BlackBerry OS: ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆ ಆಳುತ್ತಿದ್ದ ಈ ಫೋನ್ ನಾಳೆಯಿಂದ ಬಂದ್

| Updated By: Vinay Bhat

Updated on: Jan 03, 2022 | 2:02 PM

ಜನವರಿ 4 ರಿಂದ BlackBerry 7.1 OS ಮತ್ತು ಹಿಂದಿನ, BlackBerry 10 ಸಾಫ್ಟ್‌ವೇರ್, BlackBerry PlayBook OS 2.1 ಮತ್ತು ಹಿಂದಿನ ಆವೃತ್ತಿಗಳನ್ನು ಆಧರಿಸಿದ ಸಾಧನಗಳು ಇನ್ನು ಮುಂದೆ "ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಲು" ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

BlackBerry OS: ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆ ಆಳುತ್ತಿದ್ದ ಈ ಫೋನ್ ನಾಳೆಯಿಂದ ಬಂದ್
BlackBerry
Follow us on

ಒಂದು ಕಾಲದಲ್ಲಿ ಆ್ಯಪಲ್ ಐಫೋನ್ (Apple iPhone) ರೇಂಜ್​ಗೆ ಖ್ಯಾತಿ ಪಡೆದುಕೊಂಡಿದ್ದ ಬ್ಲ್ಯಾಕ್‌ಬೆರಿ ಮೊಬೈಲ್​ ಇಂದು ಆಂಡ್ರಾಯ್ಡ್ (Android), ಆ್ಯಪಲ್ ಫೋನ್​ಗಳ ಅಲೆಗೆ ಅಪ್ಪಳಿಸಿ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. 2000 ದಶಕದ ಆರಂಭದಲ್ಲಿ ಬ್ಲ್ಯಾಕ್‌ಬೆರಿ (BlackBerry) ಸ್ಮಾರ್ಟ್‌ಫೋನ್‌ಗಳ ಜನರ ಬೇಡಿಕೆಯ ಮೂಲಕ ಮಾರುಕಟ್ಟೆಯಲ್ಲಿ (Market) ತನ್ನದೇ ಆದ ಸ್ಥಾನ ಪಡೆದಿತ್ತು. ಆದರೆ ಆ ಬಳಿಕ ಮಾರುಕಟ್ಟೆ ಪೈಪೋಟಿ ಮತ್ತು ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್​ಗಳ (Smartphone) ಎದುರು ಬ್ಲ್ಯಾಕ್‌ಬೆರಿ ಹಿಂದೆ ಉಳಿಯಿತು. ಇದೀಗ ಬ್ಲ್ಯಾಕ್‌ಬೆರಿ ಕಂಪನಿ ತನ್ನಪ್ರಮುಖ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬ್ಯಾಕ್‌ಬೆರಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳು ಜನವರಿ 4 ರಿಂದ ಒದಗಿಸುವ ಸೇವೆಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದೆ.

ಜನವರಿ 4 ರಿಂದ BlackBerry 7.1 OS ಮತ್ತು ಹಿಂದಿನ, BlackBerry 10 ಸಾಫ್ಟ್‌ವೇರ್, BlackBerry PlayBook OS 2.1 ಮತ್ತು ಹಿಂದಿನ ಆವೃತ್ತಿಗಳನ್ನು ಆಧರಿಸಿದ ಸಾಧನಗಳು ಇನ್ನು ಮುಂದೆ “ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಲು” ಸಾಧ್ಯವಾಗುವುದಿಲ್ಲ ಎಂದು ಕಂಪನಿಯು ತನ್ನ ವೆಬ್‌ಸೈಟ್‌ ಟಿಪ್ಪಣಿಯಲ್ಲಿ ತಿಳಿಸಿದೆ. ಇದರರ್ಥ ಸೆಲ್ಯುಲಾರ್ ಅಥವಾ ವೈ-ಫೈ ಸಂಪರ್ಕದಲ್ಲಿರುವ ಬ್ಲ್ಯಾಕ್‌ಬೆರಿ ಫೋನ್‌ಗಳು ಡೇಟಾ ಬಳಕೆ ಅನುಮತಿಸಲು, ಫೋನ್ ಕರೆಗಳನ್ನು ಮಾಡಲು, ಪಠ್ಯ ಸಂದೇಶಗಳನ್ನು ಕಳುಹಿಸಲು ಮತ್ತು ತುರ್ತು 911 ಕಾರ್ಯವನ್ನು ಸಹ ಅನುಮತಿಸುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಆದರೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಬ್ಲ್ಯಾಕ್‌ಬೆರಿ ಫೋನ್‌ಗಳಿಗೆ ಈ ಅಪ್‌ಡೇಟ್ ಅನ್ವಯಿಸುವುದಿಲ್ಲ.

