7 HD: ಭಾರತದಲ್ಲಿ ಕೇವಲ 5,999 ರೂ. ಗೆ ಹೊಸ ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
Image
WhatsApp Tricks: ವಾಟ್ಸ್​ಆ್ಯಪ್​ನಲ್ಲಿರುವ ಈ 3 ಟ್ರಿಕ್​ಗಳ ಬಗ್ಗೆ ನಿಮಗೆ ಗೊತ್ತಿರಲು ಸಾಧ್ಯವೇ ಇಲ್ಲ: ಇಲ್ಲಿದೆ ನೋಡಿ
Image
Tecno Spark 10 4G: ಮಾರುಕಟ್ಟೆಗೆ ಎಂಟ್ರಿಕೊಟ್ಟ ಟೆಕ್ನೋ ಸ್ಪಾರ್ಕ್‌ 10 ಸ್ಮಾರ್ಟ್​ಫೋನ್: ಇದು ಬಜೆಟ್ ಬೆಲೆಯ ಬಂಪರ್ ಫೋನ್

Mobile Blast: ಮನಕಲಕುವ ಘಟನೆ: ರೆಡ್ಮಿ ಸ್ಮಾರ್ಟ್​ಫೋನ್​ ಸ್ಪೋಟಗೊಂಡು 8 ವರ್ಷದ ಬಾಲಕಿ ದುರ್ಮರಣ: ಎಚ್ಚರ ವಹಿಸಿ

ಸ್ಯಾಮ್​ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್​ಫೋನ್​​ ಭಾರತದಲ್ಲಿ ಕಳೆದ ವರ್ಷ ಬಿಡುಗಡೆ ಆಗಿತ್ತು. ಈ ಸ್ಮಾರ್ಟ್​ಫೋನ್​​ 2340×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. 5nm Exynos 2100 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಇದು ಒನ್ ಯುಐ 4.0 ಆಧಾರಿತ ಆಂಡ್ರಾಯ್ಡ್ 12 ಔಟ್ ಆಫ್ ದಿ ಬಾಕ್ಸ್ನಲ್ಲಿ ಕಾರ್ಯನಿರ್ವಹಿಸಲಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12MP ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 12MP ಅಲ್ಟ್ರಾವೈಡ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 8MP 3x ಟೆಲಿಫೋಟೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 32MP ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S21 FE 5G ಸ್ಮಾರ್ಟ್​ಫೋನ್​​ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ಸೂಪರ್-ಫಾಸ್ಟ್ ವೈರ್ಡ್ ಫಾಸ್ಟ್ ಚಾರ್ಜಿಂಗ್, 15W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್, GPS/ A-GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.