AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

boAt Lunar Connect Pro: ಸ್ಟೈಲಿಶ್ ಜತೆಗೆ ಸ್ಮಾರ್ಟ್ ವಾಚ್ ಪ್ರಿಯರಿಗಾಗಿ ಹೊಸ ಬೋಟ್ ವಾಚ್

boAt Lunar Connect Pro: ಸ್ಟೈಲಿಶ್ ಜತೆಗೆ ಸ್ಮಾರ್ಟ್ ವಾಚ್ ಪ್ರಿಯರಿಗಾಗಿ ಹೊಸ ಬೋಟ್ ವಾಚ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Apr 02, 2023 | 10:00 AM

Share

ಬೋಟ್ ಕಂಪನಿ ವೃತ್ತಾಕಾರದ ಸ್ಟೈಲಿಶ್ ವಿನ್ಯಾಸದಲ್ಲಿ ಆಕರ್ಷಕ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ. ಬೋಟ್ ಲೂನಾರ್ ಕನೆಕ್ಟ್ ಪ್ರೊ ಮತ್ತು ಲೂನಾರ್ ಕಾಲ್ ಪ್ರೊ ಎಂಬ ಎರಡು ನೂತನ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ನೂತನ ಸ್ಮಾರ್ಟ್​ವಾಚ್ ಲೂನಾರ್ ಕನೆಕ್ಟ್ ಪ್ರೊ ವೈಶಿಷ್ಟ್ಯಗಳು ಮತ್ತು ಬೆಲೆ ವಿವರ ಇಲ್ಲಿದೆ.

ಯುವಜನತೆಗೆ ಸ್ಮಾರ್ಟ್ ಮತ್ತು ಸ್ಟೈಲಿಶ್ ಎಂದು ಕರೆಸಿಕೊಳ್ಳುವುದೆಂದರೆ ಹೆಚ್ಚು ಇಷ್ಟ. ಅದಕ್ಕಾಗಿ ವಿವಿಧ ಫ್ಯಾಶನ್ ಟ್ರೆಂಡ್​ಗಳ ಮೊರೆ ಹೋಗುವ ಯುವಜನತೆಗೆ ಈಗ ಹೆಚ್ಚು ಲೈಕ್ ನೀಡುವುದು ಎಂದರೆ ಅದು ಸ್ಮಾರ್ಟ್​ವಾಚ್. ಬಗೆಬಗೆಯ ವಿನ್ಯಾಸ ಮತ್ತು ಆಕರ್ಷಕ ಮಾದರಿಗಳು ಸ್ಮಾರ್ಟ್​ವಾಚ್​ನಲ್ಲಿ ಲಭ್ಯವಿದೆ. ಬೋಟ್ ಕಂಪನಿ ವೃತ್ತಾಕಾರದ ಸ್ಟೈಲಿಶ್ ವಿನ್ಯಾಸದಲ್ಲಿ ಆಕರ್ಷಕ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ. ಬೋಟ್ ಲೂನಾರ್ ಕನೆಕ್ಟ್ ಪ್ರೊ ಮತ್ತು ಲೂನಾರ್ ಕಾಲ್ ಪ್ರೊ ಎಂಬ ಎರಡು ನೂತನ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ನೂತನ ಸ್ಮಾರ್ಟ್​ವಾಚ್ ಲೂನಾರ್ ಕನೆಕ್ಟ್ ಪ್ರೊ ವೈಶಿಷ್ಟ್ಯಗಳು ಮತ್ತು ಬೆಲೆ ವಿವರ ಇಲ್ಲಿದೆ. ಬೋಟ್ ನೂತನ ಸ್ಮಾರ್ಟ್​ವಾಚ್ ಲೂನಾರ್ ಕನೆಕ್ಟ್ ಪ್ರೊ ಬಿಡುಗಡೆಯಾಗಿದ್ದು, ಅದರಲ್ಲಿ 1.39 ಇಂಚಿನ ವೃತ್ತಾಕಾರದ ಡಯಲ್ ವಿನ್ಯಾಸ ಹೊಂದಿದೆ. ಬೋಟ್ ಸ್ಮಾರ್ಟ್​​ವಾಚ್ 15 ದಿನಗಳ ಬ್ಯಾಟರಿ ಬಾಳಿಕೆಯ ಭರವಸೆ ನೀಡಿದೆ. ₹10,999 ಎಂಆರ್​ಪಿ ದರವಿದ್ದು, ಆಫರ್​ನಲ್ಲಿ ₹3,499ಕ್ಕೆ ಲಭ್ಯವಿದೆ. ಜತೆಗೆ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಹೊಂದಿದೆ ಬೋಟ್ ಸ್ಮಾರ್ಟ್​​ವಾಚ್.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.