ನಾಳೆಯಿಂದ ಈ ಫೋನ್‌ಗಳಿಂದ ವಾಯಿಸ್ ಕರೆಗಳನ್ನು ಮಾಡಲು ಮತ್ತು ಡೇಟಾ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಫೋನ್‌ನಲ್ಲಿ ಎಸ್‌ಎಂಎಸ್ ಮತ್ತು ತುರ್ತು ಸೇವೆಗಳ ಬಳಕೆ ಕೂಡ ಸಾಧ್ಯವಾಗುವುದಿಲ್ಲ. ಹಾಗೆಯೇ ವೈ-ಫೈ ಸಂಪರ್ಕದ ಮೂಲಕ ಡೇಟಾ ಬಳಕೆ ಸಾಧ್ಯತೆಗಳ ಬಗ್ಗೆಯು ಗ್ಯಾರಂಟಿ ಇಲ್ಲ ಎನ್ನಲಾಗಿದೆ. ಬ್ಲ್ಯಾಕ್‌ಬೆರಿ ಕಂಪನಿಯು ಈ ಬಗ್ಗೆ ಕಳೆದ ಸೆಪ್ಟೆಂಬರ್ 2020 ರಲ್ಲಿ ಘೋಷಿಸಿತು. ಬ್ಲ್ಯಾಕ್‌ಬೆರಿ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಂಪನಿಯು ವಿಶ್ವದಾದ್ಯಂತ ಉದ್ಯಮಗಳು ಮತ್ತು ಸರ್ಕಾರಗಳಿಗೆ ಭದ್ರತಾ ಸಾಫ್ಟ್‌ವೇರ್ ಮತ್ತು ಸೇವೆಗಳನ್ನು ಒದಗಿಸುವತ್ತ ಹೆಚ್ಚಿನ ಒಲವು ಹರಿಸಲು ಉದ್ದೇಶಿಸಿದೆ.

ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್ ಜಗತ್ತನ್ನು ಬದಲಾಯಿಸಿದವು. ಐಫೋನ್‌ನ ಪರಿಚಯದ ನಂತರ, ಬ್ಲ್ಯಾಕ್‌ಬೆರಿ ಮಾರುಕಟ್ಟೆ ಮೌಲ್ಯವು ಗಮನಾರ್ಹವಾಗಿ ಕುಸಿಯಿತು ಮತ್ತು ಅಂತಿಮವಾಗಿ ಕಂಪನಿಯು ಅದರ ಪ್ರಸ್ತುತತೆಯನ್ನು ಕಳೆದುಕೊಂಡಿತು. ಸ್ಯಾಮ್‌ಸಂಗ್ ಮತ್ತು ಇತರ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಉಳಿಯಲು ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳಿಗೆ ಬದಲಾಯಿಸಿದಾಗ, ಬ್ಲ್ಯಾಕ್‌ಬೆರಿ ತನ್ನ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮುಂದುವರಿಸಲು ನಿರ್ಧರಿಸಿತು ಮತ್ತು ಆ ಹೊತ್ತಿಗೆ ಹಿಂತಿರುಗಲು ತುಂಬಾ ತಡವಾಗಿತ್ತು. ಆದರೆ ಇದೀಗ ಜನವರಿ 4 ರಿಂದ ಕೆಲವು ಮಾಡೆಲ್​ಗಳನ್ನು ಬ್ಲಾಕ್​ಬೆರಿ ಕೊನೆಗೊಳಿಸುತ್ತಿದೆ.

ಕೆನಡಾದ ವಾಟರ್ಲೂನ ಒಂಟಾರಿಯೊನಲ್ಲಿ ಬ್ಲ್ಯಾಕ್‌ಬೆರಿ  ಪ್ರಧಾನ ಕಛೇರಿಯಿದ್ದು ಕಂಪನಿಯು ಆಕರ್ಷಣೆಯನ್ನು ಮರಳಿ ಪಡೆಯಲು ಶ್ರಮಿಸಿತ್ತು. ಆದರೆ 2013 ರಲ್ಲಿ, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರನ್ನು ಆಕರ್ಷಿಸಲು ಬ್ಲ್ಯಾಕ್‌ಬೆರಿ ಓಎಸ್‌ನ ಬದಲಿಯಾಗಿ ಬ್ಲ್ಯಾಕ್‌ಬೆರಿ 10 ಅನ್ನು ತಂದಿತು. ಕಂಪನಿಯು ಅಂತಿಮವಾಗಿ 2015 ರಲ್ಲಿ ಆಂಡ್ರಾಯ್ಡ್‌ಗೆ ಸ್ಥಳಾಂತರಗೊಂಡಿತು. ಇದಲ್ಲದೆ ಆಪಲ್ ಮತ್ತು ಸ್ಯಾಮ್‌ಸಂಗ್‌ನ ಫ್ಲ್ಯಾಗ್‌ಶಿಪ್‌ಗಳ ಜತೆ  ಸ್ಪರ್ಧಿಸಲು ಬ್ಲ್ಯಾಕ್‌ಬೆರಿ ಪ್ರೈವ್ (BlackBerry Priv) ಅನ್ನು ಹೊಸ ಸ್ಲೈಡರ್ ಫೋನ್‌ನಂತೆ ತಂದಿತು. ಆದಾಗ್ಯೂ, ಅದೆಲ್ಲವೂ ಯಾವುದೇ ಯಶಸ್ಸನ್ನು ಗಳಿಸಲು ಸಹಾಯ ಮಾಡಲಿಲ್ಲ.

Jio vs Airtel vs Vi: ಹೊಸ ವರ್ಷದ ಬಂಪರ್ ಆಫರ್: ಇಷ್ಟು ರೂ ರಿಚಾರ್ಜ್ ಮಾಡಿದ್ರೆ ಬಳಿಕ 2023 ವರೆಗೆ ನೋ ಟೆನ್ಶನ್

(BlackBerry OS BlackBerry has announced that it will discontinue significant services for its existing devices)